ಬ್ರಿಟಿಷ್ ನಾಡನ್ನು ಸುದೀರ್ಘ ಕಾಲ ಆಳಿದ್ದ ರಾಣಿ ಇನ್ನಿಲ್ಲ
– ಭಾರತದ ಜೊತೆ ರಾಣಿ ಎಲಿಜಬೆತ್ ಅವಿನಾಭಾವ ಸಂಬಂಧ
– ಪ್ರಧಾನಿ ಮೋದಿ ಸೇರಿ ಎಲ್ಲಾ ದೇಶಗಳ ಸಂತಾಪ
– ಪುತ್ರ ಚಾರ್ಲ್ಸ್ ಇನ್ಮುಂದೆ ಬ್ರಿಟನ್ ರಾಜ..!
NAMMUR EXPRESS NEWS
ಬ್ರಿಟಿಷರ ನಾಡನ್ನು ಸುದೀರ್ಘ ಅವಧಿಗೆ ಆಳಿದ ರಾಣಿ. 96 ವರ್ಷ ವಯಸ್ಸಿನ 2ನೇ ಎಲಿಜಬೆತ್, ಬ್ರಿಟನ್ನ ಬಲ್ಮೋರಾಲ್ನಲ್ಲಿ ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲಿದ್ದ ರಾಣಿ 2ನೇ ಎಲಿಜಬೆತ್ ನಿಧನಕ್ಕೆ ಜಗತ್ತಿನ ಎಲ್ಲಾ ದೇಶಗಳು ಸಂತಾಪ ಸೂಚಿಸಿವೆ.
ಅನಾರೋಗ್ಯದಿಂದ ಬ್ರಿಟನ್ ರಾಣಿ ಎಲಿಜಬೆತ್-2 ಕೊನೆಯುಸಿರು: 1926ರಲ್ಲಿ ಲಂಡನ್ನ ಮೇಫೇರ್ನಲ್ಲಿ ಜನಿಸಿದ್ದ ರಾಣಿ ಎಲಿಜಬೆತ್ ಪೂರ್ಣ ಹೆಸರು ಎಲಿಜಬೆತ್ ಅಲೆಕ್ಸಾಂಡ್ರಾ ಮೇರಿ. 1952ರಿಂದ ಬ್ರಿಟನ್ ರಾಣಿಯಾಗಿ ಎಲಿಜಬೆತ್ ಆಯ್ಕೆಯಾಗೋ ಮೂಲಕ ತಮ್ಮ 25 ವಯಸ್ಸಿನಲ್ಲಿ ಇಂಗ್ಲೆಂಡ್ ರಾಣಿಯಾಗಿ ಪಟ್ಟಕ್ಕೇರಿದ್ದರು. ಹೀಗೆ ಬರೋಬ್ಬರಿ 70 ವರ್ಷಗಳ ಕಾಲ ಬ್ರಿಟನ್ ಆಳಿದ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇನ್ನು ಇದೇ ವರ್ಷ ಜೂನ್ನಲ್ಲಿ ರಾಣಿ ಎಲಿಜಬೆತ್ ವಜ್ರ ಮಹೋತ್ಸವವನ್ನೂ ಅದ್ದೂರಿಯಾಗಿ ಆಚರಿಸಲಾಗಿತ್ತು. ಇನ್ನು ತಮ್ಮ ಆಳ್ವಿಕೆಯಲ್ಲಿ 15 ಪ್ರಧಾನಿಗಳನ್ನು ರಾಣಿ ಎಲಿಜಬೆತ್ ನೇಮಕ ಮಾಡಿದ್ದಾರೆ.
ಮೋದಿ ಸಂತಾಪ: ಬ್ರಿಟನ್ ರಾಣಿ 2ನೇ ಎಲಿಜಬೆತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಟ್ವಿಟ್ ಮಾಡಿರೋ ಪ್ರಧಾನಿ ಮೋದಿ 2015 ಹಾಗೂ 2018ರಲ್ಲಿ ಬ್ರಿಟನ್ಗೆ ಹೋದಾಗ ಭೇಟಿಯಾಗಿದ್ದೆ. ಅವರ ಭೇಟಿಯನ್ನ ನಾನು ಎಂದಿಗೂ ಮರೆಯೋದಿಲ್ಲ ಅಂತಾ ಟ್ವಿಟ್ ಮಾಡಿದ್ದಾರೆ.
ನೆಹರೂರಿಂದ ಮೋದಿವರೆಗೂ ಒಡನಾಟ:
ಇನ್ನು ಬ್ರಿಟನ್ ರಾಣಿ 2ನೇ ಎಲಿಜಬೆತ್ಗೆ ಭಾರತದ ಜೊತೆಗೆ ಅವಿನಾಭಾವ ಸಂಬಂಧ ಇತ್ತು. ನೆಹರೂ, ಇಂದಿರಾಗಾಂಧಿ ಆಡಳಿತ ಕಾಲದಲ್ಲೂ ರಾಣಿ ಎಲಿಜಬೆತ್ ಭಾರತಕ್ಕೆ ಭೇಟಿ ಕೊಡುತ್ತಿದ್ದರು. ಅಷ್ಟೇ ಯಾಕೆ ಈಗಿನ ಪ್ರಧಾನಿ ನರೇಂದ್ರ ಮೋದಿ ಕೂಡಾ 2015 ಹಾಗೂ 2018ರಲ್ಲಿ ರಾಣಿ ಎಲಿಜಬೆತ್ರನ್ನು ಭೇಟಿಯಾಗಿದ್ದರು.
ಬ್ರಿಟನ್ ರಾಜಮನೆತನದ ಮತ್ತೊಂದು ಕೊಂಡಿ ಕಳಚಿ ಬಿದ್ದಿದೆ. ಬರೋಬ್ಬರಿ 70 ವರ್ಷಗಳ ಕಾಲ ಬ್ರಿಟಿಷರ ನಾಡನ್ನು ಆಳಿದ ರಾಣಿ ಎಲಿಜಬೆತ್ ಇಹಲೋಕ ತ್ಯಜಿಸಿದ್ದಾರೆ. ಪುತ್ರ ಚಾರ್ಲ್ಸ್ ಇನ್ಮುಂದೆ ಬ್ರಿಟನ್ ರಾಜನಾಗಲಿದ್ದಾರೆ.