ತೀರ್ಥಹಳ್ಳಿ ಕ್ರೀಡಾ ಸಾಧಕರು !
– ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮಾಳೂರು ಹೈಸ್ಕೂಲ್ ವಿದ್ಯಾರ್ಥಿನಿ ಆತ್ಮಿಕಾ
– ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿಸೇವಾಭಾರತಿಯ ನಹುಷ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
– ಬ್ಯಾಡ್ಮಿಂಟನ್: ತುಂಗಾ ಕಾಲೇಜಿನ ಮಹಿಳಾ ಕ್ರೀಡಾಪಟುಗಳ ಸಾಧನೆ
NAMMUR EXPRESS NEWS
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಬೆಂಗಳೂರು ವಿಭಾಗದ ಪ್ರೌಢಶಾಲೆ ವಿಭಾಗದ ಬಾಲಕಿಯರ ಕಬ್ಬಡ್ಡಿ ತಂಡದಲ್ಲಿ ತೀರ್ಥಹಳ್ಳಿ ಹುಡುಗಿ ಸ್ಥಾನ ಪಡೆದಿದ್ದಾಳೆ. ರಾಜ್ಯಮಟ್ಟದಲ್ಲಿ ಆಡಿದ ಹೆಮ್ಮೆಯ ವಿದ್ಯಾರ್ಥಿನಿ ಆತ್ಮಿಕ ತೀರ್ಥಹಳ್ಳಿ ತಾಲೂಕು ಮಾಳೂರು ಪ್ರೌಢಶಾಲೆ ವಿದ್ಯಾರ್ಥಿನಿ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟ ಆತ್ಮಿಕ ಇವರಿಗೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ. ಕಾನ್ಹಳ್ಳಿ ಬಿಸಿಲು ಮನೆಯ ಅಶೋಕ್, ಅನುಸೂಯ ದಂಪತಿಗಳ ಪುತ್ರಿ ಆತ್ಮಿಕ 10ನೇ ತರಗತಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮಾಳೂರು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿಸೇವಾಭಾರತಿಯ ನಹುಷ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ತೀರ್ಥಹಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ತಲಪಾಡಿಯ ದೇವಿ ನಗರದಲ್ಲಿರುವ ವಿದ್ಯಾಭಾರತಿ ಅಖಿಲ
ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿಸಿದ ವಿದ್ಯಾಭಾರತಿ ಕರ್ನಾಟಕ ಮತ್ತು ಶಾರದಾ ಸಮೂಹ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನಲ್ಲಿ ನಡೆದ ಪ್ರಾಂತ್ಯ ಮತ್ತು ಕ್ಷೇತ್ರ ಮಟ್ಟದ ವಿಜ್ಞಾನ ಮೇಳದಲ್ಲಿ ತೀರ್ಥಹಳ್ಳಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸೇವಾಭಾರತಿಯ ಏಳನೆಯ ತರಗತಿ ವಿದ್ಯಾರ್ಥಿ ನಹುಷ್ ಸೆನ್ಸಾರ್ ಆಧಾರಿತ ಮಾದರಿಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾನೆ. ಕರ್ನಾಟಕ-ಆಂದ್ರ ಹಾಗೂ ತೆಲಂಗಾಣ ರಾಜ್ಯಗಳ ಕ್ಷೇತ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ನಹುಷ್ ರಾಜಸ್ಥಾನದ ಜೈಪುರದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾನೆ.
ಕುರುವಳ್ಳಿಯ ನಾಗರತ್ನ ಹಾಗೂ ದಯಾನಂದ ದಂಪತಿಗಳ ಪುತ್ರನಾಗಿರುವ ಈ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಸೇವಾ ಭಾರತಿ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಶುಭ ಹಾರೈಸಿ ಅಭಿನಂದಿಸಿದೆ.
ಬ್ಯಾಡ್ಮಿಂಟನ್: ತುಂಗಾ ಕಾಲೇಜಿನ ಮಹಿಳಾ ಕ್ರೀಡಾಪಟುಗಳ ಸಾಧನೆ
ತೀರ್ಥಹಳ್ಳಿ: 18.10.2024 ರಿಂದ 20.10.2024ರವರೆಗೆ ಕುವೆಂಪು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯಾವಳಿಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರದಲ್ಲಿ ಆಯೋಜಿಸಿದ್ದು ತುಂಗಾ ಕಾಲೇಜಿನ ಮಹಿಳಾ ಕ್ರೀಡಾಪಟುಗಳು ಭಾಗವಹಿಸಿ ಸೆಕೆಂಡ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ. ತುಂಗಾ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು, ಸಿಬ್ಬಂದಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.