ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರರ ಜಾಡು: ಎನ್.ಐ.ಎ ದಾಳಿ!
– 4-5 ಕಡೆ ಅಧಿಕಾರಿಗಳ ಪರಿಶೀಲನೆ
– ಇನ್ನಷ್ಟು ಉಗ್ರ ಚಟುವಟಿಕೆ ಬಗ್ಗೆ ಮಾಹಿತಿ
– ಹಲವರ ಬಗ್ಗೆ ಶಂಕೆ: ಇನ್ನು ತನಿಖೆ ಚುರುಕು
NAMMUR EXPRESS NEWS
ತೀರ್ಥಹಳ್ಳಿ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತೀರ್ಥಹಳ್ಳಿಯಲ್ಲಿ ಸುಮಾರು 4ರಿಂದ 5 ಕಡೆ ಬೆಳ್ಳಂ ಬೆಳಗ್ಗೆ ಎನ್ ಐ ಎ ದಾಳಿ ನಡೆಸಿದ್ದು ಇನ್ನು ತಪಾಸಣೆ ನಡೆಸಲಾಗುತ್ತಿದೆ. ಈ ದಾಳಿ ಭಾರೀ ಮಹತ್ವ ಪಡೆದಿದೆ. ಅನೇಕ ಉಗ್ರ ಚಟುವಟಿಕೆಯಲ್ಲಿ ಹಲವರ ಹೆಸರು ಕೇಳಿ ಬಂದಿದ್ದು ಇತ್ತೀಚಿಗೆ ಬೆಂಗಳೂರಲ್ಲಿ ನಡೆದ ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದಲ್ಲಿ ತೀರ್ಥಹಳ್ಳಿ ಮೂಲದ ಇಬ್ಬರ ಹೆಸರು ಕೇಳಿ ಬಂದಿತ್ತು. ಇದೀಗ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಬೆಟ್ಟಮಕ್ಕಿ, ಪಟ್ಟಣದ ಗಾಂಧಿ ಚೌಕದ ಒಂದು ಅಂಗಡಿ ಸೇರಿ ತೀರ್ಥಹಳ್ಳಿ ಪಟ್ಟಣದ 5ಕ್ಕೂ ಹೆಚ್ಚು ಕಡೆ ಎನ್ಐಎ ಟೀಂ ದಾಳಿ ನಡೆದಿದೆ. 5 ತಂಡಗಳಲ್ಲಿ ಬಂದ ಅಧಿಕಾರಿಗಳು ಭಾರೀ ತನಿಖೆ ನಡೆಸುತ್ತಿದ್ದಾರೆ.
ತೀರ್ಥಹಳ್ಳಿಯ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿಯಲ್ಲಿ ಎನ್ಐಎ ಅಧಿಕಾರಿಗಳು ದಾಳಿ ಇನ್ನು ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ಮಾಹಿತಿ ಲಭ್ಯ ಆಗಿಲ್ಲ. ಬೆಂಗಳೂರಿನಿಂದ 5ಕ್ಕೂ ವಾಹನದಲ್ಲಿ ಬಂದಿರುವ 15 ಕ್ಕೂ ಹೆಚ್ಚು ಎನ್ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಎನ್ಐಎ ಟೀಮ್ ದಾಳಿ ಮಾಡಿದ್ದಾರೆ. ಕೆಲ ಶಂಕಿತರ ಮನೆಯ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.