ಫ್ರೆಂಡ್ಸ್ ಕ್ಲಬ್ ಕರಂಬಾರ್ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
– ಬಡವರಿಗಾಗಿ ಹಳೆ ವಸ್ತು ಸಂಗ್ರಹಣೆಯ ಉದ್ಘಾಟನೆ
– ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದ ನಿಸಾರ್ ಕರಾವಳಿ
NAMMUR EXPRESS NEWS
ಮಲ್ಪೆ: ಫ್ರೆಂಡ್ಸ್ ಕ್ಲಬ್ ಕರಂಬಾರ್ (ರಿ ) ವತಿಯಿಂದ ಸಾಮಾಜಿಕ ಸೇವೆ ಹಾಗೂ ಸ್ಕೂಲ್ ಚಲೋ ಅಭಿಯಾನದ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸಮಾಜದಲ್ಲಿ ತೀರಾ ಬಡ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ರೋಗಿಗಳಿಗೆ ಬೇಕಾದ ಸಲಕರಣೆಗಳು ಮತ್ತು ಬಡ ಮದುಮಕ್ಕಳ ಬಟ್ಟೆ ಬರೆಗಳನ್ನು ಶೇಖರಿಸಿ ವಿತರಿಸುವುದು, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ, ಬಡವರಿಗಾಗಿ ಹಳೆ ವಸ್ತು ಸಂಗ್ರಹಣೆಯ ಉದ್ಘಾಟನೆ ಕಾರ್ಯಕ್ರಮ ಮೇ 24ರಂದು ಫ್ರೆಂಡ್ಸ್ ಕ್ಲಬ್ ಕಚೇರಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಮಾಜ ಸೇವಕ ನಿಸಾರ್ ಕರಾವಳಿ ಭಾಗವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ( ಪ್ರೌಢ ಶಾಲಾ ವಿಭಾಗ ) ಬಜ್ಪೆ ಇಲ್ಲಿನ ವಿದ್ಯಾರ್ಥಿನಿ ಫಾತಿಮ ಸಲ್ವ 625 ಅಂಕಗಳ ಪೈಕಿ 602 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆಯಾಗಿದ್ದು, ಇವರಿಗೆ ಸನ್ಮಾನಿಸಲಾಗಿತ್ತು. ಇವರು ಕರಂಬಾರು ನಿವಾಸಿ ಅಬ್ದುಲ್ ಸಲೀಂ ಪೇರ ಹಾಗೂ ಆತಿಕ ಬಿ.ಸಿ ರೋಡ್ ದಂಪತಿಗಳ ಸುಪುತ್ರಿಯಾಗಿದ್ದಾರೆ.
ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಫಾತಿಮಾ ಸಾಧನೆ
2023-24ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ, ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ( ಪ್ರೌಢ ಶಾಲಾ ವಿಭಾಗ ) ಬಜ್ಪೆ ಇಲ್ಲಿನ ವಿದ್ಯಾರ್ಥಿನಿ ಫಾತಿಮ ಸಲ್ವ 625 ಅಂಕಗಳ ಪೈಕಿ 602 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆಯಾಗಿದ್ದಾರೆ. ಈಕೆ ಕರಂಬಾರು ನಿವಾಸಿ ಅಬ್ದುಲ್ ಸಲೀಂ ಪೇರ ಹಾಗೂ ಆತಿಕ ಬಿ.ಸಿ ರೋಡ್ ದಂಪತಿಗಳ ಸುಪುತ್ರಿಯಾಗಿದ್ದಾಳೆ.