ತೀರ್ಥಹಳ್ಳಿ ತಹಸೀಲ್ದಾರ್ ಹುಟ್ಟೂರಲ್ಲಿ ಇಂದು ಅಂತಿಮ ದರ್ಶನ!
– ಬೆಂಗಳೂರು ಲಾಡ್ಜ್ ಅಲ್ಲಿ ಸಾವು: ಮರಣೋತ್ತರ ಪರೀಕ್ಷೆ
– ತೀರ್ಥಹಳ್ಳಿಯಿಂದ ನೂರಾರು ಸಿಬ್ಬಂದಿ ಗದಗಕ್ಕೆ ಪಯಣ
– ಶಾಸಕ ಆರಗ ಸೇರಿ ಎಲ್ಲಾ ನಾಯಕರ ಸಂತಾಪ
– ತೀರ್ಥಹಳ್ಳಿ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅಧಿಕಾರಿ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ತಹಶೀಲ್ದಾರ್ ಜಿ.ಬಿ.ಜಕ್ಕಣಗೌಡರ್ (56) ಬುಧವಾರ ಬೆಂಗಳೂರಿನ ಖಾಸಗಿ ಲಾಡ್ಜ್ ವೊಂದರಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದು ಅವರ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದ್ದು ಅವರ ಮೃತ ದೇಹ ತವರೂರು ಗದಗಕ್ಕೆ ತೆಗೆದುಕೊಂಡು ಹೋಗಲು ಕುಟುಂಬದವರು ನಿರ್ಧಾರ ಮಾಡಿದ್ದಾರೆ.
ಬೆಂಗಳೂರು ಮೆಜೆಸ್ಟಿಕ್ ಬಳಿ ಲಾಡ್ಜ್ ಅಲ್ಲಿ ಅವರು ಸಾವನ್ನು ಕಂಡಿದ್ದರು. ಹೈಕೋರ್ಟ್ ಕೆಲಸದ ನಿಮಿತ್ತ ಮಂಗಳವಾರ ತೀರ್ಥಹಳ್ಳಿಯಿಂದ ತೆರಳಿದ್ದರು. ಫೋನ್ ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ನೌಕರರು ಸಂಪರ್ಕ ಸಾಧಿಸುವ ಪ್ರಯತ್ನ ನಡೆಸಿದ್ದರು. ಅವರು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. . ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಅಧಿಕಾರಿಗಳು ಸ್ಥಳದಲ್ಲಿದ್ದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಮೃತರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಪತ್ನಿ ಇದ್ದಾರೆ.
ತೀರ್ಥಹಳ್ಳಿ ಅಧಿಕಾರಿಗಳು, ಸಿಬ್ಬಂದಿಯ ಸಂತಾಪ
ತೀರ್ಥಹಳ್ಳಿ ಅಧಿಕಾರಿಗಳು, ತಹಸೀಲ್ದಾರ್ ಕಚೇರಿ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.ಸಿಬ್ಬಂದಿಗಳ ಅಚ್ಚು ಮೆಚ್ಚಿನ ತಹಸೀಲ್ದಾರ್ ಆಗಿದ್ದರು. ತೀರ್ಥಹಳ್ಳಿಗೆ ಸುಮಾರು 11 ತಿಂಗಳ ಹಿಂದೆ ಬಂದಿದ್ದ ಅವರು ನವೆಂಬರ್ ತಿಂಗಳಿಗೆ ಒಂದು ವರ್ಷ ಆಗುತ್ತಿತ್ತು ತೀರ್ಥಹಳ್ಳಿ ಜನರ ಬಗ್ಗೆ ಮೆಚ್ಚುಗೆ ಮಾತನಾಡುತ್ತಿದ್ದ ಅವರು ಇತ್ತೀಚಿಗೆ ದಸರಾ, ಕನ್ನಡ ತೇರು ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು. ಅವರ ಮೊಗದಲ್ಲಿ ಯಾವುದೇ ಛಾಯೆ ಕಾಣುತ್ತಿರಲಿಲ್ಲ.
ತೀರ್ಥಹಳ್ಳಿ ತಹಸೀಲ್ದಾರ್ ಕಚೇರಿಯ 25-30 ಮಂದಿ ಸಿಬ್ಬಂದಿ ಗದಗಕ್ಕೆ ತೆರಳಿ ಅಂತಿಮ ದರ್ಶನ ಪಡೆಯಲಿದ್ದಾರೆ.
ಶಾಸಕ ಆರಗ ಸೇರಿ ಅನೇಕ ನಾಯಕರ ಸಂತಾಪ
ನ್ಯಾಯಲಯದ ವಿಚಾರವಾಗಿ ಬೆಂಗಳೂರಿಗೆ ತೆರಳಿದ್ದ ತೀರ್ಥಹಳ್ಳಿ ತಹಶೀಲ್ದಾರ್ ಜಕ್ಕಣ್ಣಗೌಡರವರು ತಾವು ಉಳಿದುಕೊಂಡಿದ್ದ ಹೋಟೆಲ್ನಲ್ಲಿ ಆಕಸ್ಮಿಕ ಮರಣ ಹೊಂದಿದ್ದು ತೀವ್ರ ಆಘಾತ ತಂದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲೇ ಇದ್ದ ಶಾಸಕರು ವಿಷಯ ತಿಳಿದ ತಕ್ಷಣವೇ ತಹಶೀಲ್ದಾರ್ ಅವರ ಪಾರ್ಥಿವ ಶರೀರ ಇದ್ದ ಲಾಡ್ಜ್ ಭೇಟಿ ನೀಡಿ ಅವರ ಮಕ್ಕಳೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಸರಳ ಸಜ್ಜನಿಕೆಯ ಜೊತೆ ತುಂಬಾ ಸಮಾಧಾನದ ವ್ಯಕ್ತಿತ್ವ ಹೊಂದಿದ್ದ ಜಕ್ಕಣ್ಣಗೌಡರ ಅಕಾಲಿಕ ಮರಣದಿಂದಾಗಿ ಆಗಿರುವ ದುಖಃವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬದವರಿಗೆ ಹಿತೈಷಿಗಳಿಗೆ ನೀಡಲಿ ಎಂದು ಶಾಸಕರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.