ಎಸ್. ಎನ್. ಜಿ.ವಿ: ಸಂಘಟನೆಗೂ ಸೈ…ಸೇವೆಗೂ ಜೈ..!
– ವಾಟಗಾರು ಸರ್ಕಾರಿ ಶಾಲೆ ಲೈಬ್ರರಿಗೆ ಪುಸ್ತಕಗಳನ್ನು ನೀಡಿದ ಶ್ರೀ ನಾರಾಯಣಗುರು ವಿಚಾರ ವೇದಿಕೆ
– ತೀರ್ಥಹಳ್ಳಿಯಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಮಾಸಿಕ ಸಭೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಎಸ್ ಎನ್ ಜಿವಿ ತೀರ್ಥಹಳ್ಳಿ ಘಟಕದಿಂದ ಪ್ರತಿ ವರ್ಷವೂ ಸಾಮಾಜಿಕ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದು, ಈ ಬಾರಿ ದೇವಂಗಿ ಸಮೀಪದ ವಾಟಗಾರು ವಸತಿ ಶಾಲೆಯ ಲೈಬ್ರರಿಗೆ ಹಲವು ಪುಸ್ತಕಗಳನ್ನು ನೀಡಿದ್ದಾರೆ.
ಪ್ರತಿ ಬಾರಿಯೂ ಎಸ್ ಎನ್ ಜಿವಿ ಘಟಕವು ಹತ್ತು ಹಲವು ಸಾಮಾಜಿಕ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದು, ಎಸ್ ಎನ್ ಜಿ ವಿ ಘಟಕದ ಸಾಮಾಜಿಕ ಕಾರ್ಯ ತಾಲೂಕಿನ ಜನರ ಮೆಚ್ಚುಗೆ ಪಡೆದಿದೆ.
ಸಂಘಟನೆಯ ರಾಜ್ಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಹಾಗೂ ಜಿಲ್ಲಾ ಅಧ್ಯಕ್ಷರು ಆದ ಪ್ರವೀಣ್ ಹಿರೇ ಹಿರೇಗೋಡು, ರಾಜ್ಯ ಪ್ರದಾನ ಕಾರ್ಯದರ್ಶಿ ಸುಂಟ್ರಳ್ಳಿ ರಾಘವೇಂದ್ರ ಇವರ ಮಾರ್ಗದರ್ಶನದ ಮೇರೆಗೆ ರಾಜ್ಯ ಕಾರ್ಯಧ್ಯಕ್ಷರುಗಳಾದ ಮೂಡುಬ ರಾಘವೇಂದ್ರ, ಉಮೇಶ್ ಕಂಪ್ಯೂಟರ್ಸ್ ಅವರ ಸಹಯೋಗದೊಂದಿಗೆ ವಿಶಾಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ವ್ಯಾಪ್ತಿಯ ಮಹಿಳಾ ಹಾಗೂ ಪುರುಷ ನಿರ್ದೇಶಕರುಗಳು ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವಿದ್ಯಾರ್ಥಿಗಳಿಗೆ ಸನ್ಮಾನ, ಪುಸ್ತಕ ವಿತರಣೆ, ರಕ್ತದಾನ, ಅರೋಗ್ಯ ತಪಾಸಣೆ ಸೇರಿ ಅನೇಕ ಸೇವಾ ಕಾರ್ಯದ ಮೂಲಕ ಸಂಘಟನೆ ಗಮನ ಸೆಳೆದಿದೆ.
ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಮಾಸಿಕ ಸಭೆ
ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ (SNGV)ಮಾಸಿಕ ಸಭೆ ಮಯೂರ ಹೋಟೆಲ್ ಮೆಲ್ಬಾಗದಲ್ಲಿ ನಡೆಯಿತು. ರಾಜ್ಯ ಕಾರ್ಯಧ್ಯಕ್ಷರಾದ ಮುಡುಬ ರಾಘವೇಂದ್ರ,, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಹೊದಲ ಶಿವು , ಮಹಿಳಾ ಉಪಾಧ್ಯಕ್ಷರು ಆದ ಗೀತಾ ರಾಘವೇಂದ್ರ,, ಮಹಿಳಾ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾದ ಶಾಲಿನಿ ನಾಗರಾಜ್,ಸಹ ಕಾರ್ಯದರ್ಶಿ ಯಾದ ಶ್ರುತಿ ರವಿ ರವರುಗಳು ಸಮ್ಮುಖದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ತಾಲ್ಲೂಕು ಆರ್ಯ ಈಡಿಗ ಸಂಘದ ನಿರ್ದೇಶಕರಾದ ಜಾನಕಿ ಪುಟ್ಟಸ್ವಾಮಿ,, ತಾಲ್ಲೂಕು ಮಹಿಳಾ ಅಧ್ಯಕ್ಷರಾದ ಕುಸುಮ ಕುಮಾರ್, ಹೋಬಳಿ ಅಧ್ಯಕ್ಷರು ಗಳಾದ ಹೇಮರಾಜ್ ಶಿರಿಗಾರು,ಶ್ರೀಧರ್ ಮಕ್ಕಿಕೊಪ್ಪ,, ಅರುಣ್ ಜಂಬುವಳ್ಳಿ ಪಾಲ್ಗೊಂಡಿದ್ದರು. ಹಾಗೆ ತಾಲ್ಲೂಕು ನಿರ್ದೇಶಕರು ಹಾಗೂ ಪದಾಧಿಕಾರಿಗಳು ಆದ ಪೂರ್ಣೇಶ್ ಪೂಜಾರಿ,, ಕಾಂತರಾಜ್,, ನಾಗರಾಜ್ ಬೆಟ್ಟಮಕ್ಕಿ,ಪುಷ್ಪಲತಾ, ಮಮತಾ ಉಮೇಶ್, ವಿನೋಧಾ ವಿಶಾಲ್,, ಪ್ರವೀಣ್ ಮಂಡಗದ್ದೆ, ಸುಬ್ರಮಣ್ಯ, ಶ್ರೀಕಾಂತ್ ಬೆಟ್ಟಮಕ್ಕಿ, ರಾಮಚಂದ್ರ ಜನಗಲ್,ದೀಪು ಸಿಂಧೂವಾಡಿ,, ಮಂಜುನಾಥ್ ವೈ ಎಸ್ , ಸುಜಯಾ ಕಾಂತರಾಜ್,ಚೇತನಾ, ಸರೋಜ ಭಾಗವಹಿಸಿದ್ದರು.
ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಕಾರ್ಯದರ್ಶಿಗಳಾದ ದಿನೇಶ್ ಯಡೂರ್ ಹಾಗೂ ಶ್ವೇತಾ ಎಂ ನಡೆಸಿಕೊಟ್ಟರು. ಸಭೆಯ ಅಧ್ಯಕ್ಷತೆ ಯನ್ನು ವಿಶಾಲ್ ಕುಮಾರ್ ವಹಿಸಿ ಸಂಘಟನೆಯ ಬಗ್ಗೆ ಹಾಗೂ ಮುಂದಿನ ನಾರಾಯಣ ಗುರು ಜನ್ಮ ಜಯಂತಿ ಆಚರಣೆ ಬಗ್ಗೆ ಮಾತುಕತೆ ನಡೆಸಲಾಯಿತು.