ತುಂಗಾ ನದಿ ಉಳಿವಿಗಾಗಿ ಧ್ವನಿಯೆತ್ತಿದ ಶಿವಮೊಗ್ಗ ಟೀಮ್..!
– ನಮ್ಮ ಶಿವಮೊಗ್ಗ ಟೀಮ್ ಹೊಸ ಅಭಿಯಾನ
– ತುಂಗಾ ನದಿ ಬರಿದು ವಿಡಿಯೋ ವೈರಲ್ : ಲಕ್ಷ ಲಕ್ಷ ಜನರಿಂದ ವೀಕ್ಷಣೆ
– ತುಂಗಾ ನದಿ ಉಳಿಸಲು ಅಭಿಯಾನ ಶುರು?
NAMMUR EXPRESS NEWS
ತೀರ್ಥಹಳ್ಳಿ: ಬಿಸಿಲಿನ ತಾಪಮಾನಕ್ಕೆ ತೀರ್ಥಹಳ್ಳಿಯ ತುಂಗಾ ನದಿ ಬತ್ತಿದ್ದು, ಮಲೆನಾಡಿಗರಿಗೆ ಅಪಾಯದ ಸೂಚನೆ ನೀಡಿದೆ. ಎಲ್ಲಾ ಕಡೆ ಅಪಾಯದ ಕರೆಗಂಟೆ ಭಾರಿಸಿದೆ. ಈ ನಡುವೆ ತುಂಗಾ ನದಿ ಉಳಿವಿಗಾಗಿ ಅನೇಕ ಹೋರಾಟ ಅಭಿಯಾನಗಳು ಶುರುವಾಗಿದೆ. ಈಗ ನಮ್ಮ ಶಿವಮೊಗ್ಗ ಫೇಸ್ಬುಕ್ ಟೀಂನ ಗಗನ್ ಕೂಳೂರು, ಶರತ್ ಕೋಣೆಗದ್ದೆ ಮತ್ತು ಭರತ್ ಕೋಣೆಗದ್ದೆ ಇದರ ಬಗ್ಗೆ ಕಾಳಜಿ ವಹಿಸಿ ಬತ್ತಿದ ತುಂಗೆಯ ವಿಡಿಯೋ ಪ್ರಸಾರ ಮಾಡಿದ್ದು, ಈ ವಿಡಿಯೋ ಒಂದೇ ದಿನದಲ್ಲಿ 8 ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ. ಮಲೆನಾಡಿನ ಜನತೆ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಇದನ್ನು ಕೇವಲ ಸೋಶಿಯಲ್ ಮೀಡಿಯಾಗೆ ಮೀಸಲಿಡದೆ, ನಮ್ಮ ಶಿವಮೊಗ್ಗ ಟೀಮ್ ಮತ್ತು ಸುದರ್ಶನ್ ತಾಯಿಮನೆಯವರು, ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತದ ಅನುಮತಿ ಮತ್ತು ಸಹಯೋಗದೊಂದಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಇನ್ನೊಂದು ತಿಂಗಳೊಳಗೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.
ಮಲೆನಾಡಿನ ಸಮಸ್ಯೆಗಳಿಗೆ ದನಿ!
ಮಲೆನಾಡಿನ ಅನೇಕ ಜನಪರ ಹೋರಾಟಗಳಲ್ಲಿ ದನಿ ಎತ್ತುತ್ತಿರುವ ಈ ತಂಡ ಇದೀಗ ಜ್ವಲಂತ ಸಮಸ್ಯೆಗಳ ಬಗ್ಗೆ ದನಿ ಎತ್ತಿದ್ದಾರೆ.