ಶ್ರೀ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆ ಸಂಭ್ರಮ ಶುರು!
– ಡಿ. 16ರಂದು ಅನ್ನದಾಸೋಹ, ಡಿ.19ಕ್ಕೆ ಹೊರೆ ಕಾಣಿಕೆಗೆ ಚಾಲನೆ
– ಬಂತು ಜಾಯಿಂಟ್ ವೀಲ್, ಎಲ್ಲಾ ಕಡೆ ಸುಣ್ಣ ಬಣ್ಣ..!
– ದೇಣಿಗೆ ಸಂಗ್ರಹಕ್ಕೆ ಅಂಗಡಿ ಅಂಗಡಿ ಭೇಟಿ ಮಾಡಿದ ಆರ್. ಎಂ
NAMMUR EXPRESS NEWS
ತೀರ್ಥಹಳ್ಳಿ: ಐತಿಹಾಸಿಕ ತೀರ್ಥಹಳ್ಳಿ ರಾಮೇಶ್ವರ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು ತೀರ್ಥಹಳ್ಳಿಯಲ್ಲಿ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಈ ವರ್ಷ ಹೊಸ ವರ್ಷಕ್ಕೆ ತೆಪ್ಪೋತ್ಸವ ಬಂದಿರುವ ಕಾರಣ ಇನ್ನಷ್ಟು ರಂಗೇರಲಿದೆ. ಡಿ. 30,31, ಜ.1 ಕ್ಕೆ ಜಾತ್ರೆ ಅದ್ದೂರಿಯಾಗಿ ನಡೆಯಲಿದ್ದು,ತೀರ್ಥಹಳ್ಳಿಯ ಐತಿಹಾಸಿಕ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಡಿ.30ಕ್ಕೆ ಸ್ನಾನ, ಡಿ.31 ರಥೋತ್ಸವ, ಜನವರಿ 1 ತೆಪ್ಪೋತ್ಸವ ನಡೆಯಲಿದೆ. ತೀರ್ಥಹಳ್ಳಿ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರಾ ಉತ್ಸವದ ಪೂರ್ವ ಸಿದ್ಧತೆ ನಡೆಯುತ್ತಿದೆ. ದೇವಸ್ಥಾನ ಸುತ್ತ ಮುತ್ತ ದೇವಸ್ಥಾನ ಸಮಿತಿ ಮತ್ತು ಪಟ್ಟಣ ಪಂಚಾಯತ್ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿಯು ಸ್ವಚ್ಛತಾ ಕಾರ್ಯವನ್ನು ಬಿರುಸಾಗಿ ನಡೆಸುತ್ತಿವೆ. ಜಾಯಿಂಟ್ ಜೋಡಣೆ ಕಾರ್ಯವೂ ಭರದಿಂದ ನಡೆಯುತ್ತಿದೆ. ದೇವಸ್ಥಾನ ಸುತ್ತಮುತ್ತ ಸ್ವಚ್ಛತೆ ನಡೆಯುತ್ತಿದೆ.
ಅನ್ನ ದಾಸೋಹ ಕಾರ್ಯಕ್ಕೆ ಚಾಲನೆ
ಶ್ರೀ ರಾಮೇಶ್ವರ ಜಾತ್ರೆಯಲ್ಲಿ ನಡೆಯುವ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಲುವಾಗಿ ಡಿ.16 ಸೋಮವಾರ ಬೆಳಿಗ್ಗೆ 11 ಘಂಟೆಗೆ ಶ್ರೀ ರಾಮೇಶ್ವರದಲ್ಲಿ ಪ್ರತಿ ವರ್ಷದಂತೆ ಶ್ರೀರಾಮೇಶ್ವರನ ಸನ್ನಿಧಿಯಲ್ಲಿ ಸಂಕಲ್ಪ ನಡೆದಿದೆ. ಈ ಸಂದರ್ಭದಲ್ಲಿ ಅನ್ನದಾಸೋಹದ ಸಮಿತಿಯ ಸದಸ್ಯರು ಮತ್ತು ಜಾತ್ರಾ ಸಮಿತಿಯ ಸಂಚಾಲಕರು ಸಮ್ಮುಖದಲ್ಲಿ ದೇವಸ್ಥಾನದ ಅರ್ಚಕರು ಸಂಕಲ್ಪವನ್ನು ಮಾಡಿಸಿದರು. ಶ್ರೀ ರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಯಾವುದೇ ನಿರ್ವಿಘ್ನ ಬಾರದ ಹಾಗೆ ನೆರವೇರಲಿ, ಜಾತ್ರಾ ಮಹೋತ್ಸವದ ಸಮಿತಿಯ ಎಲ್ಲಾ ಸದಸ್ಯರು ಒಮ್ಮನಸ್ಸಿನಿಂದ ಒಗ್ಗೂಡಿ ಶ್ರೀ ರಾಮೇಶ್ವರ ದೇವಸ್ಥಾನದ ರಥೋತ್ಸವದ ದಿವತಾ ಅತ್ಯಂತ ಯಶಸ್ವಿಯಾಗಿ ಶ್ರೀ ರಾಮೇಶ್ವರ ನಡೆಸಿಕೊಡಲಿ ಎಂದು ಅರ್ಚಕರು ಸಂಕಲ್ಪ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಡಿ.19ರ ಗುರುವಾರದಂದು ಅರ್ಚಕರು ಪೂಜೆ ನೆರವೇರಿಸಿ ನಂತರ ಹೊರೆ ಕಾಣಿಕೆಗೆ ಚಾಲನೆ ನೀಡಲಾಗುವುದು ಎಂದು ಜಾತ್ರಾ ಸಮಿತಿಯವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಾತ್ರಾಸಮಿತಿಯ ಸಂಚಾಲಕರಾದ ಸೊಪ್ಪು ಗುಡ್ಡೆ ರಾಘವೇಂದ್ರ, ಡಾ. ಸುಂದರೇಶ್, ಮತ್ತು ಜಾತ್ರಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಡಾ.ಆರ್.ಎಂ.ಮಂಜುನಾಥ ಗೌಡ ಅವರು ಭಾಗಿ…!
ಶ್ರೀ ರಾಮೇಶ್ವರ ಸ್ವಾಮಿ ಜಾತ್ರೆಯ ದೇಣಿಗೆ ಸಂಗ್ರಹದ ಸೇವೆಯಲ್ಲಿ ಸಮಿತಿಯ ಸದಸ್ಯರ ಜೊತೆಗೆ ಜಾತ್ರೆ ಸಮಿತಿಯ ಗೌರವ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ ಗೌಡ ಅವರು ಪಟ್ಟಣದಲ್ಲಿ ದೇಣಿಗೆ ಸಂಗ್ರಹಿಸಿ ಜಾತ್ರೆಗೆ ಸರ್ವರನ್ನು ಸ್ವಾಗತಿಸಿದರು.