ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!
– ವಿದ್ಯುತ್ ಕಡಿತ ಖಂಡಿಸಿ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ
– ಕಾಂಗ್ರೆಸ್ ವಿರುದ್ಧ ಆರಗ ಜ್ಞಾನೇಂದ್ರ ಸಿಡಿಮಿಡಿ
– ಪ್ರತಿಯೊಬ್ಬರು ಸ್ವಾತಂತ್ರ್ಯ ಹಬ್ಬ ಆಚರಿಸಲು ಮನವಿ
NAMMUR EXPRESS NEWS
ತೀರ್ಥಹಳ್ಳಿ: ಕಾಂಗ್ರೆಸ್ ಸರ್ಕಾರ ಉಚಿತ ಭಾಗ್ಯದ ಹೆಸರಲ್ಲಿ ಜನರ ಕಿವಿಗೆ ಹೂ ಮುಡಿಸುತ್ತಿದೆ. ತೀರ್ಥಹಳ್ಳಿ ಸೇರಿದಂತೆ ಎಲ್ಲೆಡೆ ಈಗ ವಿದ್ಯುತ್ ಕಡಿತ ಸಮಸ್ಯೆ ಹೆಚ್ಚಾಗಿದೆ. ಇದರಿಂದ ರೈತರು ಸೇರಿದಂತೆ ಜನರಿಗೆ ತೊಂದರೆ ಆಗುತ್ತಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಕೂಡ ಲೋಡ್ ಶೆಡ್ಡಿಂಗ್ ಮಾಡುತ್ತಿರುವಂತಹ ದುಸ್ಥಿತಿಗೆ ಇಳಿದಿದೆ. ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ತುಂಗಾ ನದಿಯಲ್ಲಿ ನೀರು ಇಲ್ಲದಿದ್ದರೂ ನಾವು ವಿದ್ಯುತ್ ಕೊಟ್ಟಿದ್ದೆವು. ಬಿಜೆಪಿ ಸರಕಾರ ಲೋಡ್ ಶೆಡ್ಡಿಂಗ್ ಮಾಡದೆ ದಿನದ 24 ಗಂಟೆಯೂ ಕರೆಂಟ್ ಅನ್ನು ಕೊಟ್ಟಿದೆ. ಆದರೆ ಈಗ ವಿದ್ಯುತ್ ನೀಡದೆ ಜನರಿಗೆ ತೊಂದರೆ ಕೊಡುತ್ತಿದೆ.
ಬಿಟ್ಟಿ ಭಾಗ್ಯಗಳಿಗೆ ಸರ್ಕಾರ ಹಣ ಕೊಡುತ್ತಿದೆ. ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡು ಇಲ್ಲ. ಬಿಟ್ಟಿ ಭಾಗ್ಯ ಯೋಜನೆ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ನಡೆಸಲು ಆಗುತ್ತಿಲ್ಲ. ವಿದ್ಯುತ್ ಇಲ್ಲದೆ ರೈಸ್ ಮಿಲ್, ವರ್ಕ್ ಶಾಪಿನಂತಹ ಸಣ್ಣ ಸಣ್ಣ ಉದ್ಯಮಗಳ ಮೇಲೆ ಬಹಳ ದೊಡ್ಡ ಹೊಡೆತ ಬೀಳುತ್ತದೆ. ಕೆಪಿಸಿಗೆ ಎಸ್ಕಾಂ ಗಳು 9,000 ಕೋಟಿ ರೂ ಕೊಡಲು ಬಾಕಿ ಇದೆ. ಅಲ್ಲದೆ ಈಗ 200 ಯೂನಿಟ್ ವರೆಗೂ ವಿದ್ಯುತ್ ಫ್ರೀ ಎಂದು ಹೇಳಿದ್ದಾರೆ. ಈ ಲೋಡ್ ಶೆಟ್ಟಿಂಗ್ ಇಂದ 200 ಯೂನಿಟ್ ಉರಿಸಲು ಆಗುವುದಿಲ್ಲ. ವಿದ್ಯುತ್ ಕೊಡದೆ ಉಚಿತ ಕೊಡುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರಿಗೆ ಕಿವಿ ಮೇಲೆ ಹೂ ಇಡುವಂತಹ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ, ಕಾಂಗ್ರೆಸ್ ಅವರಿಗೆ ಸರಕಾರ ನಡೆಸಲು ಆಗುತ್ತಿಲ್ಲ. ಬಸ್ ಫ್ರೀ ಅಂತ 720 ಕೋಟಿ ಹೋದ ತಿಂಗಳು ಬಸ್ ನಿಗಮಕ್ಕೆ ಕಟ್ಟಬೇಕು, ಬಹುಷಃ ಮುಂದಿನ ತಿಂಗಳಿನಿಂದ ಕೆ ಎಸ್ ಆರ್ ಟಿ ಸಿ ಬಸ್ಸುಳಿಗೆ ಡೀಸೆಲ್ ಇಲ್ಲ, ಆ ನೌಕರರಿಗೆ ಸಂಬಳವನ್ನು ಕೊಡಲು ಆಗುತ್ತಿಲ್ಲ. ಇನ್ನೂ ಒಂದು ಎರಡು ತಿಂಗಳು ಕಳೆದರೆ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೂ ಸಂಬಳ ಕೊಡಲು ಇವರ ಬಳಿ ದುಡ್ಡಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಗುರಿ ಲೋಕ ಸಭೆ ಚುನಾವಣೆ
ಕಾಂಗ್ರೆಸ್ ಪಕ್ಷದ ಮುಂದಿನ ಗುರಿ ಲೋಕಸಭೆಯಲ್ಲಿ ಗೆಲ್ಲುವುದು. ಈ ಕಾರಣಕ್ಕಾಗಿ ಅವರು ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಜನರ ತಲೆ ಮೇಲೆ ಚಪ್ಪಡಿ ಎಳೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಮಂತ್ರಿ ಸ್ಥಾನದಲ್ಲಿರುವವರು ಇದನ್ನು ಮಾಡಬಾರದು ಎಂದು ಆರಗ ಟೀಕಿಸಿದರು.
ಪ್ರತಿ ಮನೆಯಲ್ಲಿ ಹಾರಲಿ ತಿರಂಗಾ!
ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಾಗೆ ಪ್ರತಿಯೊಬ್ಬರು ತಮ್ಮ ಮನೆ, ಕಚೇರಿ, ಅಂಗಡಿಗಳಲ್ಲಿ ತಿರಂಗಾ ಹಾರಿಸಬೇಕು ಎಂದು ಆರಗ ಮನವಿ ಮಾಡಿದರು.
ಬಿಜೆಪಿಯಿಂದ ಪಟ್ಟಣದಲ್ಲಿ ಮೆರವಣಿಗೆ
ತೀರ್ಥಹಳ್ಳಿ ಪಟ್ಟಣದ ಬಿಜೆಪಿ ಕಚೇರಿಯಿಂದ ಆಗುಂಬೆ ಬಸ್ ನಿಲ್ದಾಣ ಅಲ್ಲಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಬಿಜೆಪಿ ನಾಯಕರಾದ ಮದನ್, ರಾಘವೇಂದ್ರ ಬಾಳೆಬೈಲು, ಕವಿರಾಜ್ ಬೇಗುವಳ್ಳಿ, ಕುಕ್ಕೆ ಪ್ರಶಾಂತ್, ಚಂದವಳ್ಳಿ ಸೋಮಶೇಖರ್, ಶ್ರೀನಿವಾಸ್ ಕಾಸರವಳ್ಳಿ, ಸಾಲೆಕೊಪ್ಪ ರಾಮಚಂದ್ರ, ಸಂದೇಶ್ ಜವಳಿ, ಆರಗ ಜಗದೀಶ್, ಅಂಜೂರ ಕುಡುಮಲ್ಲಿಗೆ ಸೇರಿದಂತೆ ಅನೇಕ ನಾಯಕರು, ಮುಖಂಡರು ಇದ್ದರು.
ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!
HOW TO APPLY : NEET-UG COUNSELLING 2023