ಆರ್.ಎಸ್.ಬಿ ಸಭಾ ಭವನದ ಲೋಕಾರ್ಪಣೆಗೆ ಸಜ್ಜು!
* ಸಮಾಜದ ಹೆಮ್ಮೆಯ ನೂತನ ಕಟ್ಟಡ ಅ 23ರಂದು ಉದ್ಘಾಟನೆ
* ಅಧ್ಯಕ್ಷರಾದ ಸುಮಾ ರಾಮಚಂದ್ರ, ಪ್ರಧಾನ ಕಾರ್ಯದರ್ಶಿಯಾದ ಅಶೋಕ್ ನಾಯಕ್ ಮಾಹಿತಿ
NAMMUR EXPRESS NEWS
ತೀರ್ಥಹಳ್ಳಿ: ಕುರುವಳ್ಳಿಯಲ್ಲಿ ಆರ್.ಎಸ್. ಬಿ ಸಭಾ ಭವನದ ನೂತನ ಕಟ್ಟಡ ಉದ್ಘಾಟನೆಗೆ ಸಜ್ಜುಗೊಂಡಿದೆ.
ಆರ್. ಎಸ್. ಬಿ ಸಭಾಭವನದಲ್ಲಿ ತಾಲೂಕು ಆರ್.ಎಸ್. ಬಿ ಸಮಾಜದ ತಾಲೂಕು ಅಧ್ಯಕ್ಷರಾದ ಸುಮಾ ರಾಮಚಂದ್ರ ಮತ್ತು ಪ್ರಧಾನ ಕಾರ್ಯದರ್ಶಿ ಅಶೋಕ್ ವಿ. ನಾಯಕ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಆರ್ ಎಸ್ ಬಿ ಸಮಾಜ ತೀರ್ಥಹಳ್ಳಿ ತಾಲೂಕಿನ ಹಿಂದುಳಿದ ಅಲ್ಪಸಂಖ್ಯಾತರ ಸ್ವಲ್ಪ ಸಂಖ್ಯೆಯನ್ನು ಹೊಂದಿರುವ ಸಮಾಜವಾಗಿತ್ತು.1999ರಲ್ಲಿ ಕಟ್ಟಡದ ನಿರ್ಮಾಣಕ್ಕೆ ಕನಸು ಕಂಡಿದ್ದಾರೆ. ಅದಕ್ಕಾಗಿಯೇ ಆರ್ ಎಸ್ ಬಿ ಸಮಾಜಕ್ಕಾಗಿ ಕಟ್ಟಡ ಕಟ್ಟಬೇಕು ಎಂದು ರಾಮಚಂದ್ರ ಅವರ ಕನಸು,2000 ಇಸವಿಯಲ್ಲಿ ಸಣ್ಣದಾಗಿ ಕಟ್ಟಡವನ್ನು ಕಟ್ಟಲಾಯಿತು. ಪ್ರತಿಯೊಬ್ಬರ ಬೆವರಹನಿ ಈ ಸಮಾಜದ ಕಟ್ಟಡದಲ್ಲಿದೆ ಎಂದು ಆರ್ ಎಸ್ ಬಿ ಸಮಾಜದ ತಾಲೂಕು ಅಧ್ಯಕ್ಷರಾದ ಸುಮಾ ರಾಮಚಂದ್ರ ಹೇಳಿದ್ದಾರೆ.
ಯಾವತ್ತು ಯಾವ ಕಾರ್ಯಕ್ರಮ?
ಅ.21ರಂದು ಸಂಜೆ 5:00 ರಿಂದ ರಕ್ಷುಘ್ನ ಹೋಮ, ವಾಸ್ತುಹೋಮ ಮತ್ತು ವಾಸ್ತುಬಲಿ ಇತ್ಯಾದಿ
ಅ.22ರಂದು ಬೆಳಿಗ್ಗೆ 8:20 ರಿಂದ ನಾಗದೇವರಿಗೆ ನವಕ ಪ್ರಧಾನ ಹೋಮ, ಆಶ್ಲೇಷ ಬಲಿ, ಮಹಾಪೂಜೆ.
ಶ್ರೀ ವಿಶ್ವನಾಥ ತಂತ್ರಿಗಳ ನೇತೃತ್ವದಲ್ಲಿ ಆಯೋಜಿಸಲಾಗಿದೆ.
