ದ್ವಿತೀಯ ಪಿಯುಸಿ: ತೀರ್ಥಹಳ್ಳಿ ಹುಡುಗನಿಗೆ 8ನೇ ರ್ಯಾಂಕ್
– ಉಡುಪಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಸಾಗರ್ ಸಾಧನೆ
– ಉದ್ಯಮಿ ಷಣ್ಮುಖ, ಸಾವಿತ್ರಿ ದಂಪತಿಯ ಪುತ್ರ
– ಐಎಎಸ್ ಅಧಿಕಾರಿಯಾಗುವ ಆಸೆ ಎಂದ ಸಾಗರ್
NAMMUR EXPRESS NEWS
ತೀರ್ಥಹಳ್ಳಿ/ಉಡುಪಿ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಪ್ರತಿಷ್ಠಿತ ಸಂಸ್ಥೆ ಉಡುಪಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಸಾಗರ್ ಇದೀಗ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದಿದ್ದಾರೆ. ವಿಜ್ಞಾನ ವಿಭಾಗದ ಮರು ಮೌಲ್ಯಮಾಪನದಲ್ಲಿ 8ನೇ ರ್ಯಾಂಕ್ ಪಡೆದಿದ್ದು ಇದೀಗ ತೀರ್ಥಹಳ್ಳಿಗೆ ಹೆಮ್ಮೆತರುವ ವಿಷಯವಾಗಿದೆ. ಇವರು ತೀರ್ಥಹಳ್ಳಿಯ ಬೆಟ್ಟಮಕ್ಕಿಯ ಉದ್ಯಮಿ ಷಣ್ಮುಖ ಹಾಗೂ ಸಾವಿತ್ರಿ ದಂಪತಿಯ ಪುತ್ರರಾಗಿದ್ದಾರೆ. ಇವರು ಕಠಿಣವಾಗಿ ಶ್ರಮವಹಿಸುತ್ತಿದ್ದು, ಪ್ರತಿದಿನ ವಿದ್ಯಾಭ್ಯಾಸದ ಮೇಲೆ ಗಮನಹರಿಸುತ್ತಿದ್ದರು. ಇವರು ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವಾಗ್ದೇವಿಯಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ್ದು, ಕ್ರಿಯೇಟಿವ್ ಕಾಲೇಜು ಉಡುಪಿಯಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದು, ಇದೀಗ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದಿದ್ದಾರೆ.
ಇವರಿಗೆ ತೀರ್ಥಹಳ್ಳಿಯ ಸ್ಥಳೀಯರು ಹಾಗೂ ಶಿಕ್ಷಕ ಸಿಬ್ಬಂದಿ ಹಾಗೂ ಪೋಷಕರು ಅಭಿನಂದಿಸಿದ್ದಾರೆ. ಸಾಗರ್ ಉತ್ತಮವಾಗಿ ಓದಿದ್ದಾನೆ. ಆತನಿಗೆ ಐಎಎಸ್ ಅಧಿಕಾರಿಯಾಗುವ ಆಸೆ ಇದೆ. ನಮ್ಮ ಮಗನ ಓದಿಗೆ ಆತನ ಪರಿಶ್ರಮ, ಕಾಲೇಜಿನ ಉಪನ್ಯಾಸಕರು, ಕಾಲೇಜಿನ ಉತ್ತಮ ವ್ಯವಸ್ಥೆ ಕಾರಣ ಎಂದಿದ್ದಾರೆ.