ಕಬ್ಬಿನ ಹಾಲು ಕುಡಿಯುವಾಗ ಚಿನ್ನಾಭರಣ ಎಸ್ಕೆಪ್ !
– ಶಿವಮೊಗ್ಗದಲ್ಲಿ ನಡೆದ ಘಟನೆ: ಏನಿದು ಕೇಸ್
– ಶಿವಮೊಗ್ಗ: ದರೋಡೆಗೆ ಸಂಚು: ಖದೀಮರ ಸೆರೆ
– ತೀರ್ಥಹಳ್ಳಿ: 7 ಮರಳು ತುಂಬಿದ ಲಾರಿ ಹಿಡಿದ ತಹಸೀಲ್ದಾರ್
– ಶಿಕಾರಿಪುರ: ಹೋರಿ ಬೆದರಿಸುವ ಸ್ಪರ್ಧೆ: ಯುವಕ ಸಾವು!
– ಭದ್ರಾವತಿ: ಜಿಂಕೆ ಶಿಕಾರಿ-ಮೂವರು ಅರೆಸ್ಟ್
NAMMUR EXPRESS NEWS
ಶಿವಮೊಗ್ಗ: ನಗರದ ಗಾಂಧಿಬಜಾರ್ನ ಕಬ್ಬಿನ ಅಂಗಡಿಯಲ್ಲಿ ಹಾಲು ಕುಡಿಯುವಾಗ ಮಹಿಳೆಯ ಪರ್ಸ್ನಲ್ಲಿದ್ದ 3.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಲಾಗಿದೆ. ತಾಲೂಕಿನ ವೀರಣ್ಣನಬೆನವಳ್ಳಿ ಗ್ರಾಮದ ಸವಿತಾ ಚಿನ್ನಾಭರಣ ಕಳೆದುಕೊಂಡ ಮಹಿಳೆ. ಸಹೋದರಿ ಅಭಿಲಾಷಿಣಿ ಅವರ ಜೊತೆ ಚಿನ್ನದಂಗಡಿಗೆ ಬಂದಿದ್ದ ಸವಿತಾ ಅವರು 6.780 ಗ್ರಾಂನ ಹ್ಯಾಂಗಿಂಗ್ಸ್ ಮತ್ತು ಕಿವಿ ಮಾಟಿಯನ್ನು ಖರೀದಿಸಿದ್ದರು. ನಂತರ ಸಮೀಪದಲ್ಲಿದ್ದ ಕಬ್ಬಿನ ಅಂಗಡಿಗೆ ತೆರಳಿ ಹಾಲು ಕುಡಿದಿದ್ದರು. ಬಳಿಕ ಅಂಗಡಿಯವನಿಗೆ ಹಣ ಕೊಡಲು ಪರ್ಸ್ ನೋಡಿದಾಗ ಜಿಪ್ ಅರ್ಧ ತೆರೆದಿತ್ತು. ಪರ್ಸ್ ತಪಾಸಣೆ ನಡೆಸಿದಾಗ ಚಿನ್ನಾಭರಣ ಇರಲಿಲ್ಲ. ಈ ಘಟನೆ ಬಗ್ಗೆ ಸವಿತಾ ಅವರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.
ದರೋಡೆಗೆ ಸಂಚು ಹಾಕುತ್ತಿದ್ದ ಗ್ಯಾಂಗ್ ಪೊಲೀಸರು ಬಂಧನ
ಶಿವಮೊಗ್ಗ: ದರೋಡೆಗೆ ಸಂಚು ಹಾಕುತ್ತಿದ್ದ ಗ್ಯಾಂಗ್ನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಎಸ್.ಆರ್.ಟಿ.ಸಿ ಡಿಪೋ ಬಳಿ ಮಂಜುನಾಥ ಬಡಾವಣೆಗೆ ಹೋಗುವ ದಾರಿಯಲ್ಲಿ ದರೋಡೆಗೆ ಸಂಚು ಹಾಕುತ್ತಿದ್ದ ಗ್ಯಾಂಗ್ನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಡಿಪೋ ಪಕ್ಕದ ಎಕ್ಸಿಬಿಷನ್ ಜಾಗದಲ್ಲಿ ಮಂಜುನಾಥ ಬಡಾವಣೆಗೆ ಹೋಗಲು ಇರುವ 80 ಅಡಿ ರಸ್ತೆಯಲ್ಲಿ ಓಡಾಡುವ ಜನರಿಗೆ ಖಾರದ ಪುಡಿ ಎರಚಿ ಆಯುಧ ತೋರಿ ಚಿನ್ನಾಭರಣವನ್ನು ದೋಚಲು ಒಂದು ಗ್ಯಾಂಗ್ ಸಿದ್ದವಾಗಿತ್ತು.
