ತೀರ್ಥಹಳ್ಳಿಗೆ ಕನ್ನಡ ರಥ: ಗಣ್ಯರ ಸ್ವಾಗತ!
– ಕರ್ನಾಟಕ ಹೆಸರು ನಾಮಕರಣಕ್ಕೆ 50 ವರ್ಷದ ಸಂಭ್ರಮ
ತೀರ್ಥಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ಗುದ್ದಲಿ ಪೂಜೆ
– ಶೀಘ್ರದಲ್ಲಿ ಶುರುವಾಗುತ್ತೆ ಇಂದಿರಾ ಕ್ಯಾಂಟೀನ್: ಕಡಿಮೆ ದರದಲ್ಲಿ ಊಟ, ತಿಂಡಿ
NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ಹೆಸರು ನಾಮಕರಣಗೊಂಡು 50 ವರ್ಷಗಳು ಕಳೆದ ಹಿನ್ನಲೆಯಲ್ಲಿ ಕಳೆದ ವರ್ಷ ಹೊರಟ ಕನ್ನಡದ ರಥ ಭಾನುವಾರ ಹೊಸನಗರ ತಾಲ್ಲೂಕಿನಿಂದ ತೀರ್ಥಹಳ್ಳಿ ಪಟ್ಟಣ ತಲುಪಿತು.
ಈ ಸಂದರ್ಭದಲ್ಲಿ ಶಾಸಕ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಕನ್ನಡದ ರಥವನ್ನು ಬರಮಾಡಿಕೊಂಡರು ನಂತರ ತೀರ್ಥಹಳ್ಳಿ, ಪಟ್ಟಣದಲ್ಲಿ ಮೆರವಣಿಗೆ ನಡೆಸಿ ನಂತರ ಕನ್ನಡದ ರಥವನ್ನು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ತಾಲೂಕಿನ ಮುಖ್ಯ ದಂಡಾಧಿಕಾರಿ ಜಕ್ಕಣ್ಣ ಗೌಡರ್, ಶಾಸಕ ಅರಗ ಜ್ಞಾನೇಂದ್ರ, ತೀರ್ಥಳ್ಳಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ, ಕೆ. ರಮೇಶ್ ಶೆಟ್ಟಿ, ಸಂದೇಶ್ ಜವಳಿ, ಧರ್ಮಣ್ಣ, ನಾಗೇಶ್ ಮೇಳಿಗೆ, ಪ್ರಸನ್ನ ತಿರಳೆಬೈಲು, ರವೀಶ್ ಬಾಬಿ ಹಾಗೂ ವಿವಿಧ ಸಂಘ ಸಂಸ್ಥೆಯ ಪ್ರಮುಖರು ಮತ್ತು ಅನೇಕ ಗಣ್ಯರ ಉಪಸ್ಥಿತಿ ಇದ್ದರು.
ತೀರ್ಥಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ಗುದ್ದಲಿ ಪೂಜೆ
ತೀರ್ಥಹಳ್ಳಿ: ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕನಸಿನ ಕೂಸು “ಇಂದಿರಾ ಕ್ಯಾಂಟೀನ್ “ ತೀರ್ಥಹಳ್ಳಿಯಲ್ಲಿ ಆರಂಭಕ್ಕೆ ಗುದ್ದಲಿ ಪೂಜೆ ನಡೆದಿದ್ದು ಅತಿ ಶೀಘ್ರದಲ್ಲಿ ಆರಂಭವಾಗಲಿದೆ. ಮಾಜಿ ಸಚಿವರಾದ ಶ್ರೀಯುತ ಕಿಮ್ಮನೆ ರತ್ನಾಕರ್ ಅವರು 2016ರಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಶಿಕ್ಷಣ ಸಚಿವರಾದ ಸಂದರ್ಭದಲ್ಲಿ ತೀರ್ಥಹಳ್ಳಿಯ ಜನತೆಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುವ “ಇಂದಿರಾ ಕ್ಯಾಂಟೀನ್ “ ಅನ್ನು ಜಾಗ ಗುರುತಿಸಿ ಗುದ್ದಲಿ ಪೂಜೆ ನೆರವೇರಿಸಿದ್ದರು ಆದರೆ ಕಾರಣಾಂತರದಿಂದ ಅದು ಮುಂದುವರಿದಿರಲಿಲ್ಲ. 2023 ಮತ್ತೊಮ್ಮೆ ಜನಪರ ಕಾಂಗ್ರೆಸ್ ಸರ್ಕಾರ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಸುಸಂದರ್ಭದಲ್ಲಿ ತೀರ್ಥಹಳ್ಳಿಗೆ ಇಂದಿರಾ ಕ್ಯಾಂಟೀನ್ ಗೆ ಮತ್ತೊಮ್ಮೆ ಚಾಲನೆ ಸಿಕ್ಕಿದೆ. ಕಿಮ್ಮನೆ ಅವರು ವಿದೇಶದಲ್ಲಿದ್ದು ಗುದ್ದಲಿ ಪೂಜೆಯನ್ನು ಎಂಎಡಿಬಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷರಾದರಹಮತ್ ಉಲ್ಲಾ ಅಸಾದಿ , ಉಪಾಧ್ಯಕ್ಷರಾದ ಗೀತಾ ರಮೇಶ್ ಮತ್ತು ಪಟ್ಟಣ ಪಂಚಾಯತಿ ಸದಸ್ಯರು, ಮುಖಂಡರು ಭಾಗಿಯಾಗಿದ್ದರು.