ಮೃತಪಟ್ಟ ಅಜ್ಜಿ ನೋಡಲು ಬಂದ ಇಬ್ಬರು ಯುವಕರ ಸಾವು!
– ತೀರ್ಥಹಳ್ಳಿ ತಾಲೂಕು ಹೊಸೂರು ಯುವಕರು ಅಪಘಾತಕ್ಕೆ ಬಲಿ
– ಶಿವಮೊಗ್ಗದ ಹೊಳೆಹೊನ್ನೂರು ಬಳಿ ಅಪಘಾತ: ಇಂದು ಅಂತ್ಯಕ್ರಿಯೆ
NAMMUR EXPRESS NEWS
ತೀರ್ಥಹಳ್ಳಿ: ಮೃತಪಟ್ಟ ತನ್ನ ಅಜ್ಜಿಯ ಅಂತಿಮ ದರ್ಶನಕ್ಕೆ ಬರುತ್ತಿದ್ದ ತೀರ್ಥಹಳ್ಳಿ ಮೂಲದ ಇಬ್ಬರು ಯುವಕರು ಅಪಘಾತಕ್ಕೆ ಬಲಿಯಾದ ಘಟನೆ ಗುರುವಾರ ಶಿವಮೊಗ್ಗ ಸಮೀಪದ ಹೊಳೆಹೊನ್ನೂರು ಬಳಿ ನಡೆದಿದೆ. ತೀರ್ಥಹಳ್ಳಿ ತಾಲೂಕು ಹೊಸೂರು ಗುಡ್ಡೆಕೇರಿಯ ಲಕ್ಷ್ಮಿ ದೇವಿ ಪುತ್ರ ಪವನ್(28) ಮತ್ತು ರಾಘವೇಂದ್ರ ಆಚಾರಿ ಧನುಷ್ ಆಚಾರಿ (24) ಬೈಕಿನಲ್ಲಿ ಬರುವಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲೇ ಸಾವು ಕಂಡಿದ್ದು, ಓರ್ವ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾನೆ.
ನಾಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನಾಗರತ್ನಮ್ಮ ಅವರ ಅಂತಿಮ ದರ್ಶನ ಮಾಡಲು ಬೆಂಗಳೂರಿಂದ ಬೈಕಿನಲ್ಲಿ ಚಿತ್ರದುರ್ಗ ಮಾರ್ಗವಾಗಿ ಬರುತ್ತಿದ್ದ ವೇಳೆ ಲಾರಿ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಬೈಕ್ ಒಂದು ಅಡ್ಡ ಬಂದಿದೆ. ಆ ಬೈಕ್ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿ ಮೃತ ಪಟ್ಟು ಮತ್ತೊರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇಬ್ಬರು ಹೊಸೂರು ಗುಡ್ಡೆಕೇರಿ ಶಾಲೆಯಲ್ಲಿ ಓದಿ ಕೆಲಸದ ಮೇಲೆ ಬೆಂಗಳೂರಲ್ಲಿದ್ದರು.
ಇಡೀ ಊರಲ್ಲಿ ಸ್ಮಶಾನ ಮೌನ!
ತೀರ್ಥಹಳ್ಳಿ ತಾಲೂಕು ಹೊಸೂರಲ್ಲಿ ಇದೀಗ ಎರಡು ದಿನದ ಅಂತರದಲ್ಲಿ ಮೂರು ಸಾವು ಇಡೀ ಊರನ್ನು ಸ್ಮಶಾನ ಮೌನಕ್ಕೆ ಜಾರಿಸಿದೆ.