ತುಳುನಾಡ ಸಿರಿ ಸೊಸೈಟಿ ಯಶಸ್ವಿ ಉಚಿತ ಶ್ರವಣ ತಪಾಸಣೆ
– 50ಕ್ಕೂ ಹೆಚ್ಚು ಮಂದಿಯಿಂದ ತಪಾಸಣೆ: ಎಲ್ಲರಿಗೂ ಸಮಾಲೋಚನೆ
– ಮತ್ತೆ ಮಾದರಿಯಾದ ತುಳುನಾಡ ಸಿರಿ ಸಹಕಾರಿ
ಪತ್ರಕರ್ತರ ಸಂಘದಿಂದ ದಿ. ಲಕ್ಷ್ಮೀಶ್ ಅವರಿಗೆ ಶ್ರದ್ಧಾಂಜಲಿ ಅರ್ಪಣೆ
NAMMUR EXPRESS NEWS
ತೀರ್ಥಹಳ್ಳಿ: ತುಳುನಾಡ ಸಿರಿ ಸೌಹಾರ್ದ ಸಹಕಾರಿ, ಮತ್ತು ತೀರ್ಥಹಳ್ಳಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್ ತೀರ್ಥಹಳ್ಳಿ ಇವರುಗಳ ವತಿಯಿಂದ ಸೊಪ್ಪುಗುಡ್ಡೆ ಮಾರಿಕಾಂಬಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಉಚಿತ ಶ್ರವಣ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರ ಉದ್ಘಾಟನೆಗೊಳಿಸಿ ಮಾತನಾಡಿದ ತುಳುನಾಡ ಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಅರೋಗ್ಯ ಸೇವೆ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತುಳುನಾಡ ಸಿರಿ ಸಹಕಾರಿ ನಿರಂತರವಾಗಿ ಉಚಿತ ಅರೋಗ್ಯ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. ಯಾವುದೇ ಸಂಘ ಸಂಸ್ಥೆ ಬೆಳೆದು ನಿಲ್ಲಲು ಜನರ ವಿಶ್ವಾಸ ಮುಖ್ಯ ಹಾಗೆ ಬೆಳೆದಾಗ ಕೇವಲ ಲಾಭದ ಕಡೆ ನೋಡದೆ ಜನಪರವಾಗಿ ಕೂಡ ಯೋಚಿಸಬೇಕು ಎನ್ನುವುದು ನಮ್ಮ ಧ್ಯೇಯ. ಈ ಶಿಬಿರಕ್ಕೆ ದೂರದ ದಾವಣಗೆರೆಯಿಂದ ಕೂಡ ಆಸಕ್ತಿಯುಳ್ಳವರು ಬಂದಿರುವುದು ಶಿಬಿರ ಎಷ್ಟು ಮಹತ್ವದ್ದು ಎನ್ನುವುದನ್ನು ಮನದಟ್ಟು ಮಾಡಿದೆ ಮತ್ತು ನಮ್ಮೆಲ್ಲರಲ್ಲಿ ಸಾರ್ಥಕ ಭಾವನೆ ಮೂಡಿಸಿದೆ ಮುಂದು ಈ ರೀತಿ ಜನಪರ ಕಾರ್ಯಕ್ರಮಗಳು ನಿರಂತರವಾಗಿ ತುಳುನಾಡ ಸಿರಿ ಸಹಕಾರಿಯಿಂದ ಮೂಡಿ ಬರಲಿವೆ ಎಂದು ನುಡಿದರು
ಕಾರ್ಯಕ್ರಮದಲ್ಲಿ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು,ತುಳುನಾಡ ಸಿರಿ ಸೊಸೈಟಿ ಉಪಾಧ್ಯಕ್ಷ ವೈ ಗಣಪತಿ ನಿರ್ದೇಶಕರಾದ ವಿಶಾಲ್ ಕುಮಾರ್, ಸುರೇಶ್ ಶೆಟ್ಟಿ, ಬೆಟಮಕ್ಕಿ ರಾಘವೇಂದ್ರ ಶೆಟ್ಟಿ,ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶ್ವಿನಿ, ರಾಘವೇಂದ್ರ ಭಟ್, ವಿಶ್ವಹರ್ತ ಆಸ್ಪತ್ರೆ ತಜ್ಞ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಶ್ರವಣ ತಜ್ಞರು, ಉಡುಪಿಯ ವಿಶ್ವ ಹರ್ತ ಶ್ರವಣ ಆಸ್ಪತ್ರೆಯ ಲವಕುಮಾರ್ ಇದ್ದರು. ಸಮಯದ ಅಭಾವದ ಕಾರಣ ಮೂವತ್ತು ಮಂದಿಗೆ ಮಾತ್ರ ತಪಾಸಣೆಗೆ ಅವಕಾಶ ಕಲ್ಪಿಸಿಲಾಗಿತ್ತು ಆದರೆ ಅದಕ್ಕೂ ಹೆಚ್ಚಿನ ಮಂದಿ ಶಿಬಿರದ ಪ್ರಯೋಜನ ಪಡೆದರು.
ಪತ್ರಕರ್ತರ ಸಂಘದಿಂದ ದಿ. ಲಕ್ಷ್ಮೀಶ್ ಅವರಿಗೆ ಶ್ರದ್ಧಾಂಜಲಿ ಅರ್ಪಣೆ
ತೀರ್ಥಹಳ್ಳಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇತ್ತೀಚಿಗೆ ನಿಧನರಾದ ಲಕ್ಷ್ಮೀಶ್ ಪತ್ರಿಕೆ ಸಂಪಾದಕರು, ಹಿರಿಯ ಪತ್ರಕರ್ತರು ಆದ ಲಕ್ಷ್ಮೀಶ್ ಅವರಿಗೆ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಣೆ ಸಭೆ ನಡೆಯಿತು. ಪತ್ರಕರ್ತರ ಸಂಘದ ಅಧ್ಯಕ್ಷರಾದ ಮುನ್ನೂರು ಮೋಹನ್ ಶೆಟ್ಟಿ, ಹಿರಿಯ ಪತ್ರಕರ್ತರಾದ ರಮೇಶ್ ಶೆಟ್ಟಿ, ಶಿವಾನಂದ ಕರ್ಕಿ, ಡಾನ್ ರಾಮಣ್ಣ ಶೆಟ್ಟಿ, ಮೇಗರವಳ್ಳಿ ರಾಘವೇಂದ್ರ, ಸತ್ಯನಾರಾಯಣ, ಜಗದೀಶ್ ಪ್ರಭು, ಕೃಷ್ಣಮೂರ್ತಿ, ಮನುಕುಮಾರ್, ನಿರಂಜನ್, ಗಾಯತ್ರಿ ಶೇಷಗಿರಿ, ಸಂತೋಷ್, ಪ್ರಸನ್ನ, ಪಾರ್ಥ, ಕೃಷ್ಣಮೂರ್ತಿ ನಮ್ಮೂರ್ ಎಕ್ಸ್ ಪ್ರೆಸ್ ಸೇರಿ ಎಲ್ಲಾ ಪತ್ರಕರ್ತರು ಹಾಜರಿದ್ದರು.