ತೀರ್ಥಹಳ್ಳಿಯಲ್ಲಿ ಬೈಕ್ ಡಿಕ್ಕಿಗೆ ಮಹಿಳೆ ಬಲಿ!
– ಎಳ್ಳಮಾವಸ್ಯೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಬಂದವರ ಹೊಡೆದಾಟ!
– ಹೊಸನಗರ ತಾಲೂಕಿನ ಕಟ್ಟಿನಗದ್ದೆಯಲ್ಲಿ ವೃದ್ಧ ಕಾಣೆ
NAMMUR EXPRESS NEWS
ತೀರ್ಥಹಳ್ಳಿ: ಹಾಲು ಮಾರಲು ಹೋಗಿದ್ದ ಮಹಿಳೆಗೆ ಬೈಕ್ ಅತೀ ವೇಗದಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇತ್ತೀಚಿಗೆ ತೀರ್ಥಹಳ್ಳಿ ಪಟ್ಟಣ ಸಮೀಪದ ಚಿಟ್ಟೆಬೈಲಿನಲ್ಲಿ ನಡೆದಿದೆ. ಜಾನಕಮ್ಮ ಮೃತ ಮಹಿಳೆ ಎಂದು ತಿಳಿದು ಬಂದಿದೆ
ಡಿ. 31ರಂದು ಚಿಟ್ಟೆಬೈಲಿನ ಜಾನಕಿ ಎಂಬವರು ತಮ್ಮ ಮನೆಯ ಮುಂಭಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಡಿಕ್ಕಿಯಾದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದು, ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು.ಜನವರಿ 2ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೈಕ್ ಸವಾರನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಮೃತ ಮಹಿಳೆ ಗ್ಯಾಸ್ ಗೋಪಾಲ ಅವರ ಸಹೋದರಿ ಎಂದು ಗುರುತಿಸಲಾಗಿದೆ. ಓರ್ವ ಪುತ್ರಿ, ಪುತ್ರ ಅಪಾರ ಬಂಧುವರ್ಗವನ್ನಗಲಿದ್ದಾರೆ.
ಹೊಸನಗರ ತಾಲೂಕಿನ ಕಟ್ಟಿನಗದ್ದೆಯಲ್ಲಿ ವೃದ್ಧ ಕಾಣೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಉಳುಕೊಪ್ಪ ಸಮೀಪದ ಕಟ್ಟಿನ ಗದ್ದೆಯ ವಾಸಿ ಶೇಷನಾಯ್ಕ 75 ವರ್ಷ ಇವರು ತಾರೀಕು 3-12-2024 ಮಧ್ಯಾನ ದಿಂದ ತಮ್ಮ ನಿವಾಸದಿಂದ ಕಾಣೆಯಾಗಿರುತ್ತಾರೆ ಬಿಳಿ ಬಣ್ಣದ ಶರ್ಟ್ ಹಾಗು ಪಂಚೆ ಧರಿಸಿರುತ್ತಾರೆ ಇವರು ಕಂಡುಬಂದಲ್ಲಿ ಈ ನಂಬರ್ ಗೆ ಸಂಪರ್ಕಿಸ ಬೇಕಾಗಿ ವಿನಂತಿ: 9481594873
ಜಾತ್ರೆಯಲ್ಲಿ ವ್ಯಾಪಾರಕ್ಕೆ ಬಂದವರ ಹೊಡೆದಾಟ!
ತೀರ್ಥಹಳ್ಳಿ ರಾಮೇಶ್ವರ ಜಾತ್ರೆಗೆ ಬಂದಿದ್ದ ಬಯಲು ಸೀಮೆ ಭಾಗದ ಕೆಲವು ಚಿಲ್ಲರೆ ವ್ಯಾಪಾರಿಗಳು ದೇವಸ್ಥಾನದ ಮುಂದೆಯೇ ಶುಕ್ರವಾರ ರಾತ್ರಿ ಹೊಡೆದಾಟ ನಡೆಸಿದ ಘಟನೆ ನಡೆದಿದೆ. ಸ್ಥಳೀಯರು 112 ಮಾಹಿತಿ ನೀಡಿ ಪೊಲೀಸರು ಸ್ಥಳಕ್ಕೆ ಬಂದು ಬುದ್ದಿವಾದ ಹೇಳಿ ಲಾಟಿ ಏಟು ನೀಡಿದ್ದಾರೆ. ಬಳಿಕ ಗಲಾಟೆ ತಣ್ಣಗಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.