- ವಿಶ್ವ ಮಾರುಕಟ್ಟೆಯಲ್ಲಿ ಸಂಚಲನ: ಭಾರತದ ಮೇಲೂ ಎಫೆಕ್ಟ್
- 700 ರಷ್ಯಾ ಯೋಧರ ಸಾವು: ಅಪಾರ ಆಸ್ತಿ ಪಾಸ್ತಿ, ಜೀವ ಹಾನಿ
- 135 ಮಂದಿ ಕನ್ನಡಿಗರು ಉಕ್ರೇನ್ ಅಲ್ಲಿ ತತ್ತರ
NAMMUR EXPRESS NEWS
ಉಕ್ರೇನ್: ಮೂರನೇ ಮಹಾಯುದ್ಧ ಎಂದೇ ಬಿಂಬಿತವಾದ ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರ ಅಧಿಕೃತವಾಗಿ ಆರಂಭವಾಗಿದೆ. ರಷ್ಯಾ ದೇಶವು ಈಗಾಗಲೇ ಉಕ್ರೇನ್ ಮೇಲೆ ಬಾಂಬ್, ಮಿಸೈಲ್ ದಾಳಿ ಆರಂಭಿಸಿದೆ. 203 ಕಡೆ ರಷ್ಯಾ ದಾಳಿ ಮಾಡಿದೆ.
ಇನ್ನು 700ಕ್ಕೂ ಹೆಚ್ಚು ಮಂದಿ ರಷ್ಯಾ ಯೋಧರು ಸಾವನ್ನು ಕಂಡಿದ್ದಾರೆ.
ಉಕ್ರೇನ್ ಅಲ್ಲಿರುವ ಎಲ್ಲಾ ವಿಮಾನ ನಿಲ್ದಾಣ, ವಿಮಾನ ಬೇಸ್, ಪ್ರಮುಖ ಪಟ್ಟಣಗಳ ಮೇಲೆ ದಾಳಿ ಮಾಡಲಾಗಿದೆ. ಜನರು ಬೀದಿಗೆ ಬಿದ್ದಿದ್ದಾರೆ. ರಷ್ಯಾದಲ್ಲಿ ಕೂಡ ಈ ಯುದ್ಧಕ್ಕೆ ಅಪಸ್ವರ ವ್ಯಕ್ತವಾಗಿದೆ.
ಭಾರತೀಯರ ರಕ್ಷಣೆಗೆ ಹೆಲ್ಪ್ಲೈನ್
ಭಾರತ ಸರ್ಕಾರ ಉಕ್ರೇನ್ ದೇಶದಲ್ಲಿದ್ದ ಅನಿವಾಸಿ ಭಾರತೀಯ ವಿದ್ಯಾರ್ಥಿಗಳು , ಉದ್ಯೋಗಸ್ಥರನ್ನು ಭಾರತ ಸರಕಾರವು ತ್ವರಿತವಾಗಿ ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗಿದ್ದು ಅಪಾಯದಲ್ಲಿ ಸಿಲುಕುವ ಮೊದಲೇ ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ. ಉಕ್ರೇನ್ ದೇಶವು ತನ್ನ ಎಲ್ಲಾ ವಾಯುಮಾರ್ಗವನ್ನು ಬಂದ್ ಮಾಡಿದ್ದು, ಉಕ್ರೇನ್ ನಲ್ಲಿ ಇರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿಯು 24 ಗಂಟೆಗಳ ಸಹಾಯವಾಣಿ ಆರಂಭಿಸಿದೆ.
ಈ ನಡುವೆ ಉಕ್ರೇನ್ ದೇಶದ ಸರಕಾರವು ಭಾರತದ ನರೇಂದ್ರ ಮೋದಿಯಿಂದ ಮಾತ್ರ ಈ ಯುದ್ಧ ತಡೆಯಲು ಸಾಧ್ಯ ಎಂದು ಹೇಳಿದೆ. ವಿಶ್ವನಾಯಕ ನರೇಂದ್ರ ಮೋದಿಯವರು ರಷ್ಯಾ ಹಾಗೂ ಉಕ್ರೇನ್ ಗಳೊಂದಿಗೆ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ಶಾಂತಗೊಳಿಸಬೇಕೆಂದು ಉಕ್ರೇನ್ ಮನವಿ ಮಾಡಿದ್ದು ಇದೀಗ ವಿಶ್ವದ ಗಮನ ಭಾರತದ ನಡೆಯ ಕಡೆಗಿದೆ.
ಚಿನ್ನ, ಷೇರು, ಅನಿಲ ಏರಿಕೆ!
ಮೂರನೇ ಯುದ್ಧ ಕಾರಣ ಭಾರತದಲ್ಲಿ ಷೇರು ಮಾರುಕಟ್ಟೆ ಕುಸಿದಿದೆ. ಚಿನ್ನ ಬೆಳ್ಳಿ ಭಾರೀ ಏರಿಕೆಯಾಗಿದೆ.
ಅನಿಲ, ಗೋದಿ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ.