- ಬಟ್ಟೆ, ಪ್ಲಾಸ್ಟಿಕ್, ಕಸ ಎಸೆಯುವುದು ತಪ್ಪಲ್ಲವೇ..?
- 25 ಟನ್ ಕಸ ತೆಗೆದ ಯುವ ಬ್ರಿಗೇಡ್ ಸಂಸ್ಥೆ
NAMMUR EXPRESS NEWS
ಧರ್ಮಸ್ಥಳ: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವುದು ಪುಣ್ಯದ ಕೆಲಸ. ತಮ್ಮ ಪಾಪಗಳನ್ನು ಸ್ನಾನ ಮಾಡಿ ತೊಳೆದುಕೊಳ್ಳುವುದು ಎಂಬುದು ಬಹು ವರ್ಷದಿಂದ ಬಂದ ವಾಡಿಕೆ.
ಆದರೆ ನೇತ್ರಾವತಿಗೆ ಸ್ನಾನಕ್ಕೆ ಬಂದ ಭಕ್ತರು ಅಲ್ಲಿಯೇ ಬಟ್ಟೆ, ಪ್ಲಾಸ್ಟಿಕ್, ಕಾಯಿ, ಫೋಟೋ, ತಮ್ಮ ಉಡುಪು ಗಳನ್ನು ಎಸೆದು ವಿಕೃತಿ ಮೆರೆಯುತ್ತಿದ್ದಾರೆ. ಇತ್ತೀಚಿಗೆ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ತಂಡದ ನೂರಾರು ಕಾರ್ಯಕರ್ತರು ಬೆಳಗಿನಿಂದ ಸಂಜೆಯವರೆಗೂ ಕೆಲಸ ಮಾಡಿ ಸುಮಾರು 25 ಟನ್ ಗಳಷ್ಟು ಕಸ ಹೊರತೆಗೆದಿದ್ದಾರೆ!.
ಪ್ರತಿ ವರ್ಷ ಇಲ್ಲಿ ಸಂಘ ಸಂಸ್ಥೆಗಳು ಈ ಕಸ ಕ್ಲೀನ್ ಮಾಡುತ್ತವೆ. ಆದ್ರೆ ನದಿಯ ಪಾವಿತ್ರ್ಯತೆ ಮಾತ್ರ ಹಾಳಾಗುತ್ತಲೇ ಇದೆ.
ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು ಮತ್ತು ಆಡಳಿತ ಮಂಡಳಿ ಈ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸಬೇಕಿದೆ.
ಬಟ್ಟೆ ಬರೆ ನದಿಗೆ ಹಾಕಿ ಮಲೀನ ಮಾಡಿದರೆ ದಂಡ ಹಾಕಲಾಗುವುದು. ಮತ್ತೆ ನಿಮ್ಮ ಪ್ರತಿಯೊಂದು ಕಾರ್ಯವೂ ಸಿಸಿಟಿವಿಯಲ್ಲಿ ದಾಖಲಿಸಲಾಗುತ್ತಿದೆ ಎಂದು ವಾರ್ನಿಂಗ್ ನೀಡಬೇಕಿದೆ.
ದಂಡ ಹಾಕಿದರೆ ಕೊಂಚ ಕಡಿಮೆ?!
ನೇತ್ರಾವತಿ ನದಿ ತೀರದಲ್ಲಿ ಒಂದು ಬೋರ್ಡು ಹಾಕಿ, ಹಳೆ ಬಟ್ಟೆ ಕಸ ನದಿಗೆ ಎಸೆದವರಿಗೆ ದಂಡ ವಿಧಿಸಬೇಕಿದೆ.
ಯಾತ್ರಿಕರ ಗಮನಕ್ಕೆ..!
ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಿಕರು ದರ್ಶನ ಮಾತ್ರ ಅಲ್ಲ ಮನೆಯಲ್ಲಿ ಇದ್ದ ಹಳೆ ಬಟ್ಟೆ , ಸರಂಜಾಮುಗಳನ್ನು ನೇತ್ರಾವತಿ ನದಿಗೆ ಸುರಿಯುವುದು ಕಾಣುತ್ತಿದೆ. ಇದಕ್ಕೆ ಬ್ರೇಕ್ ಹಾಕಬೇಕಿದೆ.