ಕಟ್ಟಡ ಉದ್ಘಾಟನೆಗೆ ಹಲವು ಗಣ್ಯರ ಆಗಮನ
ಅ.23 ಬೆಳಗ್ಗೆ 10.30ಕ್ಕೆ ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠ, ಗೋವಾ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹರಾಜ್. ಸಮಾಜದ ಗೌರವಾಧ್ಯಕ್ಷರು ಹಾಗೂ ಕಟ್ಟಡದ ವಿಶೇಷ ದಾನಿಗಳು ಉದ್ಯಮಿಗಳು, ಪೂನಾ ನಟರಾಜ್ ಕಾಮತ್ ರಂಜದಕಟ್ಟೆ ಗೌರವ ಉಪಸ್ಥಿತಿಯಲ್ಲಿ, ಅಧ್ಯಕ್ಷರು, ರಾ.ಸಾ.ಬ್ರಾಸ, ತೀರ್ಥಹಳ್ಳಿ ಸುಮಾ ರಾಮಚಂದ್ರ ಬೋರ್ಕಾರ್ ಅಂದಗೆರೆ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದರು ಶಿವಮೊಗ್ಗ ಬಿ.ವೈ. ರಾಘವೇಂದ್ರ,ಮಾಜಿ ಗೃಹ ಸಚಿವರು, ಶಾಸಕರು, ತೀರ್ಥಹಳ್ಳಿ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ ಕಿಮ್ಮನೆ ರತ್ನಾಕರ, ಅಧ್ಯಕ್ಷರು, ಎಂ.ಎ.ಡಿ.ಬಿ, ಡಿ.ಸಿ.ಸಿ. ಬ್ಯಾಂಕ್ ಆರ್.ಎಂ. ಮಂಜುನಾಥ ಗೌಡ, ಅಧ್ಯಕ್ಷರು, ಗ್ರಾಮ ಪಂಚಾಯತ್, ಕುರುವಳ್ಳಿ ಯು.ಡಿ. ವೆಂಕಟೇಶ್,ಅಧ್ಯಕ್ಷರು, ಪಟ್ಟಣ ಪಂಚಾಯಿತಿ, ತೀರ್ಥಹಳ್ಳಿ ರಹಮತ್ ಉಲ್ಲಾ ಅಸಾದಿ, ಎಂ. ಉದ್ಯಮಿಗಳು, ಪೂನಾ ಸದಾನಂದ ನಾಯಕ್ ಮಾಳ, ಜಂಟಿ ನಿರ್ದೇಶಕರು, ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ, ದಕ್ಷಿಣ ಕನ್ನಡ ಗೋಕುಲದಾಸ್ ನಾಯಕ್, ಗೀತಾಂಜಲಿ ಟೆಕ್ಸ್ ಟೈಲ್ಸ್, ಉಡುಪಿ ಸಂತೋಷ್ ವಾಗ್ಲೆ, ಅಧ್ಯಕ್ಷರು, ಸರಸ್ವತಿ ಸೌಹಾರ್ದ ಸಹಕಾರಿ ಪುತ್ತೂರು ಸತೀಶ್ಚಂದ್ರ ಎಸ್.ಆರ್,ನಿವೃತ್ತ ಪ್ರಾಂಶುಪಾಲರು, ನಿಟ್ಟೂರು ಡಾ. ಶಾಂತಾರಾಮ ಪ್ರಭು, ಮುಖ್ಯ ಅತಿಥಿಗಳು ಭಾಗವಹಿಸಲಿದ್ದಾರೆ ಸರ್ವರಿಗೂ ಆಡಳಿತ ಮಂಡಳಿ ಸರ್ವರಿಗೂ ಸ್ವಾಗತ ಕೋರುತ್ತಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಆರ್ ಎಸ್ ಬಿ ಸಮುದಾಯದ ಪ್ರಧಾನ ಕಾರ್ಯದರ್ಶಿಯಾದ ಅಶೋಕ್ ನಾಯಕ್,
ಹೊಸಕೊಪ್ಪ ವಾಸುದೇವ ನಾಯಕ್, ಖಜಾಂಚಿ ರಾಘವೇಂದ್ರ ನಾಯಕ್, ಅಮರ್ ನಾಯಕ್, ಸಹಕಾರ್ಯದರ್ಶಿ ವಿಶ್ವನಾಥ ಪ್ರಭು, ಮುನ್ನೂರು ದೇವದಾಸ್, ಹಾಗೂ ಸತೀಶ್, ಹಾಗೂ ಸಮಿತಿಯ ಎಲ್ಲಾ ಪ್ರಮುಖರು ಉಪಸ್ಥಿತಿ ಇದ್ದರು.