ಕೋಣಂದೂರು ಎನ್. ಇ. ಎಸ್ ಕಾಲೇಜಲ್ಲಿ ವಾರ್ಷಿಕೋತ್ಸವದ ರಂಗು!
– ಡಿವೈಎಸ್ಪಿ ವಾಮನ ಸುತಾರ ಅವರ ಸ್ಫೂರ್ತಿದಾಯಕ ಮಾತು
– ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲೆಯ ವೈಭವಕ್ಕೆ ಮನಸೋತ ಜನ!
– ಮೇಗರವಳ್ಳಿಯ ಸರ್ಕಾರಿ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ
ವರದಿ: ಉಮೇಶ್ ದೇಮ್ಲಾಪುರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕೋಣಂದೂರು ರಾಷ್ಟ್ರೀಯ ಪದವಿ ಪೂರ್ವ ಕಾಲೇಜಲ್ಲಿ ಇತ್ತೀಚಿಗೆ ವಿದ್ಯಾರ್ಥಿ ಸಂಘದ ಸಮಾರೋಪ ಮತ್ತು ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಜನರ ಸಮ್ಮುಖದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಸಮಾರೋಪ ಭಾಷಣವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಶಿವಮೊಗ್ಗ ಇದರ ಅಧ್ಯಕ್ಷರಾದ ಜಿ.ಎನ್. ನಾರಾಯಣರಾವ್ ಅವರು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಮಹಾಂತೇಶ್ ಗೌಡ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತೀರ್ಥಹಳ್ಳಿ ಪೊಲೀಸ್ ಉಪ ಅಧೀಕ್ಷಕರಾದ ಗಜಾನನ ವಾಮನ ಸುತಾರ ಅವರು ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ,
ವಿದ್ಯಾರ್ಥಿಗಳ ಜೀವನ ಅತ್ಯಮೂಲ್ಯ. ಇತ್ತೀಚೆಗೆ ನಡೆಯುವ ವಂಚನೆಗಳಿಂದ ದೂರವಾಗಿರಿ. ಅದಷ್ಟು ಮೊಬೈಲ್ ಬಳಕೆ ಕಡಿಮೆಗೊಳಿಸಿ ಎಂದು ಹೇಳುವ ಮೂಲಕ ಮಕ್ಕಳಿಗೆ ತಂದೆ ತಾಯಿಯರ ಮೇಲೆ ಕಾಳಜಿ ಇರಲಿ ಎಂದು ಸೂಚನೆ ನೀಡಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲೆಯ ವೈಭವ ಮೆರೆದರು.ವಿವಿಧ ಪ್ರಕಾರಗಳ ನೃತ್ಯ ಕಲಾ ವೈಭವವು ಸಾರ್ವಜನಿಕರ ಕಣ್ಣಿಗೆ ಹಬ್ಬವನ್ನುಂಟು ಮಾಡಿತು. ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರು ಹೆಚ್.ಜಿ.ಗಿರಿರಾಜ್ , ಲಕ್ಷ್ಮೀ ಕನ್ಸ್ಟ್ರಕ್ಷನ್ಸ್ ಕೋಣಂದೂರು ಮಾಲೀಕರಾದ ಸದಾಶಿವ ಕೆ.ಆರ್., ನಿಕಟಪೂರ್ವ ಪ್ರಾಚಾರ್ಯರು ಕೆ.ಎಂ ಲಕ್ಷ್ಮಣ್, ಉಪಪ್ರಾಚಾರ್ಯರು ರಾಷ್ಟ್ರೀಯ ಪ್ರೌಢಶಾಲೆ ಕೋಣಂದೂರು ಕೆ.ಬಿ ಪ್ರಕಾಶ್ , ಉಪಾಧ್ಯಕ್ಷರು ವಿದ್ಯಾರ್ಥಿ ಸಂಘ ಸ್ವಯಂ ಎಂ ಶೆಟ್ಟಿ ಹಾಗೂ ಪ್ರಾಚಾರ್ಯರು, ಉಪನ್ಯಾಸಕರು ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಮೇಗರವಳ್ಳಿಯ ಸರ್ಕಾರಿ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ
ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಹತ್ತು ಹಲವು ಕಾರ್ಯಕ್ರಮದ ಜೊತೆಗೆ “ಚಿಣ್ಣರ ಕಲರವ ಶಾಲಾ ವಾರ್ಷಿಕೋತ್ಸವ” ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜನಮನ ಸೆಳೆಯಿತು. ಕಾರ್ಯಕ್ರಮಕ್ಕೆ ಸಹಕಾರ ಮಾಡಿದ ಸರ್ವರಿಗೂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಹಿರಿಯ ವಿದ್ಯಾರ್ಥಿ ಸಂಘ ಪೋಷಕರು, ಗ್ರಾಮಸ್ಥರು, ದಾನಿಗಳು ಸ.ಹಿ.ಪ್ರಾ.ಶಾಲೆ. ಮೇಗರವಳ್ಳಿ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಗ್ರಾಮ ಪಂಚಾಯಿತಿ, ಮೇಗರವಳ್ಳಿ.
ಮುಖ್ಯೋಪಾಧ್ಯಾಯರು, ಸಹಶಿಕ್ಷಕರು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಸ.ಹಿ.ಪ್ರಾ.ಶಾಲೆ. ಮೇಗರವಳ್ಳಿ ಇವರು ಧನ್ಯವಾದ ಅರ್ಪಿಸಿದ್ದಾರೆ.