ದಿಶಾ ಸಮಿತಿ ಸದಸ್ಯರಾಗಿ ಯಶೋಧ ಮಂಜುನಾಥ್ ಆಯ್ಕೆ
– ತೀರ್ಥಹಳ್ಳಿ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಕರ್ತವ್ಯ
– ಆಯ್ಕೆ ಮಾಡಿದ ಎಲ್ಲಾ ನಾಯಕರಿಗೆ ಅಭಿನಂದನೆ
NAMMUR EXPRESS NEWS
ತೀರ್ಥಹಳ್ಳಿ: ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಶಿವಮೊಗ್ಗ ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರಾಗಿ ತೀರ್ಥಹಳ್ಳಿ ಮಾಜಿ ತಾಲೂಕು ಪಂಚಾಯ್ತಿ ಉಪಾಧಕ್ಷೆ ಶ್ರೀಮತಿ ಯಶೋಧ ಮಂಜುನಾಥ ದಿಂಡ ಅವರನ್ನು ನೇಮಕ ಮಾಡಲಾಗಿದೆ. ಶ್ರೀಮತಿ ಯಶೋಧ ಮಂಜುನಾಥರವರು ಈ ಹಿಂದೆ ಮೇಗರವಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯೆಯಾಗಿ ನಂತರ ತೀರ್ಥಹಳ್ಳಿ ತಾಲೂಕು ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ತೀರ್ಥಹಳ್ಳಿ ತಾಲೂಕು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಹೊಸಳ್ಳಿ ಗಾಮ ಪಂಚಾಯ್ತಿ ಮಾಜಿ ಸದಸ್ಯರು ಹಾಲಿ ತೀರ್ಥಹಳ್ಳಿ ಮಂಡಲ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ರಾದ ದಿಂಡ ಮಂಜುನಾಥರವರ ಪತ್ನಿ. ಇವರಿಂದ ತಾಲೂಕಿನ ಅಭಿವೃದ್ಧಿ ಪ್ರಗತಿ ಪಥದತ್ತ ಸಾಗಲಿ.ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯೆಯಾಗಿ ಆಯ್ಕೆ ಮಾಡಲು ಸಹಕರಿಸಿದ ಸಂಸದ ಬಿ.ವೈ.ರಾಘವೇಂದ್ರ ಶಾಸಕ ಆರಗ ಜ್ಞಾನೇಂದ್ರ.ಶಿವಮೊಗ್ಗ ಬಿ ಜೆ ಪಿ ಜಿಲ್ಲಾ ಘಟಕ ಮತ್ತು ತೀರ್ಥಹಳ್ಳಿ ಮಂಡಲ ಬಿ ಜೆ ಪಿ ಅಧ್ಯಕ್ಷ ಹೆದ್ದೂರು ನವೀನ್ ಇನ್ನಿತರರುಗಳಿಗೆ ಶ್ರೀಮತಿ ಯಶೋಧ ಮಂಜುನಾಥ ದಿಂಡ ರವರು ಅಭಿವಂದನೆಗಳನ್ನು ಸಲ್ಲಿಸಿದ್ದಾರೆ.