ಶಿವಮೊಗ್ಗದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಉತ್ಸಾಹಿ ಸಂಘಟಕ ಪ್ರಶಾಂತ್ ಕುಕ್ಕೆ!
– ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆ
– ಪಕ್ಷ, ಸ್ನೇಹಿತ ವಲಯದಲ್ಲಿ ಹೊಸ ಹುಮ್ಮಸ್ಸು
NAMMUR EXPRESS NEWS
ತೀರ್ಥಹಳ್ಳಿ/ ಶಿವಮೊಗ್ಗ: ತೀರ್ಥಹಳ್ಳಿ ಬಿಜೆಪಿ ಯುವ ನಾಯಕ, ಜನರ ಜತೆ ಸದಾ ಇರುವ ಕುಕ್ಕೆ ಪ್ರಶಾಂತ್ ಅವರಿಗೆ ಮಹತ್ವದ ಹುದ್ದೆ ಸಿಕ್ಕಿರುವುದು ಈಗ ರಾಜಕೀಯವಾಗಿ ಭಾರೀ ಮಹತ್ವ ಪಡೆದುಕೊಂಡಿದೆ. ಶಿವಮೊಗ್ಗದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಉತ್ಸಾಹಿ ಸಂಘಟಕ ಪ್ರಶಾಂತ್ ಕುಕ್ಕೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ ಬೆಳವಣಿಗೆ ಪಕ್ಷ, ಸ್ನೇಹಿತ ವಲಯದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
ಯುವ ಸಂಘಟಕನಿಗೆ ಒಲಿದ ಪ್ರಮುಖ ಹುದ್ದೆ
ವಿದ್ಯಾರ್ಥಿ ಜೀವನದಿಂದಲೇ ಎಬಿವಿಪಿ ಸಂಪರ್ಕದಲ್ಲಿ ಬೆಳೆದು ಬಂದು ಆರ್.ಎಸ್.ಎಸ್ ಸಕ್ರೀಯವಾಗಿ ತೊಡಗಿಸಿಕೊಂಡು ಸಂಘದ ಪ್ರಾಥಮಿಕ ಶಿಕ್ಷಾ ವರ್ಗ ಪೂರೈಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಭಾರತ ಮತ್ತು ನೇಪಾಳ ಗಡಿಯಲ್ಲಿ ಸರಹದ್ದು ಪ್ರಣಾಮ್ ಕಾರ್ಯಕ್ರಮದ ಶಿಬಿರದಲ್ಲಿ 7 ದಿನಗಳ ಕಾಲ ಭಾಗಿಯಾಗಿದ್ದರು. ತೀರ್ಥಹಳ್ಳಿ ಬಿಜೆಪಿ ಯುವ ಮೋರ್ಚಾ ತಾಲೂಕು ಪ್ರದಾನ ಕಾರ್ಯದರ್ಶಿಯಾಗಿ 3.5 ವರ್ಷಗಳ ಯಶಸ್ವಿ ಕಾರ್ಯನಿರ್ವಹಣೆ ಮಾಡಿದ್ದರು. 3 ವರ್ಷಗಳ ಕಾಲ ತೀರ್ಥಹಳ್ಳಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಇಡೀ ತಾಲೂಕಿನ ಯುವ ಜನತೆಗೆ ಬಿಜೆಪಿ ವಿಚಾರಧಾರೆಯನ್ನು ತಲುಪಿಸಿ ಹೊಸ ಯುವ ಜನರನ್ನು ಬಿಜೆಪಿಗೆ ಸೆಳೆಯುವಲ್ಲಿ ಯಶಸ್ವಿ ಉತ್ಸಾಹಿ ಯುವ ಪಡೆಯನ್ನು ಕಟ್ಟಿ ಯಶಸ್ವಿಯಾಗಿ ಮುನ್ನಡೆಸಿ ಇಡೀ ತೀರ್ಥಹಳ್ಳಿಯಲ್ಲಿ ಸದ್ದು ಮಾಡಿದ್ದರು.
4 ವರ್ಷಗಳ ಕಾಲ ಶಿವಮೊಗ್ಗ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿಯಾಗಿ ಸೇವೆ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಓಡಾಟ ಹಲವಾರು ಕಾರ್ಯಕ್ರಮಗಳ ಸಂಘಟನೆ ಮತ್ತು ಆಯೋಜನೆ ಯಶಸ್ವಿ ಕಾರ್ಯನಿರ್ವಹಣೆ ಮಾಡಿದ್ದರು. ಈ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲೂಕು ಪಂಚಾಯಿತಿ ಸದಸ್ಯರಾಗಿ (ಹೊದಲ ಅರಳಾಲಪುರ)ಕ್ಷೇತ್ರದಲ್ಲಿ ಜಯ 5 ವರ್ಷಗಳ ಕಾಲ ಯಶಸ್ವಿ ಜನ ಪ್ರತಿನಿಧಿಯಾದರು.
ಪ್ರಸ್ತುತ ತೀರ್ಥಹಳ್ಳಿ ಮಂಡಲ ಬಿಜೆಪಿ ಕಾರ್ಯದರ್ಶಿಯಾಗಿ 4 ವರ್ಷಗಳ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇಡೀ ತೀರ್ಥಹಳ್ಳಿ ಯಲ್ಲಿ ಹೆಸರಾಗಿರುವ ಪ್ರಶಾಂತ್ ಕುಕ್ಕೆ ಎಲ್ಲರಿಗೂ ಸಿಗುವ ಎಲ್ಲ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಜನರ ಬವಣೆಯನ್ನು ಅರಿತು ಪರಿಹಾರ ನಿವಾರಿಸುವ ಓರ್ವ ಸಮರ್ಥ ಯುವ ಮುಂದಾಳು ಇಡೀ ತಾಲೂಕಿನಲ್ಲಿ ಎಲ್ಲರನ್ನು ತಲುಪಿರುವ ವ್ಯಕ್ತಿತ್ವ ಎಂದು ಹೆಸರಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಕಟ್ಟುವ ಸಮರ್ಥ ನಾಯಕನ ಹೆಗಲಿಗೆ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಯುವ ನೇತಾರ ಪ್ರಶಾಂತ್ ಕುಕ್ಕೆ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.