ತೀರ್ಥಹಳ್ಳಿಯಲ್ಲಿ ಮಳೆ: ರಾಮ ಮಂಟಪ ಮುಳುಗಲು ದಿನಗಣನೆ!
– ತುಂಗಾ ನದಿ ನೀರು ಏರಿಕೆ: ಸತತ ಮಳೆಗೆ ಜನ ಜೀವನ ಅಸ್ತವ್ಯಸ್ತ
– ಆಗುಂಬೆ: ಕುಸಿದುಬಿದ್ದ ಬಡ ಕಲಾವಿದನ ಮನೆ: ಮಹಿಳೆ ಪಾರು
– ಮಲೆನಾಡಲ್ಲಿ ಶುರುವಾಯ್ತು ಕೃಷಿ ಚಟುವಟಿಕೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ತಾಲೂಕು ಮಲೆನಾಡಿನ ಕೊಪ್ಪ, ಶೃಂಗೇರಿ, ಹೊಸನಗರ ಭಾಗದಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದೆ.
ಶೃಂಗೇರಿ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ರಾಮ ಮಂಟಪ ಮುಳುಗಲು ದಿನಗಣನೆ ಆರಂಭವಾಗಿದೆ.
ತುಂಗಾ ನದಿ ನೀರು ಏರಿಕೆಯಾಗಿದ್ದು ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಸತತ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.
ರಾಮ ಮಂಟಪ ಮುಚ್ಚಲು ಸುಮಾರು 3-4 ಅಡಿ ಬಾಕಿ ಇದೆ. ಶೃಂಗೇರಿಯಲ್ಲಿ ದೇವಸ್ಥಾನ ಸುತ್ತಮುತ್ತ ಮುಳುಗಡೆ ಆಗಿದೆ. ಹೀಗೆ ಮಳೆ ಮುಂದುವರಿದಲ್ಲಿ ರಾಮ ಮಂಟಪ ಮುಳುಗಡೆ ಆಗಲಿದೆ.
ಆಗುಂಬೆಯಲ್ಲಿ ಭಾರಿ ಮಳೆ: ಕುಸಿದುಬಿದ್ದ ಬಡ ಕಲಾವಿದನ ಮನೆ!
ಹೋನ್ನೆ ತಾಳು ಗ್ರಾಮ ಪಂಚಾಯತ್ ಹೊನ್ನೆ ತಾಳು ಗ್ರಾಮ ನಂದನ್ ಶೆಟ್ಟಿ ಯಕ್ಷಗಾನ ಕಲಾವಿದನಾಗಿದ್ದು ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾನೆ ಇವರು ಮಂದಾರ್ತಿ ಮಳೆಗಾಲದ ಸೇವೆಯಾಟದಲ್ಲಿ ಯಕ್ಷಗಾನದ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದು ಇವರು ನಿನ್ನೆ ಮಂದಾರ್ತಿಯಲ್ಲಿದ್ದರೂ ಅವರ ತಾಯಿ ಭಾರತಿ ಒಬ್ಬರೇ ಮನೆಯಲ್ಲಿ ವಾಸವಾಗಿದ್ದರು ಈ ಸಂದರ್ಭದಲ್ಲಿ ರಾತ್ರಿ ಭಾರಿ ಮಳೆಗೆ ಮನೆ ಕುಸಿತಿದೆ.ಇವರು ರಾತ್ರಿ ಬಾರಿ ಶಬ್ದಕ್ಕೆ ಮನೆಯಿಂದ ಆಚೆ ಓಡಿ ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.ಹಾಗೆಯೇ ಇವರ ಮಗ ಮಂದಾರ್ತಿ ಮೇಳದಲ್ಲಿ ಕಲಾವಿದನಾಗಿದ್ದು ಕಡುಬಡ ಕುಟುಂಬದವರಾಗಿದ್ದು ಇರಲು ಬೇರೆ ಮನೆ ಇಲ್ಲದೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನೆಯನ್ನು ಒದಗಿಸಿ ಕೊಡಬೇಕಾಗಿ ವಿನಂತಿ ಸ್ಥಳಕ್ಕೆ ತಕ್ಷಣ ದಾವಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿಬಿ ಮಂಜುನಾಥ್ ಹಾಗೂ ಸ್ಥಳೀಯ ಯುವಕರು ಇವರಿಗೆ ಸಹಕಾರ ನೀಡಿದ್ದಾರೆ.
ಮಲೆನಾಡಲ್ಲಿ ಶುರುವಾಯ್ತು ಕೃಷಿ ಚಟುವಟಿಕೆ
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹೆಚ್ಚುತ್ತಿದೆ. ಭತ್ತದ ಗದ್ದೆ ನಾಟಿ ಕಾರ್ಯಕ್ಕೆ ಸಿದ್ಧತೆ ಜೋರಾಗಿದೆ. ಅಡಿಕೆ ಬೆಳೆಗೆ ಔಷಧಿ ಹೊಡೆಯಲಾಗುತ್ತಿದೆ.