ಬೆಟ್ಟದ ಮೇಲಿನ ಸಿದ್ದೇಶ್ವರ ಸ್ವಾಮಿಗೆ ಉಘೇ ಉಘೇ..!
– ಡಿ. 14ರ ರಾತ್ರಿ 32ನೇ ವರ್ಷದ ದೀಪೋತ್ಸವ
– 4 ಸಾವಿರಕ್ಕೂ ಹೆಚ್ಚು ಭಕ್ತರಿಂದ ದೇವರ ದರ್ಶನ
– ಎಲ್ಲರಿಗೂ ಅಚ್ಚುಕಟ್ಟಾಗಿ ಅನ್ನ ಸಂತರ್ಪಣೆ ಮಾಡಿದ ಸಮಿತಿ
– ಕಲಾವಿದ ರಾಘವೇಂದ್ರ, ಗುರುಪ್ರಸಾದ್ ತಂಡದವರಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ಬೆಟ್ಟದ ಮೇಲಿರುವ ಸಿದ್ದೇಶ್ವರ ದೇವಸ್ಥಾನದಲ್ಲಿ ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಶ್ರೀ ಸಿದ್ದೇಶ್ವರ ಸೇವಾ ಸಮಿತಿ ಬಾಳೇಬೈಲು ಇವರ ಆಶ್ರಯದಲ್ಲಿ ಡಿಸೆಂಬರ್ 14 ರಾತ್ರಿ ದೀಪೋತ್ಸವ ಅದ್ದೂರಿಯಾಗಿ ನಡೆಯಿತು. 4000 ಕ್ಕೂ ಹೆಚ್ಚು ಭಕ್ತರು ಬೆಟ್ಟ ಹತ್ತಿ ದೀಪೋತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಭೀಮನಕಟ್ಟೆ ಶ್ರೀಗಳು ಪೂಜಾ ವಿಧಿ ವಿಧಾನದಲ್ಲಿ ಭಾಗಿಯಾದರು. ಎಲ್ಲಾ ಧಾರ್ಮಿಕ ಕಾರ್ಯ ಕ್ರಮಗಳು ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಬೆಟ್ಟದ ಮೇಲೆ ಅಡುಗೆ ತಯಾರು ಮಾಡಿ ಅನ್ನ ಸಂತರ್ಪಣೆ ಮಾಡಲಾಯಿತು. ಕಲಾ ತಂಡಗಳು ಭಜನೆ ಪ್ರದರ್ಶನ ಮಾಡಿದರು. ಉದಯೋನ್ಮುಖ ಕಲಾವಿದ ರಾಘವೇಂದ್ರ ಮತ್ತು ಗುರುಪ್ರಸಾದ್ ತಂಡದವರಿಂದ ಕೊಳಲು ಮತ್ತು ಪ್ಯಾಕ್ರೋಫೋನ್ ವಾದನ ಜನರ ಮನ ಸೆಳೆಯಿತು. ದಿನಾಂಕ: 15-12-2024ರ ಭಾನುವಾರ ಸಂಜೆ 6-30ರಿಂದ ಮಂದಾರ್ತಿ ಮಾದೇವಿ’ ನೃತ್ಯ ರೂಪಕ ಕಾರ್ಯಕ್ರಮ ಇರುತ್ತದೆ. ಸರ್ವರನ್ನು ಎಲ್ಲಾ ಕಾರ್ಯಕ್ರಮಕ್ಕೂ ಸ್ವಾಗತಿಸಲಾಗಿದೆ.