ಶಾಲಾ, ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ
– ಪ್ರತಿ ಶಾಲಾ ಕಾಲೇಜಿನಿಂದ 2 ವಿದ್ಯಾರ್ಥಿಗಳಿಗೆ ಅವಕಾಶ
– ತೀರ್ಥಹಳ್ಳಿಯಲ್ಲಿ ನ.28ರಂದು ಸ್ಪರ್ಧೆ ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಸಾಹಿತ್ಯ, ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ವೇದಿಕೆ, ತೀರ್ಥಹಳ್ಳಿ ಹಾಗೂ ಶಾಲಾ ಶಿಕ್ಷಣ ಇಲಾಖೆ, ತೀರ್ಥಹಳ್ಳಿ ವತಿಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗಾಗಿ ತಾಲ್ಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ನ.28ರಂದು ತೀರ್ಥಹಳ್ಳಿಯಲ್ಲಿ ಏರ್ಪಡಿಸಲಾಗಿದೆ.
ಪ್ರತೀ ಶಾಲೆ ಮತ್ತು ಕಾಲೇಜುಗಳಿಂದ ೨ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಈ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗಾಗಿ ತಾಲ್ಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ನೆರವೇರಲಿದ್ದು, ನ. ೨೮-೧೧-೨೦೨೪ ನೇ ಗುರುವಾರ, ಬೆಳಿಗ್ಗೆ ೧೦-೦೦ ಗಂಟೆಗೆ, ಶಾಂತವೇರಿ ಗೋಪಾಲಗೌಡ ರಂಗಮಂದಿರ, ಸೊಪ್ಪುಗುಡ್ಡೆ-ತೀರ್ಥಹಳ್ಳಿ ಇಲ್ಲಿ ನಡೆಯಲ್ಲಿದೆ.
ವಿಷಯ : ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ರಸಪ್ರಶ್ನೆ
1) ಹಿರಿಯ ಪ್ರಾಥಮಿಕ ವಿಭಾಗ : ೫ ರಿಂದ ೭ ನೇ ತರಗತಿ
2) ಪ್ರೌಢಶಾಲಾ ವಿಭಾಗ : ೮ ರಿಂದ ೧೦ ನೇ ತರಗತಿ
3) ಪ.ಪೂ. ಕಾಲೇಜು ವಿಭಾಗ : ೧೧ ರಿಂದ ೧೨ ನೇ ತರಗತಿ (ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗ)
ಪ್ರತೀ ಶಾಲೆ ಮತ್ತು ಕಾಲೇಜುಗಳಿಂದ ೨ ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. (ಕಾಲೇಜು ವಿದ್ಯಾರ್ಥಿಗಳಿಗೆ ಪ್ರತೀ ವಿಭಾಗದಿಂದ ೨ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ)
ಸ್ಪರ್ಧಾ ವಿಧಾನ : ಪ್ರತೀ ವಿಭಾಗಕ್ಕೆ ಲಿಖಿತ : ೫೦ ಪ್ರಶ್ನೆ (ಡಿಜಿಟಲ್ ) ಮೌಖಿಕ : ೫ ಸುತ್ತುಗಳು ಹಾಗೂ ಬಹುಮಾನ ಪ್ರತೀ ವಿಭಾಗಕ್ಕೂ ಕೂಡ ಇರುತ್ತದೆ.
ಪ್ರಥಮ : ರೂ. ೩೦೦೦+ ಪುಸ್ತಕ + ಪ್ರಶಸ್ತಿಪತ್ರ
ದ್ವಿತೀಯ : ರೂ. ೨೦೦೦ + ಪುಸ್ತಕ + ಪ್ರಶಸ್ತಿಪತ್ರ
ತೃತೀಯ : ರೂ. ೧೦೦೦ + ಪುಸ್ತಕ + ಪ್ರಶಸ್ತಿಪತ್ರ
ವಿಶೇಷ ಸೂಚನೆಗಳು:
– ಸಾಂಸ್ಕೃತಿಕ ರಸಪ್ರಶ್ನೆಗೆ ಸಂಬಂಧಿಸಿದ ಪುಸ್ತಕವು ಟಿ.ಎಸ್.ಟಿ. ಹೈಪರ್ ಮಾರ್ಟ್ ತೀರ್ಥಹಳ್ಳಿಯಲ್ಲಿ ಲಭ್ಯವಿರುತ್ತದೆ. *
– ವಿದ್ಯಾರ್ಥಿಗಳೊಂದಿಗೆ ಹಾಜರಾಗುವ ಶಿಕ್ಷಕರು ಸ್ಪರ್ಧಾಳುಗಳಿಗೆ ತಮ್ಮ ಮೊಬೈಲ್ನ್ನು ಸಕಾಲಕ್ಕೆ ಒದಗಿಸುವುದು
– ಸಾಂಸ್ಕೃತಿಕ ರಸಪ್ರಶ್ನೆ’ ಪುಸ್ತಕದಲ್ಲಿರುವ ಪ್ರಶ್ನೆಗಳನ್ನು ಪ್ರಾಥಮಿಕ ವಿಭಾಗಕ್ಕೆ ೭೦%, ಪ್ರೌಢ ವಿಭಾಗಕ್ಕೆ ೫೦ % ಹಾಗೂ ಕಾಲೇಜು ವಿಭಾಗಕ್ಕೆ ೩೦% ನೀಡಲಾಗುವುದು. ಉಳಿದ ಪ್ರಶ್ನೆಗಳು ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಂಬಂಧಿಸಿರುತ್ತದೆ.
