ತೀರ್ಥಹಳ್ಳಿಯ ಡಾ.ಹೆಚ್.ಎಸ್.ಕೃಷ್ಣಪ್ಪ ಅವರಿಗೆ ರಾಜ್ಯ ಪ್ರಶಸ್ತಿ
– ಹೊಳೆಕೊಪ್ಪ ಮೂಲದ ಡಾ.ಹೆಚ್.ಎಸ್ ಕೃಷ್ಣಪ್ಪ ಅವರ ಸೇವೆಗೆ ಸಂದ ಫಲ
– ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕಾರ: ಶುಭಾಶಯಗಳು
NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ಸರ್ಕಾರವು ಕೊಡುವ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ತೀರ್ಥಹಳ್ಳಿ ತಾಲ್ಲೂಕು ಹೊಳೆಕೊಪ್ಪದ ಡಾ.ಹೆಚ್.ಎಸ್ ಕೃಷ್ಣಪ್ಪ ಆಯ್ಕೆಯಾಗಿದ್ದು,ಪ್ರಶಸ್ತಿ ಸ್ವೀಕರಿಸಿದ್ದಾರೆ. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸುಮಾರು 69 ಮಂದಿ ಸಾಧಕರನ್ನು ಗುರುತಿಸಲಾಗಿದೆ. ನ.1ರಂದು ಪ್ರಶಸ್ತಿ ಸ್ವೀಕರಿಸಿದರು. ಕುರುನಾಡು ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷದ ಸವಿ ನೆನಪಿನಲ್ಲಿ ಸುಮಾರು 50 ಮಂದಿ ಮಹಿಳೆಯರು ಹಾಗೂ 50 ಮಂದಿ ಪುರುಷರಿಗೆ ಕೊಡ ಮಾಡುವ ಪ್ರತಿಷ್ಠಿತ ಕರ್ನಾಟಕ ಸುವರ್ಣ 50ರ ರಾಜ್ಯ ಪ್ರಶಸ್ತಿಗೆ ತೀರ್ಥಹಳ್ಳಿ ತಾಲ್ಲೂಕು ಕಟ್ಟೆಹಕ್ಕಲು ಸಮೀಪದ, ಹೊಳೆಕೊಪ್ಪದ ಡಾ. ಹೆಚ್.ಎಸ್ ಕೃಷ್ಣಪ್ಪ ಭಾಜನರಾಗಿದ್ದಾರೆ.
ಹೊಳೆಕೊಪ್ಪ ಡಾ. ಹೆಚ್.ಎಸ್ ಕೃಷ್ಣಪ್ಪ ತೀರ್ಥಹಳ್ಳಿ ತಾಲ್ಲೂಕಿನ ಕಟ್ಟಿಹಕ್ಕಲು ಸಮೀಪದ ಹೊಳೆಕೊಪ್ಪದ ಸುಬ್ಬಯ್ಯ ಗೌಡ ಹಾಗೂ ಚಿನ್ನಮ್ಮ ದಂಪತಿಗಳ ಪುತ್ರರಲ್ಲಿ ಒಬ್ಬರು. 1933ರಲ್ಲಿ ಹುಟ್ಟಿದ ಕೃಷ್ಣಪ್ಪನವರು ವಿದ್ಯಾಭ್ಯಾಸ ಮಾಡಲು ತೀರಾ ಸಂಕಷ್ಟವಿದ್ದ ದಿನಗಳಲ್ಲೇ ಪ್ರೌಢಶಾಲಾ ಶಿಕ್ಷಣ ಪಡೆದವರು. ಎಸ್ಎಸ್ ಎಲ್ ಸಿ ಪೂರೈಸಿದಾಗ ವೈದ್ಯಕೀಯ ವೃತ್ತಿ ಮಾಡುವ ಹಂಬಲ ಹೊತ್ತ ಕೃಷ್ಣಪ್ಪ 1956ರಲ್ಲಿ ಬೆಂಗಳೂರಿನ ಯುನಿ ವರ್ಸಿಟಿ ಆಫ್ ಮೆಡಿಕಲ್ಸ್ ಸ್ಕೂಲಿನಲ್ಲಿ ಲೈಸೆನ್ಸಿಯೇಟೆಡ್ ಮೆಡಿಕಲ್ ಪ್ರಾಕ್ಟಿಷನರ್ ಪಾಸ್ ಮಾಡಿದರು. ಅಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಜನರಲ್ಲಿ ವ್ಯಾಪಕವಾಗಿ ಮನೆ ಮಾಡಿದ್ದ ಮೂಢನಂಬಿಕೆ, ನಾಟಿ ಪಂಡಿತರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪದ್ಧತಿಗೆ ಜನ ಮೊರೆ ಹೋಗಿದ್ದರು. ತೀರ ಬಡತನದ ಅಜ್ಞಾನ,ಮೂಢನಂಬಿಕೆ, ಅನಕ್ಷರತೆ, ಅನಾರೋಗ್ಯದಿಂದ ಬಳಲುತ್ತಿದ್ದು ಜನರಿಗೆ ಆಲೋಪತಿ ಔಷಧೀಯ ಬಗ್ಗೆ ಅರಿವಿರಲಿಲ್ಲ. ಮಲೆನಾಡಿನಲ್ಲಿ ಮಹಾಮಾರಿಯಾಗಿದ್ದ ಮಲೇರಿಯಾ ಎಂಬ ಸಾಂಕ್ರಾಮಿಕ ರೋಗ ಜನರನ್ನು ಬಲಿ ತೆಗೆದುಕೊಳ್ಳುತ್ತಿತ್ತು. ಮುಖ್ಯವಾಗಿ ಗರ್ಭಿಣಿಯರು ರಕ್ತ ಹೀನತೆಯಿಂದ ಸಾವನ್ನಪ್ಪುತ್ತಿದ್ದರು. ವೈದ್ಯಕೀಯ ಬಗ್ಗೆ ಆಲೋಪತಿ ಔಷಧಿಯ ಬಗ್ಗೆ ತಿಳುವಳಿಕೆ ಇಲ್ಲದೇ ಮೂಢನಂಬಿಕೆಯ ದಾಸರಾಗಿದ್ದ ಜನರಲ್ಲಿ ತಿಳುವಳಿಕೆ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ವೈದ್ಯರಾಗಲು ಕೃಷ್ಣಪ್ಪ ಪಣತೊಟ್ಟರು. ವೈದ್ಯಕೀಯ ಶಿಕ್ಷಣ ಮುಗಿಸಿದ ತಕ್ಷಣ ಕೃಷ್ಣಪ್ಪ ನವರಿಗೆ ಸರ್ಕಾರಿ ವೈದ್ಯರ ಕೆಲಸ ಸಿಕ್ಕಿತು. ಮೈಸೂರು ವಾಣಿ ವಿಲಾಸ್, ರಾಮನಗರ, ಬೆಂಗಳೂರು, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ತರಬೇತಿಯೊಂದಿಗೆ ಉತ್ತಮ ಕೆಲಸ ಮಾಡಿದ್ದ ಕೃಷ್ಣಪ್ಪ ತನ್ನ ಊರ ಸಮೀಪದ ಕಟಗಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ. ಮಂಜಿ ಬಂದಾಗ ಮಾಡಿದ ಕ್ರಾಂತಿಕಾರಕ ಬದಲಾವಣೆ ಅವರ ಸೇವೆಯ ಅವಧಿಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತದ್ದು, 1976-77ರಲ್ಲಿ ಆಗಷ್ಟೇ ಸರ್ಕಾರ ಜಾರಿಗೆ ತಂದಿದ್ದ ಜನಸಂಖ್ಯಾ ನಿಯಂತ್ರಣಕ್ಕಾಗಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮದ ಬಗ್ಗೆ ಜನರಿಗೆ ಅಷ್ಟಾಗಿ ತಿಳುವಳಿಕೆ ಇರಲಿಲ್ಲ, ಅಪರೇಷನ್ ಎಂದರೆ ಮನೆ ಬಿಟ್ಟು ಹೊರಗಡೆ ಇರುತ್ತಿದ್ದ ಹೆಂಗಸರು, ಆರೋಗ್ಯ ಇಲಾಖೆಯ ಜೀಪ್ ಕಂಡು ಭಯ ಪಡುತ್ತಿದ್ದರು. ಅಂತಹ ದಿನಗಳಲ್ಲಿ ಪ್ರತಿ ಮನೆಗೂ ತೆರಳಿ ಜನರಿಗೆ ಈ ಬಗ್ಗೆ ತಿಳುವಳಿಕೆ ನೀಡುವಲ್ಲಿ ಡಾ. ಕೃಷ್ಣಪ್ಪನವರ ಪ್ರಯತ್ನ ಹಾಗೂ ಅವರ ದಿಟ್ಟತನ ಈ ಭಾಗದ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಭಾರತ ವಿಕಾಸ ರತ್ನ ರಾಷ್ಟ್ರೀಯ ಪ್ರಶಸ್ತಿ
ಈಗಾಗಲೇ ಡಾ. ಹೆಚ್.ಎಸ್ ಕೃಷ್ಣಪ್ಪನವರ ಈ ಎಲ್ಲಾ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಬೆಂಗಳೂರಿನ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನವು ಪ್ರತಿ ವರ್ಷ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡ ಮಾಡುವ ‘ಭಾರತ ವಿಕಾಸ ರತ್ನ ರಾಷ್ಟ್ರೀಯ ಪ್ರಶಸ್ತಿ’, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾರತೀಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಸುಧಾರಣಾ ಸಂಸ್ಥೆಯ ಭಾರತ ಸಮಾಜ ರತ್ನ ರಾಷ್ಟ್ರೀಯ ಪ್ರಶಸ್ತಿ, ದ ಬೆಸ್ಟ್ ಸಿಟಿಜನ್ಸ್ ಆಫ್ ಇಂಡಿಯಾ ಅವಾರ್ಡ್ 2000, 2017ರಲ್ಲಿ ನಡೆದ ಸಾಗರೋತ್ಸವದ ರಾಷ್ಟ್ರಮಟ್ಟದ ಸಹೃದಯ ಪ್ರಶಸ್ತಿ ಸೇರಿ ಇವರ ಸಮಾಜಮುಖಿ ಚಟುವಟಿಕೆಗೆ ಹಲವಾರು ಸನ್ಮಾನಗಳು ದೊರೆತಿವೆ.