ನವಜ್ಯೋತಿ ವಿದ್ಯಾ ಸಂಸ್ಥೆಗೆ ಬೆಳ್ಳಿ ಮಹೋತ್ಸವ ಸಂಭ್ರಮ!
– ನವಜ್ಯೋತಿ ವಿದ್ಯಾ ಸಂಸ್ಥೆ ಕೋಲಿಗೆ-ಕೋಣಂದೂರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ
– ಡಿ.17ಕ್ಕೆ ಅದ್ದೂರಿ ಕಾರ್ಯಕ್ರಮ: ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ನವಜ್ಯೋತಿ ವಿದ್ಯಾ ಸಂಸ್ಥೆ ಕೋಲಿಗೆ-ಕೋಣಂದೂರಿನಲ್ಲಿ ಡಿ.17ಕ್ಕೆ ಬೆಳಿಗ್ಗೆ 9:40ರಂದು ಬೆಳ್ಳಿ ಮಹೋತ್ಸವ ಸಮಾರಂಭ ಹಾಗೂ ಸಂಜೆ 5:40ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾಜಿ ಗೃಹ ಸಚಿವರು ಮತ್ತು ಶಾಸಕರು ಆರಗ ಜ್ಞಾನೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.
ಸಹಕಾರ ನಾಯಕರಾದ ಡಾ.ಆರ್.ಎಂ. ಮಂಜುನಾಥ ಗೌಡ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಅಧ್ಯಕ್ಷರು, ಗ್ರಾಮ ಪಂಚಾಯತ್, ಕೋಣಂದೂರು ಸತೀಶ್ ಎಂ ಆರ್, ಉಪಾಧ್ಯಕ್ಷರು, ಗ್ರಾ.ಪಂ, ಕೋಣಂದೂರು, ಸುಜಾತಾ ಚೂಡಾಮಣಿ, ಸದಸ್ಯರು, ಗ್ರಾ.ಪಂ., ಕೋಣಂದೂರು ಲಕ್ಷ್ಮಿ ನಾಗರಾಜ್, ಅಧ್ಯಕ್ಷರು, ನವಜ್ಯೋತಿ ಶಾಲೆ ಪಿ.ಟಿ.ಎ ನಾಗರಾಜ ಶೆಟ್ಟಿ,ಬಿ.ಸಿ. ಒ ಅಗ್ರಹಾರ ಹೋಬಳಿ, ತೀರ್ಥಹಳ್ಳಿ ಗಣೇಶ್ ವೈ, ಸಿಇಒ ಅಗ್ರಹಾರ ತೀರ್ಥಹಳ್ಳಿ ನಾಗರಾಜ್ ಬಿ, ಸಿಆರ್ ಪಿ ಕೋಣಂದೂರು ಕ್ಲಸ್ಟರ್ ಶಾಲೆ ಮಮತಾ ಕೆ.ಆರ್, ಮುಖ್ಯೋಪಾಧ್ಯಾಯಿನಿ ನವಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಫಾತಿಮಾ ಮೆಂಡೋಜ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಏನೇನಿದೆ?
ಪ್ರಾರ್ಥನೆ, ಸ್ವಾಗತ, ಉದ್ಘಾಟನೆ, ರಜತ ಮಹೋತ್ಸವ ಅಭಿನಂದನೆಗಳು ಮತ್ತು ಮಾಜಿ ಅಧ್ಯಾಪಕರನ್ನು ಗೌರವಿಸುವ ಕಾರ್ಯಕ್ರಮ , ಬಹುಮಾನ ವಿತರಣೆ,ಅಧ್ಯಕ್ಷೀಯ ಭಾಷಣ ಹಾಗೂ ಸಂಜೆ 5-40ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಲಿದೆ.