ಕ್ರಿಕೆಟ್ ವಿಶ್ವಕಪ್ ಗೆಲ್ಲುತ್ತಾ ಭಾರತ?!
– ತವರಲ್ಲಿ ಕಪ್ ಗೆಲ್ಲಲು ಭಾರತದ ಮಾಸ್ಟರ್ ಪ್ಲಾನ್!
– ಭಾರತದಲ್ಲಿ ಈ ಬಾರಿಯ ವಿಶ್ವ ಕಪ್ ಕ್ರಿಕೆಟ್
– ಅ. 5ರಿಂದ ನ.19ರವರೆಗೆ ತಂಡಗಳ ಹಣಾಹಣಿ
– ಪಾಕ್, ಅಸೀಸ್, ಇಂಗ್ಲೆಂಡ್ ನಡುವೆ ಹೈವೋಲ್ಟೇಜ್ ಪಂದ್ಯಾಟ
NAMMUR EXPRESS NEWS
ಬೆಂಗಳೂರು: ಭಾರತೀಯರಿಗೆ ಕ್ರಿಕೆಟ್ ಎಂದರೆ ಅಚ್ಚು ಮೆಚ್ಚು. ಸತತ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿರುವ ಭಾರತಕ್ಕೆ ಈ ಬಾರಿ ವಿಶ್ವಕಪ್ ಗೆಲ್ಲುವ ಸುವರ್ಣಾವಕಾಶ ಒದಗಿ ಬಂದಿದೆ.
ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತವೇ ಆತಿಥ್ಯ ವಹಿಸಲಿದ್ದು, ವರ್ಲ್ಡ್ ಕಪ್ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿದೆ. ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿದೆ.
2011ರಲ್ಲಿ ಭಾರತದಲ್ಲೇ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಬಾರಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.
12 ವರ್ಷಗಳ ನಂತರ ಮತ್ತೆ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಇದಕ್ಕಾಗಿ ಭರ್ಜರಿ ಪ್ಲಾನ್ ಮಾಡಿದೆ. ವಿಶ್ವಕಪ್’ನ ಲೀಗ್ ಹಂತದಲ್ಲಿ ಪ್ರತೀ ತಂಡಗಳು ಎಲ್ಲಾ ತಂಡಗಳ ವಿರುದ್ಧ ಆಡಲಿದ್ದು, ತಲಾ 9 ಲೀಗ್ ಪಂದ್ಯಗಳನ್ನಾಡಲಿವೆ. ಲೀಗ್ ಹಂತದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳುಪ ಪ್ರಬಲ ಎದುರಾಳಿಗಳಾಗಿರುವ ಕಾರಣ ಈ ಮೂರು ತಂಡಗಳನ್ನು ಮಣಿಸಲು ಭಾರತ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ.
ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳನ್ನು ಸ್ಪಿನ್ ಟ್ರ್ಯಾಕ್’ಗಳಲ್ಲೇ ಭಾರತ ಆಡಲಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಭಾರತ ಆಕ್ಟೋಬರ್ 8ರಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಕ್ಟೋಬರ್ 15ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿದೆ. ಅದೇ ರೀತಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಅಕ್ಟೋಬರ್ 29ರಂದು ಲಕ್ನೋದ ಏಕನಾ ಮೈದಾನದಲ್ಲಿ ಆಡಲಿದೆ. ಈ ಮೂರು ಮೈದಾನಗಳು ಸ್ಪಿನ್ ಗ್ರೌಂಡ್.
ಈಗಾಗಲೇ ಭಾರತ ತಂಡ ಎಲ್ಲಾ ಸಿದ್ಧತೆ ನಡೆಸಿದೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023