ಈ ಗ್ಯಾಂಗ್ ಪಕ್ಕಾ ದರೋಡೆಗೆ ಇಳಿದಿದೆ ಎಂಬ ಮಾಹಿತಿ ಪಡೆದ ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಬಂದು ದರೋಡೆಗೆ ಸಂಚು ಹಾಕುತ್ತಿರುವವರನ್ನು ಬಂಧಿಸಿದ್ದಾರೆ. ಇವರೆಲ್ಲಾ ಪೊಲೀಸರ ಬಳಿ ಹಣದ ಅವಶ್ಯಕತೆ ಇದ್ದುದ್ದರಿಂದ ಜನರ ಬಳಿ ನಗದು ಮತ್ತು ಚಿನ್ನಾಭರಣವನ್ನು ದೋಚಲು ಸಂಚು ಮಾಡುತ್ತಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಅಕ್ರಿಖಾನ್, ಮುಸ್ತಾಕ್ ಅಹಮದ್, ಆದಿಲ್ ಪಾಶ, ಮಾಜ್ ಬೇಗ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಬಳಿಯಿದ್ದ ಆಯುಧಗಳು, ಖಾರದ ಪುಡಿ ಮತ್ತು ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಓರ್ವ ಪರಾರಿಯಾಗಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
7 ಮರಳು ತುಂಬಿದ ಲಾರಿ ಹಿಡಿದ ತಹಸೀಲ್ದಾರ್!
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಸಮೀಪದಲ್ಲಿರುವ ಬುಕ್ಲಾಪುರ ಮರಳು ಕ್ವಾರೆಯಿಂದ ಮರಳು ತುಂಬಿಸಿಕೊಂಡು ಹೋಗುತ್ತಿದ್ದ 7 ಲಾರಿಗಳನ್ನು ಮಂಗಳವಾರ ತಹಸೀಲ್ದಾರ್ ಜಕ್ಕಣ್ಣ ಗೌಡರ್ ತಡೆ ಹಿಡಿದಿದ್ದಾರೆ.
ಗೂಳಿ ತಿವಿತಕ್ಕೆ ಯುವಕ ಸಾವು!
ಶಿಕಾರಿಪುರ : ಹೋರಿ ತಿವಿದು ಯುವಕ ಸಾವನ್ನಪ್ಪಿದ ಘಟನೆ ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಪುನೀತ್ ಆಚಾರ್ (19) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದ ನಿವಾಸಿ ಪುನೀತ್ ಆಚಾರ್ ಶಿಕಾರಿಪುರ ಪಟ್ಟಣದ ಹಾಸ್ಟೆಲ್ನಲ್ಲಿದ್ದುಕೊಂಡು ಐಟಿಐ ಓದುತ್ತಿದ್ದು ಹೋರಿ ತಿವಿದು ಗಂಭೀರವಾಗಿ ಗಾಯಗೊಂಡಿದ್ದ ಪುನೀತ್ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಜಿಲ್ಲಾಸ್ಪತ್ರೆಯಲ್ಲಿ ಪುನೀತ್ ಸಾವನ್ನಪ್ಪಿದ್ದಾನೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಂಕೆ ಶಿಕಾರಿ-ಮೂವರಿಗೆ ನ್ಯಾಯಾಂಗ ಬಂಧನ
ಶಿವಮೊಗ್ಗ: ಜಿಂಕೆ ಶಿಕಾರಿ ಮಾಡಿದ್ದ ಮೂವರನ್ನ ಅರಣ್ಯ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಉಂಬಳೇಬೈಲು ವಲಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಜಿಂಕೆ ಶಿಕಾರಿ ಮಾಡಿದ ಕಾರಣ 03 ಜನ ಆರೋಪಿಗಳ ವಿರುದ್ಧ ವನ್ಯಜೀವಿ ಮೊಕದ್ದಮೆಯನ್ನು ದಾಖಲಿಸಿ, ನ್ಯಾಯಾಂಗ ಬಂಧನಕ್ಕೊಳ ಪಡಿಸಲಾಗಿದೆ. ಸೆರೆಸಿಕ್ಕವರನ್ನ ಉಂಬಳೇಬೈಲು ಗ್ರಾಮದ A1. ಹನುಮಂತಪ್ಪ s/o ತಿಮ್ಮಪ್ಪ, A2. ಅಂಜನಪ್ಪ s/o ತಿಮ್ಮಪ್ಪ, A3. ರಾಮ s/o ತಿಮ್ಮಾಭೋವಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.