ಹಣಗೆರೆ ಹುಂಡಿ ಎಣಿಕೆ: ಸಮಿತಿ ನೇತೃತ್ವದಲ್ಲಿ ಎಣಿಕೆ
– ಎಣಿಕೆಯಲ್ಲಿ 77 ಸಾವಿರ ಹೆಚ್ಚುವರಿ ಹಣ
– ಎಣಿಕೆ ಮೋಸ ಆಗಿದ್ದಾ.. ಮಿಸ್ ಆಗಿದ್ದಾ…?
– ದೇವಸ್ಥಾನ ಖಾತೆ ಬದಲು: ಎಸ್ ಬಿಐಗೆ ಹಣ ವರ್ಗಾವಣೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ನ. 7ರಂದು ನಡೆದ ಹುಂಡಿ ಎಣಿಕೆಯಲ್ಲಿ ನ. 8 ರಂದು ನಡೆದ ಮರು ಎಣಿಕೆಯಲ್ಲಿ ಹೆಚ್ಚುವರಿ 77 ಸಾವಿರ ಹಣ ಸಿಕ್ಕಿಡೆ. ದೇವಸ್ಥಾನ ಸಮಿತಿ ಮತ್ತು ತಹಸೀಲ್ದಾರ್ ನೇತೃತ್ವದಲ್ಲಿ ಹಣವನ್ನು ತಾಲ್ಲೂಕು ಕಚೇರಿಯ ಖಜಾನೆಯಲ್ಲಿ ಇಡಲಾಗಿತ್ತು. ಬೆಳಿಗ್ಗೆ ತಹಶೀಲ್ದಾರ್, ಡಿವೈಎಸ್ಪಿ ಸಮ್ಮುಖದ ಬಿಗಿ ಬಂದೋಬಸ್ನಲ್ಲಿ ಹಣವನ್ನು ಹಣಗೆರೆಗೆ ಸಾಗಿಸಲಾಗಿದ್ದು ಮರು ಎಣಿಕೆ ನಡೆದಿದೆ. ಒಟ್ಟು 66 ಲಕ್ಷದ 4 ಸಾವಿರದ 950 ಹಣ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಂದಾಯವಾಗಿದೆ. ಹಣದ ಕಂತೆಯಲ್ಲಿ ಎಣಿಕೆ ಮಾಡದೆ ಹೆಚ್ಚುವರಿಯಾಗಿ ಉಳಿಸಿಟ್ಟಿದ್ದ 77,930 ರೂಪಾಯಿ ಹಣವನ್ನು ಸಮಿತಿ ನೇತೃತ್ವದಲ್ಲಿ ಬ್ಯಾಂಕ್ ಜಮಾ ಮಾಡಲಾಗಿದೆ.ಕೃತ್ಯಕ್ಕೆ ಸಹಕಾರ ನೀಡಿದ ಅಧಿಕಾರಿಯ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸುತ್ತಿದ್ದು, ಕೆನರಾ ಬ್ಯಾಂಕ್ ನಲ್ಲಿದ್ದ ದೇವಸ್ಥಾನದ ಖಾತೆಯ ಬದಲು ಎಸ್ ಬಿಐಗೆ ಹಣ ವರ್ಗಾಯಿಸಲಾಗಿದೆ.
ದೇವಸ್ಥಾನ ಸಮಿತಿಯ ಪಾರದರ್ಶಕ ಆಡಳಿತ
ಹಣಗೆರೆ ದೇವಸ್ಥಾನ ಸಮಿತಿ ನೇತೃತ್ವದಲ್ಲಿ ಮತ್ತೆ ಮರು ಎಣಿಕೆ ಆಗಿದ್ದು ಸಮಿತಿ ಪಾರದರ್ಶಕವಾಗಿ ಕೆಲಸ ಮಾಡಿದೆ. ಕೆಲ ಅಧಿಕಾರಿಗಳು ಬೇಕಾಬಿಟ್ಟಿ ಎಣಿಸಿದ್ದೋ ಅಥವಾ ವಂಚನೆ ಮಾಡುವ ಉದ್ದೇಶದಿಂದ ಮಾಡಿದ್ದೋ ಗೊತ್ತಾಗಬೇಕಿದೆ.