ತೀರ್ಥಹಳ್ಳಿ ಆರ್.ಎಸ್.ಬಿ ಸಭಾ ಭವನ ಲೋಕಾರ್ಪಣೆ!
* 3 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸಭಾ ಭವನ
* ಅಚ್ಚುಕಟ್ಟಿನ ಕಾರ್ಯಕ್ರಮ: ಅತಿಥಿಗಳ ಮೆಚ್ಚುಗೆ
* ಉದ್ಯಮಿ ನಟರಾಜ ಕಾಮತ್ ಸಹಕಾರಕ್ಕೆ ಗೌರವ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ರಾಜಾಪುರ ಬ್ರಾಹ್ಮಣ ಸಮಾಜ ತಾಲ್ಲೂಕಿನಲ್ಲೇ ಅತ್ಯಂತ ವ್ಯವಸ್ಥಿತವಾದ, ವಿಶಾಲವಾದ ಆರ್.ಎಸ್.ಬಿ.ಸಭಾ ಭವನವನ್ನು ಅಂದಾಜು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಬುಧವಾರ ತೀರ್ಥಹಳ್ಳಿ ಕುರುವಳ್ಳಿ ಪುತ್ತಿಗೆ ಮಠದ ಸಮೀಪದಲ್ಲೇ ನಿರ್ಮಾಣಗೊಂಡಿರುವ ಆರ್ಎಸ್ ಬಿ ಸಭಾಭವನದ ಲೋಕಾರ್ಪಣೆ ಸಮಾರಂಭ ಸಂಭ್ರಮದಿಂದ ನಡೆದಿದ್ದು ಇಡೀ ಸಮುದಾಯಕ್ಕೆ ಅಂದು ಹಬ್ಬದ ಅನುಭವವಾಯಿತು.
ಸಮಾರಂಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡರಲ್, ಗ್ರಾ.ಪಂ.ಅಧ್ಯಕ್ಷ ಬಂಡೆ ವೆಂಕಟೇಶ್, ಪ.ಪಂ.ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಉದ್ಯಮಿ ಎಂ.ಸದಾನಂದ ನಾಯಕ್ ದಕ್ಷಿಣ ಕನ್ನಡ ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಉಡುಪಿ ಗೀತಾಂಜಲಿ ಟೆಕ್ಸ್ ಟೈಲ್ಸ್ನ ಮಾಲೀಕರಾದ ಸಂತೋಷ್ ವಾಗ್ಗೆ, ಪುತ್ತೂರು ಸರಸ್ವತಿ ಸೌಹಾರ್ದ ಸಹಕಾರಿ ಅಧ್ಯಕ್ಷರಾದ ಎಸ್.ಆರ್.ಸತೀಬ್ ಚಂದ್ರ, ನಿಟ್ಟೂರು ಶಾಂತರಾಮ ಪ್ರಭು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಗೋವಾ ಕೈವಲ್ಯ ಮಠದ ಶ್ರೀ ಶ್ರೀ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಅವರ ಆಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯಿತು. ಆರ್ಎಸ್ ಬಿ ಸಭಾಭವನ ನಿರ್ಮಾಣಕ್ಕೆ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡಿದ ಉದ್ಯಮಿ ರಂಜಕಟ್ಟೆ ಶ್ರೀ ನಟರಾಜ್ ಕಾಮತ್ ಗೌರವ ಉಪಸ್ಥಿತರಿದ್ದರು. ತಾಲ್ಲೂಕು ಆರ್ಎಸ್ಬಿ ಅಧ್ಯಕ್ಷರಾದ ಸುಮಾ ರಾಮಚಂದ್ರ ಬೋರ್ಕಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರಮುಖರು, ಆರ್ಎಸ್ ಬಿ ಆಡಳಿತ ಮಂಡಳಿ ಪದಾಧಿಕಾರಿಗಳೂ ಆದ ಎಸ್.ಎನ್. ಸುರೇಶ್, ಸುರಭಿ ಅಶೋಕ್, ಹೆಚ್.ಎನ್.ರಾಘವೇಂದ್ರ ಭಾಗವ್, ಹೊದಲ ವಿಶ್ವನಾಥ ಪ್ರಭು, ಕುಶಾವತಿ ರಾಘವೇಂದ್ರ ನಾಯಕ್, ಮೇಲಿನಕುರುವಳ್ಳಿ ಟಿ.ಎಂ.ರಾಘವೇಂದ್ರ, ಬೇಗಾರು ರಮೇಶ್, ಕುರುವಳ್ಳಿ ಸುಧಾ ಸುರೇಶ್, ಬೊಬ್ಬಿಸುಮಾ ಕುಟ್ಟಿನಾಯಕ್, ಸೊಪ್ಪುಗುಡ್ಡೆ ರಾಘವೇಂದ್ರ ನಾಯಕ್, ಕೊಪ್ಪರಕ್ಷಿತ್, ವಿಶ್ವನಾಥ್ ಎಸ್.ನಾಯಕ್, ಕೋಲ್ದಾರ್ ಅಮರ್ ಮುಂತಾದವರು ಸಭಾಭವನ ನಿರ್ಮಾಣ, ಉದ್ಘಾಟನಾ ಸಮಾರಂಭದ ಯಶಸ್ಸಿಗೆ ಶ್ರಮಿಸಿದ್ದು ಅವರುಗಳನ್ನು ಅತಿಥಿಗಣ್ಯರು ಅಭಿನಂದಿಸಿದರು.
ಉದ್ಯಮಿ ನಟರಾಜ ಕಾಮತ್ ಸಹಕಾರಕ್ಕೆ ಗೌರವ
ರಾಜಾಪುರ ಬ್ರಾಹ್ಮಣ ಸಮಾಜದ ನೂತನ ಸಭಾಭವನ ನಿರ್ಮಾಣಕ್ಕೆ ಸಮಾಜದ ಪ್ರತಿಯೊಬ್ಬರೂ ತಮ್ಮ ಶಕ್ತಾನುಸಾರ ನೆರವು-ಸಹಕಾರ ನೀಡಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರರವರು ಸರ್ಕಾರದಿಂದ ಅಂದಾಜು 50 ಲಕ್ಷ ರೂಪಾಯಿಗಳ ಅನುದಾನ ಒದಗಿಸಿದ್ದರು. ಸಮಾಜದ ಗೌರವಾಧ್ಯಕ್ಷರೂ, ಯಶಸ್ವಿ ಉದ್ಯಮಿಗಳೂ ಆದ ರಂಜದಕಟ್ಟೆಯ ನಟರಾಜ್ ಕಾಮತ್ ಕಟ್ಟಡ ನಿರ್ಮಾಣದ ವಿವಿಧ ಹಂತಗಳಲ್ಲಿ ದೊಡ್ಡ ಮಟ್ಟದ ಆರ್ಥಿಕ ನೆರವು ಒದಗಿಸಿದ್ದರು. ಸಮಾರಂಭದಲ್ಲಿ ಗುರುತಿಸಿ ಅಭಿನಂದನೆ ಸಲ್ಲಿಸಲಾಯಿತು.