ಕುವೆಂಪು ಜನ್ಮ ದಿನಾಚರಣೆ: ಇಂದು ಸಾಂಸ್ಕೃತಿಕ ಕಾರ್ಯಕ್ರಮದ ರಂಗು!
– ವಿಶ್ವಮಾನವ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳು
– ‘ರಾಮಂಗೆ ಮೊದಲ ರಾಮಾಯಣಂ ನೃತ್ಯ ರೂಪಕ, ನಾಟಕ ಪ್ರದರ್ಶನ
NAMMUR EXPRESS NEWS
ತೀರ್ಥಹಳ್ಳಿ: 08-01-2025 ರ ಬುಧವಾರ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕುವೆಂಪುರವರ 120ನೇ ಜನ್ಮದಿನಾಚರಣೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೃತ್ಯರೂಪಕ, ನಾಟಕಗಳ ಪ್ರದರ್ಶನ ನಡೆಯಲಿದೆ. ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಜಿಲ್ಲಾಡಳಿತ ಮತ್ತು ತೀರ್ಥಹಳ್ಳಿಯ ನಟಮಿತ್ರರು ತಂಡದ ಸಹಕಾರದಲ್ಲಿಜನವರಿ 8ರ ಬುಧವಾರದಂದು ರಾಷ್ಟ್ರಕವಿ ಕುವೆಂಪುರವರ 120ನೇ ಜನ್ಮದಿನಾಚರಣೆಯ ಅಂಗವಾಗಿ ಪಟ್ಟಣದ ಶಾಂತವೇರಿ ಗೋಪಾಲಗೌಡರಂಗಮಂದಿರದಲ್ಲಿ ಸಂಜೆ 6.00 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸಮಕಾರ್ಯದರ್ಶಿ ಶ್ರೀ ಕಡಿದಾಳು ಪ್ರಕಾಶ್ ತಿಳಿಸಿದ್ದಾರೆ. ಕರ್ನಾಟಕದ ಪ್ರಸಿದ್ಧ ನೃತ್ಯಕಲಾವಿದೆ ಶಿವಮೊಗ್ಗದ ಡಾ.ಕೆ.ಎಸ್. ಪವಿತ್ರರವರ ‘ಶ್ರೀವಿಜಯ ಕಲಾನಿಕೇತನ’ ತಂಡವು ಶ್ರೀ ರಾಮಾಯಣ ದರ್ಶನಂ ಆಯ್ದ ಭಾಗಗಳನ್ನು ನೃತ್ಯಕ್ಕೆ ಅಳವಡಿಸಿ ‘ರಾಮಂಗೆ ಮೊದಲ ರಾಮಾಯಣಂ “ಎಂಬ ರೂಪಕವನ್ನು ಪ್ರಸ್ತುತಪಡಿಸಲಿದೆ.
ತೀರ್ಥಹಳ್ಳಿ ನಟಮಿತ್ರರು ತಂಡವು ಶ್ರೀ ರಾಮಾಯಣದರ್ಶನಂ ಆಧರಿಸಿದ ಹೊಸ ರಂಗಪ್ರಯೋಗವನ್ನು ಸಿದ್ಧಪಡಿಸಿದ್ದು “ಅತ್ತಲಾ ಕಿಷ್ಠಿಂದ ಯೊಳ್” ಎಂಬ ನಾಟಕವನ್ನು ತುಂಗಾ ಮಹಾವಿದ್ಯಾ ಲಯದ 1 ವಿದ್ಯಾರ್ಥಿಗಳು ಅಭಿನಯಿಸಲಿದ್ದಾರೆ. ಈ ರಂಗ ಪ್ರಯೋಗವನ್ನು ತೀರ್ಥಹಳ್ಳಿಯ ಶ್ರೀ ಶ್ರೀಪಾದ್.ಟಿ.ವಿ. ಮತ್ತು ಶ್ರೀ ಶಿವ ಕುಮಾರ್ ಟಿ.ಆರ್.ನಿರ್ದೇಶಿಸಿದ್ದಾರೆ. ಕುವೆಂಪುರವರ ಮಕ್ಕಳ ನಾಟಕ”ಬೊಮ್ಮನಹಳ್ಳಿ ಕಿಂದರ ಜೋಗಿ” ನಾಟಕವನ್ನು ಮಂಡ್ಯದ ಸದ್ವಿದ್ಯಾರಂಗತಂಡ ಅಜಯ್ ಗೌಡ ನೀನಾಸಂ ಇವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಲಿದ್ದಾರೆಈ ಎಲ್ಲ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಲಿದ್ದು, ಯಾವುದೇ ವೇದಿಕೆ ಕಾರ್ಯಕ್ರಮ ಗಳು ಇರುವುದಿಲ್ಲ ಹಾಗೂ ಪ್ರವೇಶ ಉಚಿತವಾಗಿರುತ್ತದೆ. ಕಲಾಸಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಿಶ್ವಮಾನವ ದಿನಾಚರಣೆಯ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡಬೇಕಾಗಿ ಕಡಿದಾಳು ಪ್ರಕಾಶ್ ವಿನಂತಿಸಿದ್ದಾರೆ.