ರಸಪ್ರಶ್ನೆಯಲ್ಲಿ ವಾಗ್ದೇವಿ ವಿದ್ಯಾರ್ಥಿಗಳಸಾಧನೆ!
– ವಿಭಾಗ ಮಟ್ಟಕ್ಕೆ ಆಯ್ಕೆಯಾದ ಪಾರ್ಥ ಎಂಆರ್, ನಕುಲ್ ಕೆ.ಸಿ, ಚಿರಾಗ್ ಗೌಡ ವೈ.ಆರ್
– ವಾಗ್ದೇವಿ ಶಾಲೆ ಆಡಳಿತ ಮಂಡಳಿ ಅಭಿನಂದನೆಗಳು
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗದ ಕರ್ನಾಟಕ ಪಬ್ಲಿಕ್ ಸ್ಕೂಲ್ ಇಲ್ಲಿ ನಡೆದ ಜಿಲ್ಲಾಮಟ್ಟದ 2024 ನೆಯ ಸಾಲಿನ (Rural IT Quiz) ರೂರಲ್ ಐ.ಟಿ ಕ್ವಿಜ್ ಕಾರ್ಯಕ್ರಮದಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪಾರ್ಥ ಎಂಆರ್ ( 8 ನೆಯ ತರಗತಿ ) ಮತ್ತು ನಕುಲ್ ಕೆ.ಸಿ (10 ನೆಯ ತರಗತಿ ) ಮತ್ತು ಚಿರಾಗ್ ಗೌಡ ವೈ.ಆರ್ (8 ನೆಯ ತರಗತಿ) ಇವರು ಭಾಗವಹಿಸಿ ಅತ್ಯುತ್ತಮವಾಗಿ ಸ್ಪರ್ಧಿಸಿ ತುಮಕೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸುಮಾರು 120ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಈ ಕ್ವಿಜ್ ಪಂದ್ಯಾವಳಿಗೆ ಬೇರೆ ಬೇರೆ ತಾಲ್ಲೂಕುಗಳಿಂದ ಆಗಮಿಸಿದ್ದು, ಅತ್ಯುತ್ತಮವಾಗಿ ಅಂಕಗಳನ್ನು ಪಡೆದ 50 ವಿದ್ಯಾರ್ಥಿಗಳನ್ನು ಮಾತ್ರ ವಿಭಾಗಮಟ್ಟಕ್ಕೆ ಆಯ್ಕೆಮಾಡಲಾಗುವುದು. ಇದರಲ್ಲಿ ಪಾರ್ಥ ಪ್ರಥಮ ಸ್ಥಾನ ಹಾಗೂ ನಕುಲ್ 4 ನೆಯ ಸ್ಥಾನ ಹಾಗೂ ಚಿರಾಗ್ 17 ನೆಯ ಸ್ಥಾನವನ್ನು ಪಡೆದು ಶಾಲೆಗೆ ಹಾಗೂ ತಾಲ್ಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ. ಇವರ ಈಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಶಿಕ್ಷಕವೃಂದ ಮತ್ತು ಪೋಷಕರು ಅಭಿನಂದಿಸಿ ಮುಂದಿನ ಸ್ಪರ್ಧೆಗೆ ಶುಭಹಾರೈಸಿದ್ದಾರೆ.