- ನಿರ್ಗಮನದ ಹಾದಿಯಲ್ಲಿ ಟ್ರಂಪ್..?
- 264 ಸ್ಥಾನ ಜೋ ಬಿಡೆನ್, 214 ಸ್ಥಾನ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಸ್ಪೆನ್ಸ್ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಘೋಷಣೆಯಾಗುವ ಸಾಧ್ಯತೆಗಳಿವೆ. ಬಹುತೇಕ ಈಗಿನ ವಿಧ್ಯಾಮಾನಗಳ ಪ್ರಕಾರ ನಿರ್ಗಮನದ ಹಾದಿಯಲ್ಲಿ ಟ್ರಂಪ್ ಇದ್ದಾರೆ. ಶ್ವೇತ ಭವನದ ಹೊಸ್ತಿಲಲ್ಲಿರುವ ಜೋ ಬಿಡೆನ್ ಪರ ಭಾರೀ ಟ್ರೆಂಡ್ ಕಾಣುತ್ತಿದೆ.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಗೆಲ್ಲಲು 270 ಸ್ಥಾನಗಳ ಅಗತ್ಯವಿದ್ದು, ಟ್ರಂಪ್ 214 ಸ್ಥಾನಗಳಲ್ಲಿ ಗೆದ್ದು 15 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಜೋ ಬಿಡೆನ್ 264 ಸ್ಥಾನಗಳನ್ನು ಗೆದ್ದಿದ್ದು, ಅವರಿಗೆ ಗೆಲ್ಲಲು 6 ಸ್ಥಾನಗಳ ಅಗತ್ಯವಿದೆ. ಜೋ ಬಿಡೆನ್ 42 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎರಡನೇ ಬಾರಿ ಅಧ್ಯಕ್ಷ ಹುದ್ದೆಗೆ ಏರುವ ಟ್ರಂಪ್ ಕನಸು ನನಸಾಗುವುದು ಬಹುತೇಕ ಕಷ್ಟ ಎನ್ನಲಾಗುತ್ತಿದೆ. ಮತ ಎಣಿಕೆ ನಡೆಯುತ್ತಿದ್ದು, ಅಧೀಕೃತ ಪ್ರಕಟಣೆ ಹೊರ ಬಿದ್ದಿಲ್ಲ.
ಮತದಾನದಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸುತ್ತಿರುವ ಟ್ರಂಪ್ ಸರಣಿ ಟ್ವೀಟ್ಗಳನ್ನು ಮಾಡುತ್ತಿದ್ದಾರೆ. ಅಮೆರಿಕದ ಎಲ್ಲಾ ರಾಜ್ಯಗಳಲ್ಲೂ ಬಿಡೆನ್ ಪರವಾಗಿ ಸಾಕಷ್ಟು ಮತಗಳು ಚಲಾವಣೆಯಾಗಿವೆ. ಒಟ್ಟಿನಲ್ಲಿ ಹಿರಿಯಣ್ಣನ ದೊರೆ ಯಾರಾಗ್ತಾರೆ ಎಂಬ ಕುತೂಹಲ ಇಡೀ ಜಗತ್ತಿಗೆ ಇದೆ.