* ಏಕಕಾಲದಲ್ಲಿ ೩ ವಿಭಾಗದ ಡಿಜಿಟಲ್ ರಸಪ್ರಶ್ನೆ ಪ್ರಾರಂಭಿಸಲಾಗುವುದು. * ೬೦ ಪ್ರಶ್ನೆಗಳಿಗೆ ೬೦ ನಿಮಿಷ ಕಾಲಾವಕಾಶವಿರುತ್ತದೆ. * ಡಿಜಿಟಲ್ ವಿಭಾಗಕ್ಕೆ ನೆಟ್ ಪ್ಯಾಕ್ ಇರುವ ಆಂಡ್ರಾಯ್ಡ್ ಮೊಬೈಲ್ ಬಳಸಿ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. * ಶಾಲಾವಾರು ವಿದ್ಯಾರ್ಥಿಗಳ ವಿವರಗಳನ್ನು ಸಿ.ಆರ್.ಪಿ. ಗಳಿಗೆ ೨೨-೧೧-೨೦೨೪ ರೊಳಗೆ ನೀಡಬೇಕು.
ಸಂಘ ಸಂಸ್ಥೆಗಳ ಸಹಯೋಗ
ಅಧ್ಯಕ್ಷರು ಮತ್ತು ಸದಸ್ಯರು, ಪಟ್ಟಣ ಪಂಚಾಯತ್, ತೀರ್ಥಹಳ್ಳಿ, * ಕೆನರಾ ಬ್ಯಾಂಕ್, ತೀರ್ಥಹಳ್ಳಿ * ಬ್ಯಾಂಕ್ ಆಫ್ ಬರೋಡ, ತೀರ್ಥಹಳ್ಳಿ, * ಐ.ಸಿ.ಐ.ಸಿ.ಐ ಬ್ಯಾಂಕ್, ತೀರ್ಥಹಳ್ಳಿ, * ಆಕ್ಸಿಸ್ ಬ್ಯಾಂಕ್, ತೀರ್ಥಹಳ್ಳಿ
* ಹೆಚ್.ಡಿ.ಎಫ್.ಸಿ. ಬ್ಯಾಂಕ್, ತೀರ್ಥಹಳ್ಳಿ, * ಡಿ.ಸಿ.ಸಿ. ಬ್ಯಾಂಕ್, ತೀರ್ಥಹಳ್ಳಿ, * ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ನಿ., ತೀರ್ಥಹಳ್ಳಿ, * ತುಳುನಾಡ ಸಿರಿ ಸೌಹಾರ್ದ ಸಹಕಾರಿ ಸಂಘ ನಿ., ತೀರ್ಥಹಳ್ಳಿ, * ವರ್ತಕರ ಸೌಹಾರ್ದ ಸಹಕಾರಿ ಸಂಘ ನಿ., ತೀರ್ಥಹಳ್ಳಿ, * ಶ್ರೀ ಸಿರಿಬೈಲ್ ಧರ್ಮೇಶ್, ಅಧ್ಯಕ್ಷರು, ಬಿ.ಐ.ಟಿ., ಬೆಂಗಳೂರು, * ಶ್ರೀ ರಾಘವೇಂದ್ರ ಎಸ್., ಅಧ್ಯಕ್ಷರು, ಸರ್ಕಾರಿ ನೌಕರರ ಸಂಘ, ತೀರ್ಥಹಳ್ಳಿ * ಶ್ರೀ ದುರ್ಗಾ ಜೆರಾಕ್ಸ್ & ಬುಕ್ ಸೆಂಟರ್, ತೀರ್ಥಹಳ್ಳಿ ಇವರು ಈ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿದ್ದಾರೆ.
ಸರ್ವರಿಗೂ ಆದರದ ಸುಸ್ವಾಗತ
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ತೀರ್ಥಹಳ್ಳಿ ಇವರು ಕೋರಿದ್ದಾರೆ.