ತೀರ್ಥಹಳ್ಳಿ ಸರ್ಕಾರಿ ಪಿಯು ಕಾಲೇಜು ಹಳೆಯ ವಿದ್ಯಾರ್ಥಿಗಳ ಸಮಾವೇಶ
– ಅ.31ರಂದು ತೀರ್ಥಹಳ್ಳಿ ಟಿ.ಎ. ಪಿ. ಸಿ.ಎಂ.ಎಸ್ ಅಲ್ಲಿ ಸಮಾವೇಶ
– ಸಮಸ್ತ ಹಳೆಯ ವಿದ್ಯಾರ್ಥಿಗಳಿಗೆ ಆಹ್ವಾನ: ಸುಸ್ವಾಗತ
ತೀರ್ಥಹಳ್ಳಿ: ಸರ್ಕಾರಿ ಪದವಿ ಪೂರ್ವ ಕಾಲೇಜು, ತೀರ್ಥಹಳ್ಳಿ ಇದರ ಹಳೆಯ ವಿದ್ಯಾರ್ಥಿಗಳ ಸಮಾವೇಶ ಅ.31ರಂದು ಬೆಳಿಗ್ಗೆ 10.30 ಗಂಟೆಗೆ ತೀರ್ಥಹಳ್ಳಿಯ TAPCMS ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಓದಿರುವ ಹಳೆಯ ವಿದ್ಯಾರ್ಥಿಗಳು ತಾವು ಹಾಗೂ ತಮ್ಮ ಸ್ನೇಹಿತರನ್ನು ಈ ಸಮಾಲೋಚನಾ ಸಭೆಗೆ ಕರೆದುಕೊಂಡು ಬರಲು ಕೋರಲಾಗಿದೆ.ಕಾಲೇಜಿನ ಅಭಿವೃದ್ಧಿ ಜತೆಗೆ ಎಲ್ಲಾ ಹಳೆಯ ವಿದ್ಯಾರ್ಥಿಗಳ ಸಮ್ಮಿಲನಕ್ಕೆ ಈ ಸಮಾವೇಶ ವೇದಿಕೆ ಆಗಲಿದೆ. ಪ್ರೀತಿಯ ಹಳೆಯ ವಿದ್ಯಾರ್ಥಿಗಳೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ನಿಮ್ಮ ಸಲಹೆ ಸೂಚನೆ ನೀಡಿ. ಕಾಲೇಜಿನ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದು ಕಾಲೇಜು ಆಡಳಿತ ಮಂಡಳಿ ಮತ್ತು ಸಂಚಾಲಕರು ಮನವಿ ಮಾಡಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜು ತೀರ್ಥಹಳ್ಳಿ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಒಂದು ವೇದಿಕೆಯನ್ನು ಸೃಷ್ಟಿ ಮಾಡಿದೆ.. ಈ ಕಾಲೇಜು 1982ರಲ್ಲಿ ಶುರುವಾಗಿ ಹದಿನೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಉತ್ತಮವಾದ ಜೀವನವನ್ನು ನಡೆಸುತ್ತಿದ್ದಾರೆ. ಇದೀಗ ಎಲ್ಲಾ ಕಾಲೇಜುಗಳಂತೆ ತೀರ್ಥಹಳ್ಳಿ ತಾಲೂಕಿಗೆ ಅನೇಕ ಸಾಧಕರು, ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಕಾಲೇಜನ್ನು ಮತ್ತಷ್ಟು ಗಟ್ಟಿಗೊಳಿಸಲು ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಈ ಸಮಾವೇಶ ಹಮ್ಮಿಕೊಂಡಿದ್ದಾರೆ. ಕಾಲೇಜಿನಲ್ಲಿ 1982ನೇ ಇಸವಿಯಿಂದ 2022 ರವರೆಗೆ ದಾಖಲಾಗಿರುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಜತೆ ಭಾಗಿಯಾಗಲು ಕೋರಲಾಗಿದೆ. ಹಾಗೆಯೇ ತಮ್ಮ ಬ್ಯಾಚಿನ ಹಾಗೂ ಈ ಕಾಲೇಜಲ್ಲಿ ಓದಿದ ಸ್ನೇಹಿತ ಸ್ನೇಹಿತೆಯರಿಗೆ ಹಂಚಿಕೊಳ್ಳಲು ಮನವಿ ಮಾಡಲಾಗಿದೆ.