-ನಟರಾಜನ್ ಬೌಲಿಂಗ್ಗೆ ಝಹೀರ್ ಖಾನ್ ಫುಲ್ ಫಿದಾ!
-ಪ್ರಥಮ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಿತ್ತ ಎಡಗೈ ವೇಗಿ
ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ವೃತ್ತಿ ಜೀವನ ಆರಂಭಿಸಿದ ಮೊದಲನೇ ದಿನವೇ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ ಎಡಗೈ ವೇಗಿ ಟಿ ನಟರಾಜನ್ ಅವರನ್ನು ಭಾರತ ತಂಡದ ಮಾಜಿ ವೇಗಿ ಝಹೀರ್ ಖಾನ್ ಗುಣಗಾನ ಮಾಡಿದ್ದಾರೆ.
ಕಳೆದ ಮೂರು ತಿಂಗಳು ತಮಿಳುನಾಡು ಮೂಲದ ಎಡಗೈ ವೇಗಿ ಟಿ ನಟರಾಜನ್ ಪಾಲಿಗೆ ಅದ್ಭುತ ದಿನಗಳು, ಆಸ್ಟ್ರೇಲಿಯಾ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ವಿಮಾನವೇರಿದ್ದ ಯುವ ವೇಗಿ ಓಡಿಐ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಶುಕ್ರವಾರ ನಟರಾಜನ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಭಾರತದ 300ನೇ ಆಟಗಾರ ಎನಿಸಿಕೊಂಡರು. ಅಲ್ಲದೆ, ಝಹಿರ್ ಖಾನ್ ಬಳಿಕ ದೀರ್ಘಾವಧಿ ಕ್ರಿಕೆಟ್ನಲ್ಲಿ ಭಾರತದ ಪ್ರತಿನಿಧಿಸಿದ ಮೊದಲ ಎಡಗೈ ವೇಗಿ ಎಂಬ ಗೌರವಕ್ಕೆ ಭಾಜನರಾದರು.
ನಟರಾಜನ್ ಚೊಚ್ಚಲ ಪ್ರವೇಶದ ಪ್ರಥಮ ಇನಿಂಗ್ಸ್ನಲ್ಲಿಯೇ ಮೂರು ವಿಕೆಟ್ ಉರುಳಿಸಿದ್ದು ವಿಶೇಷವಾಗಿತ್ತು.
.
.