- ಕಮಲಾ ಹ್ಯಾರಿಸ್ ರಿಂದ ಪದಗ್ರಹಣ
- ನಗರದಲ್ಲಿ ಭಾರೀ ಭದ್ರತಾ ವ್ಯವಸ್ಥೆ
ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ಬುಧವಾರ ಅಧಿಕಾರ ಸ್ವೀಕರಿಸುವರು. ಮೊಟ್ಟ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಭಾರತ ಮೂಲದ ಅಮೆರಿಕನ್ಪ್ರಜೆ ಕಮಲಾ ಹ್ಯಾರಿಸ್ ಪದಗ್ರಹಣ ಮಾಡಲಿದ್ದಾರೆ.
ಕ್ಯಾಪಿಟಲ್ಹಿಲ್ನ ಪಶ್ಚಿಮ ದ್ವಾರದ ಬಳಿ ನಡೆಯುವ ಸಮಾರಂಭದಲ್ಲಿ ಸುಪ್ರೀಂಕೋರ್ಟ್ಮುಖ್ಯನ್ಯಾಯಮೂರ್ತಿ ಜಾನ್ರಾಬರ್ಟ್ಸ್ಅವರು ಜೋ ಬೈಡನ್ಅವರಿಗೆ ಪ್ರತಿಜ್ಞಾವಿಧಿ ಬೋಧಿಸುವರು. ಬೈಡನ್ಅವರು ತಮ್ಮ ಕುಟುಂಬ ಹೊಂದಿರುವ 127 ವರ್ಷ ಹಳೆಯದಾದ ಬೈಬಲ್ಮೇಲೆ ಪ್ರಮಾಣ ಮಾಡುವ ಮೂಲಕ ಪ್ರತಿಜ್ಞಾ ವಿಧಿ ಸ್ವೀಕರಿಸುವರು ಎಂದು ಮೂಲಗಳು ಹೇಳಿವೆ. ಈ ಕಾರಣ ನಗರದಲ್ಲಿ ಯಾವುದೇ ತೊಂದರೆ ಆಗದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಕಮಲಾ ಹ್ಯಾರಿಸ್ಅವರಿಗೆ ಸುಪ್ರೀಂಕೋರ್ಟ್ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್ಪ್ರತಿಜ್ಞಾವಿಧಿ ಬೋಧಿಸುವರು ಎಂದು ಮೂಲಗಳು ತಿಳಿಸಿದೆ.
ಅಮೆರಿಕ ಅಧ್ಯಕ್ಷರಾಗಿ ಬೈಡನ್ ಪ್ರಮಾಣ ವಚನ ಸ್ವೀಕಾರ
Related Posts
Add A Comment