ಪ್ರೀಮಿಯರ್ ಲೀಗ್ ಸೀಸನ್-2 ಚಿಡುವ ಮಡಿಲಿಗೆ!
* 3 ದಿನಗಳ ಲೀಗ್ ಮಾದರಿಯ ಅದ್ದೂರಿ ಪಂದ್ಯಾಟ
* ಚಿಡುವ ಸತೀಶ ನೇತೃತ್ವದ ಚಿಡುವ ಲಯನ್ಸ್ ಭರ್ಜರಿ ಗೆಲುವು
* ಉತ್ತಮ ಆಯೋಜನೆ ಮೂಲಕ ಗಮನ ಸೆಳೆದ ಪಂದ್ಯಾವಳಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಕನ್ನಂಗಿ ಪೀಮಿಯರ್ ಲೀಗ್ ಸೀಸನ್ 2 ಸಂತೋಷ ಪುಡಿ ಅವರ ಆಯೋಜನೆಯಲ್ಲಿ 3 ದಿನಗಳ ಲೀಗ್ ಮಾದರಿಯ ಪಂದ್ಯಾಟ ಅತಿ ಅದ್ದೂರಿಯಾಗಿ ನಡೆಯಿತು.
ಪಂದ್ಯಾಟದಲ್ಲಿ ಚಿಡುವ ಸತೀಶ ಅವರ ನೇತೃತ್ವದ ,ಚಿಡುವ ಲಯನ್ಸ್, ತಂಡವು ಕೊನೆಯಲ್ಲಿ 45 ರನ್ ಗಳ ಮೂಲಕ ಬಿಯರ್ ಬ್ಲಾಸ್ಟರ್ ತಂಡವನ್ನು ಸೋಲಿಸಿ ಭರ್ಜರಿ ಗೆಲುವನ್ನು ಸಾಧಿಸಿದೆ.
ಮಂಡಗದ್ದೆ ಹೋಬಳಿಯ 20 ತಂಡದ 3 ದಿನಗಳ ಲೀಗ್ ಮಾದರಿಯ ಪಂದ್ಯಾಟ ನ.16,17 ಹಾಗೂ 18 ರಂದು ನಡೆದಿದ್ದು,
ಕೊನೆಯ ಫೈನಲ್ ಹಂತಕ್ಕೆ ತಲುಪಿದ ಚಿಡುವ ಲಯನ್ಸ್ ಮತ್ತು ಬಿಯರ್ ಬ್ಲಾಸ್ಟರು ತಂಡಗಳು ಅತಿ ರೋಚಕವಾಗಿ ಮುಕ್ತಾಯವನ್ನು ನೀಡಿತು. ಲಯನ್ಸ್,ತಂಡ ಮೊದಲು ಆಟವಾಡಿ 45 ರನ್ ಗಳ ಗುರಿ ನೀಡಿದ್ದು,ಈ ಗುರಿಯನ್ನು ಬೆನ್ನು ಹತ್ತಿದ ಬಿಯರ್ ಬ್ಲಾಸ್ಟರ್ ತಂಡವು 40 ರನ್ ಗಳನ್ನು ಗಳಿಸುವಲ್ಲಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಸೋಲನ್ನು ಕಂಡಿತು. ಅತಿ ಅದ್ದೂರಿಯಾಗಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್. ಎಂ ಮಂಜುನಾಥ್ ಗೌಡ ವಹಿಸಿ ಶುಭಾಶಯ ಕೋರಿದರು. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ಜೊತೆಗೆ 30 ಸಾವಿರ ನಗದು ನೀಡಿ ಗೌರವಿಸಲಾಯಿತು.
ಕನ್ನಂಗಿ ಪ್ರಿಮಿಯರ್ ಲೀಗ್ ನ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದ ಚಿಡುವ ಲಯನ್ಸ್ ತಂಡಕ್ಕೆ ವಿಜೇತ ಬಹುಮಾನ ಟ್ರೋಫಿ ಹಾಗೂ 40 ಸಾವಿರ ನಗದು ನೀಡಿ ಸನ್ಮಾನಿಸಲಾಯಿತು.
ಜೊತೆಗೆ ಮ್ಯಾನ್ ಆಫ್ ದಿ ಸೀರೀಸ್ ಚಿಡುವ ಲಯನ್ಸ್ ಟೀಮ್ ಆಟಗಾರ ಮನೋಜ್ ಹಳಗ ಪಡೆದುಕೊಂಡಿದ್ದಾರೆ. ತಂಡಕ್ಕೆ ಈ ಮೂಲಕ ಅಭಿನಂದನೆಯನ್ನು ಕೋರಲಾಗಿದೆ.