ಆರಗ ಸೊಸೈಟಿಗೆ ಸಹನಾ ಉಪೇಂದ್ರ, ಜಗದೀಶ್ ಹಿರೇಗದ್ದೆ ಸಾರಥ್ಯ
– ಸೊಸೈಟಿ ಸಹಕಾರ ಭಾರತಿ ಪಾಲು: ಮತದಾರರಿಗೆ ಧನ್ಯವಾದಗಳು
– ಸೊಸೈಟಿ ಚುನಾವಣೆಯಲ್ಲಿ ಗೆದ್ದವರು ಯಾರು ಯಾರು?
NAMMUR EXPRESS NEWS
ತೀರ್ಥಹಳ್ಳಿ: ಆರಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸಹನಾ ಉಪೇಂದ್ರ ಹಾಗೂ ನೂತನ ಉಪಾಧ್ಯಕ್ಷರಾಗಿ ಜಗದೀಶ್ ಹಿರೇಗದ್ದೆ ಅವರು ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಅತೀ ಹೆಚ್ಚಿನ ಮತದ ಅಂತರದ ಗೆಲುವು ಸಾಧಿಸಿದ ಸಹನಾ ಉಪೇಂದ್ರ ಅವರು 100 ವರ್ಷದ ಇತಿಹಾಸದಲ್ಲಿ ಗೆದ್ದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಚುನಾವಣೆಯಲ್ಲಿ ಸಹಕರಿಸಿದ ನೂತನ ಎಲ್ಲಾ ನಿರ್ದೇಶಕರಿಗೆ, ಪಕ್ಷದ ಪ್ರಮುಖರಿಗೆ ಹಾಗೂ ಮತದಾರ ಬಾಂಧವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಸೊಸೈಟಿ ಚುನಾವಣೆಯಲ್ಲಿ ಗೆದ್ದವರು
ಗಂಗಾಧರ್ ಎ. ಆರ್, ತ್ರಿಮೂರ್ತಿ ಎನ್ ಎಲ್, ಮಹೇಶ್ ಎ. ಆರ್, ರಾಜಶೇಖರ್ ಎಚ್. ಜಿ, ಸಂದೀಪ್ ಕೆಟಿ, ಪ್ರಕಾಶ್ ಎ. ಜಿ, ಸತೀಶ್ ಎಚ್. ಕೆ, ಜಗದೀಶ್ ಎಚ್. ಆರ್, ಲಕ್ಷ್ಮಣ ಕೆ. ಎಂ, ಕುಸುಮ ಶಾಮಣ್ಣ, ಸಹನಾ ಉಪೇಂದ್ರ