ತೀರ್ಥಹಳ್ಳಿಯಲ್ಲಿ ಅದ್ದೂರಿ ಕನ್ನಡಮ್ಮನ ರಥಯಾತ್ರೆ
– 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪ್ರಚಾರ
– ಕನ್ನಡ ಹಬ್ಬದ ಸಂಭ್ರಮಕ್ಕೆ ತೀರ್ಥಹಳ್ಳಿಯಲ್ಲಿ ಅದ್ದೂರಿ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಜ್ಯೋತಿ ತೀರ್ಥಹಳ್ಳಿಗೆ ಆಗಮಿಸಿದ್ದು, ಅದ್ದೂರಿಯಾಗಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ಸ್ವಾಗತಿಸಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಡಿಸೆಂಬರ್ 20 21 22 ಮೂರು ದಿನಗಳ ಕಾಲ ನಡೆಯಲಿದೆ.ಇದು 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವಾಗಿದ್ದು, ಇದರ ಅಂಗವಾಗಿ ತಾಯಿ ಭುವನೇಶ್ವರಿ ದೇವಿಯ ಉಂಗುರವನ್ನು ಹೊತ್ತಂತಹ ಕನ್ನಡ ಜ್ಯೋತಿಯ ರಥ ಅಕ್ಟೋಬರ್ 27ರಂದು ದಾವಣಗೆರೆ ಜಿಲ್ಲೆಯ ಮೂಲಕ ಶಿಕಾರಿಪುರಕ್ಕೆ ಬಂದಿದ್ದು, ಜಿಲ್ಲಾಧ್ಯಕ್ಷರು ಸ್ವಾಗತವನ್ನು ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಸದರು ಕೂಡ ಭಾಗಿಯಾಗಿದ್ದು ಅಕ್ಟೋಬರ್ 27ರಂದು ಸಾಗರದಲ್ಲಿ ಸಂಜೆ ಅದ್ದೂರಿಯಾಗಿ ಬರಮಾಡಿಕೊಂಡರು. ತೀರ್ಥಹಳ್ಳಿಯಲ್ಲಿ ಶಾಸಕರು, ಮಾಜಿ ಗೃಹ ಸಚಿವರು ಆರಗ ಜ್ಞಾನೇಂದ್ರ ಮತ್ತು ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಆರ್ ಎಂ ಮಂಜುನಾಥ್ ಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಡಿ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಟಿ. ಕೆ ರಮೇಶ್ ಶೆಟ್ಟಿ ಮತ್ತು ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರು ಈ ರಥವನ್ನು ಅದ್ದೂರಿಯಾಗಿ ಅಹ್ವಾನ ಮಾಡಿದರು.
ಮೆರವಣಿಗೆ ಬಳಿಕ ಬಂಟರ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ರಥ ಅಹ್ವಾನ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡ ಹೆಮ್ಮೆಯನ್ನು ಸಾರುವಂತಹ ಕಾರ್ಯಕ್ರಮಗಳನ್ನು ತಾಲ್ಲೂಕು ಕನ್ನಡ ಪರಿಷತ್ ಮತ್ತು ತಾಲ್ಲೂಕು ಸಾಹಿತ್ಯ ಮತ್ತು ಸಂಸ್ಕೃತಿಕ ವೇದಿಕೆ ಜಾನಪದ ಪರಿಷತ್ ಮೂರು ಸಂಘಟನೆಗಳು ಸೇರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಗೃಹಸಚಿವರು ಮತ್ತು ಶಾಸಕರಾದ ಆರಗ ಜ್ಞಾನೇಂದ್ರ, ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಡಿ ಮಂಜುನಾಥ್, ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಆರ್ ಎಂ ಮಂಜುನಾಥ್ ಗೌಡ, ಪಟ್ಟಣ ಪಂಚಾಯತ್ ಸದಸ್ಯರಾದ ರತ್ನಾಕರ್ ದತ್ತ, ಶಬನಮ್, ತಾಲೂಕು ದಂಡಾಧಿಕಾರಿ ರಂಜಿತ್ ಎಸ್, ನಿವೃತ್ತ ಪ್ರಾಂಶುಪಾಲರು ಡಿ.ಎಸ್ ಸೋಮಶೇಖರ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಟಿ.ಕೆ ರಮೇಶ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸುರೇಂದ್ರ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರು ಗೀತಾ ರಮೇಶ್, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ವಿ ಗಣೇಶ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.