- ಸುಪ್ರೀಂ ಕೋರ್ಟ್ನಿಂದ ಮಹತ್ವದ ತೀರ್ಪು
NAMMUR EXPRESS NEWS
ನವದೆಹಲಿ: ಸಾಲ ಮಾಡಿ ವಾಹನ ಕೊಳ್ಳುವವರಿಗೆ ಇಲ್ಲೊಂದು ಎಚ್ಚರಿಕೆ. ಸಾಲ ಮರುಪಾವತಿಸದಿದ್ದರೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಯಾವುದೇ ಸಮಯದಲ್ಲಿ ಬಂದು ನಿಮ್ಮ ವಾಹನವನ್ನು ಮುಟ್ಟುಗೋಲು ಹಾಕಬಹುದು. ಅದು ಅಪರಾಧವಾಗುವುದಿಲ್ಲ. ಹೀಗಂತ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಾಲ ಮಾಡಿ ವಾಹನ ಕೊಳ್ಳುವಾಗ ಆ ವಾಹನ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯ ಹೆಸರಿನಲ್ಲಿಯೇ ಇರುತ್ತದೆ. ಪೂರ್ತಿಯಾಗಿ ಸಾಲ ಪಾವತಿಸಿದ ನಂತರ
ದಾಖಲೆಯಲ್ಲಿ ಹೆಸರು ಬದಲಾಗುವವರೆಗೆ ಸಂಸ್ಥೆಗೆ ವಾಹನದ ಮೇಲೆ ಅಧಿಕಾರವಿರುತ್ತದೆ. ಹಾಗಾಗಿ ಮುಟ್ಟುಗೋಲು ಹಾಕಿಕೊಂಡರೂ ಅದು ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂದು ಜಸ್ಟಿಸ್ ಚೌಹಾಣ್ರ ಏಕಸದಸ್ಯ ಪೀಠ ತೀರ್ಪಿನಲ್ಲಿ ಹೇಳಿದೆ.
ವಾಹನ ಮುಟ್ಟುಗೋಲು ಹಾಕಿದ ಕುರಿತು 2009ರಲ್ಲಿ ವ್ಯಕ್ತಿಯೋರ್ವರು ಗುವಾಹಟಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ವಾಹನವನ್ನು ಅವರಿಗೆ ಹಿಂದಿರುಗಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಹಣಕಾಸು ಸಂಸ್ಥೆ ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.