- ಭಾರತಕ್ಕೆ 4ನೇ ಸ್ಥಾನ: ಮೊದಲ ಪಟ್ಟ ಬಿಡದ ಆಸ್ಟ್ರೇಲಿಯ
- 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕ ಸಾಧನೆ
NAMMUR EXPRESS NEWS
ನವ ದೆಹಲಿ: ಕಾಮನ್ವೆಲ್ತ್ ಪಂದ್ಯಾಟ ಮುಗಿಸಿದ ಭಾರತ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.
ಕೊನೆಯ ದಿನವೂ ಭಾರತದ ಕಮಾಲ್ ಮಾಡಿದ್ದು 4 ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದಿದ್ದು ಒಟ್ಟಾರೆ 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕಗಳ ಜೊತೆ ಒಟ್ಟು 61 ಪದಕಗಳ ಜೊತೆ ನಾಲ್ಕನೇ ಸ್ಥಾನ ಪಡೆದು ಭಾರತಕ್ಕೆ ಮರಳಿದೆ.
ಜುಲೈ 28ರಂದು ಪ್ರಾರಂಭವಾದ 18ನೇ ಕಾಮನ್ವೆಲ್ತ್ ಗೇಮ್ಸ್ ಸೋಮವಾರ ಮುಕ್ತಾಯವಾಗಿದ್ದು, 178 ಪದಕಗಳೊಂದಿಗೆ ಆಸ್ಟ್ರೇಲಿಯಾ ಪ್ರಥಮ ಸ್ಥಾನ ಪಡೆದಿದೆ. 175 ಪದಕಗಳೊಂದಿಗೆ ಇಂಗ್ಲೆಂಡ್ ದ್ವಿತೀಯ ಹಾಗೂ 92 ಪದಕಗಳೊಂದಿಗೆ ಕೆನಡಾ ತೃತೀಯ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ. ಇಂಗ್ಲೆಂಡ್, ಕೆನಡಾ ಕ್ರಮವಾ 67, 57, 26 ಚಿನ್ನದ ಪದಕಗಳನ್ನು ಪಡೆದಿವೆ. ನಾಲ್ಕ ಸ್ಥಾನ ಪಡೆದಿರುವ ಭಾರತ 22 ಚಿನ್ನ, 16 ಬೆಳ್ಳಿ ಹಾಗ 23 ಕಂಚಿನ ಪದಕಗಳನ್ನು ಗಳಿಸಿದೆ.
ಶೂಟಿಂಗ್ ರದ್ದು: ಕಳೆದ ಕ್ರೀಡಾಕೂಟದಲ್ಲಿ ಭಾರತಕ್ಕೆ ಶೂಟಿಂಗ್ನಲ್ಲಿ 1 ಪದಕಗಳು ಬಂದಿದ್ದವು. ಆದರೆ ಈ ಸಲ ಶೂಟಿಂಗ್ ರದ್ದು ಮಾಡಿದ್ದರಿಂದ ಭಾರತಕ್ಕೆ ಪದಕಗಳ ಸಂಖ್ಯೆ ಕಡಿಮೆ ಆಗಿದೆ ಎಂದು ವಿಶ್ಲೇಷಿಸಲಾಗಿದೆ.
2010ರಲ್ಲಿ ಭಾರತ ಅತ್ಯುತ್ತಮ ಸಾಧನೆ: 2010ರಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಸಾಧನೆ ಇದುವರೆಗಿನ ಉತ್ಕೃಷ್ಠ ಸಾಧನೆಯಾಗಿದೆ. ಆ ಕ್ರೀಡಾಕೂಟದಲ್ಲಿ ಭಾರತ 39 ಚಿನ್ನದ ಪದಕಗಳನ್ನು ಸೇರಿ ಒಟ್ಟು 101 ಪದಕಗಳನ್ನು ಗಳಿಸಿತ್ತು. 39 ಚಿನ್ನ, 26 ಬೆಳ್ಳಿ,36 ಕಂಚು ಪಡೆದಿತ್ತು. ಆಗ ಭಾರತ 2ನೇ ಸ್ಥಾನ ಗಳಿಸಿತ್ತು. ಇಂಗ್ಲೆಂಡ್ 3ನೇ ಸ್ಥಾನ, ಕೆನಡಾ 4ನೇ ಸ್ಥಾನ ಪಡೆದಿತ್ತು. 2018ರಲ್ಲಿ 25, 19, 20 ಪದಕಗಳೊಂದಿಗೆ 64 ಗೆದ್ದು 3ನೇ ಸ್ಥಾನ ಪಡೆದಿತ್ತು. 2014ರಲ್ಲಿ 15 ಚಿನ್ನ, 30 ಬೆಳ್ಳಿ, 19 ಕಂಚು ಸೇರಿ 64 ಪದಕ ಪಡೆದು 5ನೇ ಸ್ಥಾನ ಪಡೆದಿತ್ತು. ಈ ಬಾರಿಯು ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ
ಪದಕಗಳೆಷ್ಟು..?
22 ಚಿನ್ನ
16 ಬೆಳ್ಳಿ,
23 ಕಂಚು
ಒಟ್ಟು 61 ಪದಕ
ಟಾಪ್ 5 ದೇಶಗಳು
ಆಸ್ಟ್ರೇಲಿಯಾ ಪ್ರಥಮ ಸ್ಥಾನ- 178 ಪದಕ
ಇಂಗ್ಲೆಂಡ್ ದ್ವಿತೀಯ ಸ್ಥಾನ- 175 ಪದಕ
ಕೆನಡಾ ತೃತೀಯ ಸ್ಥಾನ- 92 ಪದಕ
ಭಾರತ ನಾಲ್ಕನೇ ಸ್ಥಾನ- 61 ಪದಕ
ನ್ಯೂಜಿಲ್ಯಾಂಡ್ ಐದನೇ ಸ್ಥಾನ- 49 ಪದಕ