ಶಾಲೆಗಳು ಪುನರಾರಂಭ: ಮಕ್ಕಳ ಚಿಲಿಪಿಲಿ ಶುರು!
– ಶಾಲೆ ಸಿಂಗರಿಸಿ ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ ಮಾಡಿದ ಶಿಕ್ಷಕರು
– ಇಂದಿರಾನಗರ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ
NAMMUR EXPRESS NEWS
ತೀರ್ಥಹಳ್ಳಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಇಂದಿನಿಂದ ಆರಂಭವಾಗುತ್ತಿದ್ದು, ತೀರ್ಥಹಳ್ಳಿ ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳು ಪ್ರಾರಂಭಗೊಂಡಿದ್ದು, ಎರಡು ತಿಂಗಳ ರಜೆ ಬಳಿಕ ಶಾಲೆಗೆ ಮರಳಲಿರುವ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ತೀರ್ಥಹಳ್ಳಿಯ ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಮಕ್ಕಳಲ್ಲೂ ಉದ್ದೇಶಿಸಿ ಇಂದಿರಾನಗರದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕುಸುಮ ರವರು ಮಾತನಾಡಿ ಈ ಶೈಕ್ಷಣಿಕ ವರ್ಷವನ್ನು ಶಿಕ್ಷಣ ಬಲವರ್ಧನ ವರ್ಷ ಎಂದು ಸರ್ಕಾರ ಘೋಷಿಸಿದೆ. ಈ ಸಲ ನಮಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಮೇ 25ರಂದು ನಮಗೆ ಸರಬರಾಜು ಮಾಡಿದ್ದಾರೆ. ಶಾಲಾ ಪ್ರಾರಂಭೋತ್ಸವ 31ನೇ ತಾರೀಕು ಇರುವುದರಿಂದ ಮಕ್ಕಳು ಅದೇ ದಿನ ಪುಸ್ತಕ ಹಿಡಿಯಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು. ಸರ್ಕಾರ ಸರ್ಕಾರಿ ಶಾಲೆಗೆ ಕ್ಷೀರ ಭಾಗ್ಯ, ಬಿಸಿ ಊಟ, ಮೊಟ್ಟೆ, ಚಿಕ್ಕಿ, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ, ಎಲ್ಲಾ ಪೋಷಕರು ಇದರ ಸದುಪಯೋಗಪಡಿಸಿಕೊಂಡು ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸಬೇಕು, ಪೋಷಕರು ಮಕ್ಕಳ ಕಡೆ ಗಮನಹರಿಸಬೇಕು ಎಂದರು.
ಶಿಕ್ಷಕಿ ರೇಣುಕಾ ಅವರು ಮಾತನಾಡಿ ಎರಡು ತಿಂಗಳ ರಜೆಯನ್ನು ಮುಗಿಸಿ, ತರಗತಿಗೆ ಆಗಮಿಸಿದ ಮಕ್ಕಳಿಗೆ ಸ್ವಾಗತವನ್ನು ಕೋರಿದರು. ನಂತರ ಮಾತನಾಡಿದ ಅವರು ಈ ವರ್ಷವನ್ನು ನಾವು ಸಂತೋಷದಿಂದ ಕಳೆಯಬೇಕು, ವಿದ್ಯ ಅಭಿವೃದ್ಧಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಹೇಳಿದರು. ಪೋಷಕರ ಮತ್ತು ಮಕ್ಕಳ ಹಾಗೂ ಎಸ್ ಡಿಎಂಸಿ ಅವರ ಮುಂದೆ ಸಹಕಾರವನ್ನು ಕೋರಿದರು. ತೀರ್ಥಹಳ್ಳಿ ತಾಲೂಕಿನ ಎಲ್ಲೆಡೆ ಶಾಲೆಗಳು ಶುರುವಾಗಿದೆ. ಮಕ್ಕಳನ್ನು ಶಿಕ್ಷಕರು ಸಂಭ್ರಮದಿಂದ ಸ್ವಾಗತಿಸಿದ್ದಾರೆ.