ಈಶ್ವರ್ ಮಲ್ಪೆ ಅವರಿಂದ ಇನ್ನೊಂದು ಸಾಮಾಜಿಕ ಕಾರ್ಯ!
* ಕಿವಿ ಸಮಸ್ಯೆಯವರಿಗೆ ನೆರವು!
* ಅ. 25 ಮತ್ತು 26ರಂದು ನೊಂದಾಯಿಸಿಕೊಳ್ಳಿ!
* ಉಚಿತ ಶ್ರವಣ ತಪಾಸಣೆ ಮತ್ತು ಬಹಳ ಕಡಿಮೆ ಬೆಲೆಯಲ್ಲಿ ಯಂತ್ರಗಳ ವಿತರಣೆ!
* ಅಂತರಾಷ್ಟ್ರೀಯ ಸಂಸ್ಥೆ ಅನುಭವ ವೈದ್ಯರಿಂದ ಶಿಬಿರ!
* ಅಂತರಾಷ್ಟ್ರೀಯ ಸಂಸ್ಥೆಗಳ ಶ್ರವಣ ಯಂತ್ರ ವಿತರಣೆ!
* ಈ ಶಿಬಿರದಲ್ಲಿ ಸಂಸ್ಥೆಯವರು ತಮ್ಮ ದೇಣಿಗೆ ಮೊತ್ತದಿಂದ ಶೇಕಡ 40ರಷ್ಟು ಯಂತ್ರದ ವೆಚ್ಚವನ್ನ ಬರಿಸಲಿದ್ದಾರೆ
NAMMUR EXPRESS NEWS
ಟೀಮ್ ಈಶ್ವರ್ ಮಲ್ಪೆ ನೇತೃತ್ವದಲ್ಲಿ ವಿಘ್ನಹರ್ತ ಸಂಸ್ಥೆ ಉಡುಪಿ ಸಹಯೋಗದೊಂದಿಗೆ ಹಾಗೂ ವಿಘ್ನಹರ್ತ ಸಂಸ್ಥೆ ಇವರ ಆಶ್ರಯದಲ್ಲಿ ಉಚಿತ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ.
ಟೀಮ್ ಈಶ್ವರ್ ಮಲ್ಪೆ ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು ಈಗ ಅವರು ವಿಘ್ನಹರ್ತ ಶ್ರವಣ ಚಿಕಿತ್ಸಾಲಯ ಸಹಯೋಗದೊಂದಿಗೆ ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು, ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ತಮ್ಮ ಟೀಮ್ ಈಶ್ವರ್ ಮಲ್ಪೆ ಸಂಸ್ಥೆಯಿಂದ ಶ್ರವಣದ ಯಂತ್ರಕ್ಕೆ (Hearing Machine) ಆಗುವ ವೆಚ್ಚದ ಶೇಕಡಾ 40% ಮೊತ್ತವನ್ನು ಭರಿಸಲಾಗುತ್ತಿದ್ದು ರೋಗಿಗಳು ಇದರ ಉಪಯೋಗವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ಅ. 25 ಮತ್ತು 26ರಂದು ವಿಘ್ನಹರ್ತ ಸಂಸ್ಥೆ ಉಡುಪಿ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸೂಚನೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9902344399 ಇಂದೇ ನೊಂದಾಯಿಸಿಕೊಳ್ಳಿ.
ಅಕ್ಟೋಬರ್ 25 ಮತ್ತು 26ನೇ ತಾರೀಖಿನಂದು ನೊಂದಾಯಿಸಿದ 30 ಜನರಿಗೆ ಉಚಿತ ತಪಾಸಣೆ ಹಾಗೂ ಶ್ರವಣ ಯಂತ್ರಗಳ ವಿತರಣೆಯನ್ನು ಟೀಮ್ ಈಶ್ವರ್ ಮಲ್ಪೆ ದೇಣಿಗೆ ಮೊತ್ತದಲ್ಲಿ 40 ರಷ್ಟು ವೆಚ್ಚವನ್ನು ಬರಿಸಲಿದ್ದು ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ಪ್ರತಿಯೊಬ್ಬರು ಕೂಡ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.