ಸಹಕಾರ ಕ್ಷೇತ್ರಕ್ಕೆ ಕುಕ್ಕೆ ಪ್ರಶಾಂತ್ ಸಖತ್ ಎಂಟ್ರಿ!
– ಕುಡುಮಲ್ಲಿಗೆ ಸೊಸೈಟಿ ಅಧ್ಯಕ್ಷ ಸ್ಥಾನ: ಸಹಕಾರ ಭಾರತಿಗೆ ಜೈ
– ಯುವ ನಾಯಕನ ಮತ್ತೊಂದು ಸಾಧನೆಯ ಪಯಣ
NAMMUR EXPRESS NEWS
ತೀರ್ಥಹಳ್ಳಿ: ಡಿಸೆಂಬರ್ 29ರಂದು ನಡೆದಿದ್ದ ಕುಡುಮಲ್ಲಿಗೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ 10 ಸ್ಥಾನ ಗೆಲ್ಲುವ ಮೂಲಕ ಸಹಕಾರ ಭಾರತಿಗೆ ಮತದಾರರು ಮಣೆ ಹಾಕಿದ್ದರು. ಇದೀಗ ಜನವರಿ 09 2025ರಂದು ಕುಡುಮಲ್ಲಿಗೆ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಯುವ ನಾಯಕ ಮಾಜಿ ತಾಲೂಕು ಪಂಚಾಯತ್ ಸದಸ್ಯ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತನ್ನ ಚತುರತೆ ಹಾಗೂ ಸಂಘಟನಾ ಸಾಮರ್ಥ್ಯದಿಂದ ಇಡೀ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಶಾಂತ್ ಕುಕ್ಕೆ ಅವರು ಅಧ್ಯಕ್ಷರಾಗುವ ಮೂಲಕ ಹೊಸ ಶಕೆ ಆರಂಭಿಸಿದ್ದಾರೆ. ಮೊದಲ ಬಾರಿ ಸ್ಪರ್ಧೆ ಮಾಡಿ ಉತ್ತಮ ಮತಗಳ ಕ್ರೋಡೀಕರಿಸಿ ತಮ್ಮ ಇಡೀ ತಂಡದ ಗೆಲುವಿಗೆ ಮಹತ್ವಪೂರ್ಣ ಕೊಡುಗೆ ನೀಡಿದ ಯುವ ನಾಯಕರಾದ ಕುಕ್ಕೆ ಪ್ರಶಾಂತ್ ಸಹಕಾರಿ ಕ್ಷೇತ್ರದಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಸಹಕಾರಿ ಸಂಘದ ಆಡಳಿತ ಚುಕ್ಕಾಣಿ ಯುವ ನಾಯಕತ್ವಕ್ಕೆ 2007/08ರ ಅವದಿಯಿಂದ ತೀರ್ಥಹಳ್ಳಿ ಬಿಜೆಪಿಯ ಯುವಮೋರ್ಚಾದ ತಾಲೂಕು ಪ್ರದಾನ ಕಾರ್ಯದರ್ಶಿ ಯುವ ಮೋರ್ಚಾದ ತಾಲೂಕು ಅಧ್ಯಕ್ಷರಾಗಿ ಜಿಲ್ಲಾ ಯುವ ಮೋರ್ಚಾದ ಪ್ರದಾನ ಕಾರ್ಯದರ್ಶಿ ಆಗಿ ಕ್ಷೇತ್ರ ಬಿಜೆಪಿಯ ಕಾರ್ಯದರ್ಶಿಯಾಗಿ ಪ್ರಸ್ತುತ ಜಿಲ್ಲಾ ಯುವಮೋರ್ಚಾದ ಅಧ್ಯಕ್ಷರಾಗಿ ಸಕ್ರೀಯವಾಗಿ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಕುಕ್ಕೆ ಪ್ರಶಾಂತ್ ಅವರು ತನ್ನ ಒಂದು ಅವಧಿಗೆ ತಾಲೂಕು ಪಂಚಾಯತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಸಹಕಾರಿ ಸಂಘದ ಷೇರುದಾರರ ಸಮಸ್ಯೆಗಳಿಗೆ ಕುಂದು ಕೊರತೆ ಗಳನ್ನು ನಿವಾರಿಸುವ ಧ್ವನಿಯಾಗಿ ಕಾರ್ಯನಿರ್ವಹಿಸಿ ಉತ್ತಮ ಆಡಳಿತ ನೀಡುವ ಮೂಲಕ ಸಹಕಾರಿ ಸಂಘದ ರಚನಾತ್ಮಕ ಬೆಳವಣಿಗೆಗೆ ತನ್ನ ಸೇವೆಯನ್ನು ವಿಸ್ತರಿಸಲಿದ್ದಾರೆ.