ಕೇಂದ್ರ ಸರ್ಕಾರದ ಅಮೃತ ಭಾರತ ರೈಲು ನಿಲ್ದಾಣ!
– ಈ ಅಭಿವೃದ್ಧಿ ಯೋಜನೆಗೆ ಉಡುಪಿ ಆಯ್ಕೆ
– ಸಂತೋಷ ವ್ಯಕ್ತಪಡಿಸಿದ ಸಚಿವರು
NAMMUR EXPRESS NEWS
ಉಡುಪಿ: ಭಾರತ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಅಮೃತ್ ಭಾರತ ರೈಲು ನಿಲ್ದಾಣಗಳ ಅಭಿವೃದ್ಧಿ ಯೋಜನೆಯಡಿ ಉಡುಪಿ ನಿಲ್ದಾಣವನ್ನು ಆಯ್ಕೆ ಮಾಡಿರುವ ಬಗ್ಗೆ ಪ್ರಸ್ತಾಪಿಸಿರುವ ಕೇಂದ್ರ ಸಚಿವರು ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹರ್ಷ ವ್ಯಕ್ತಪಡಿಸಿದ್ದಾರೆ. ಭಾರತ ನರೇಂದ್ರ ಮೋದಿ ಮತ್ತು ವೈಷ್ಣವ್ ನೇತ್ರತ್ವದಲ್ಲಿ ಅಭೂತಪೂರ್ವ ಪ್ರಗತಿಯತ್ತ ದಾಪುಗಾಲಿಕ್ಕುತ್ತಿರುವ ಈ ಸುಸಂದರ್ಭದಲ್ಲಿ “ಅಮೃತ್ ಯೋಜನೆಯ ಮೂಲಕ ಉಡುಪಿ ರೈಲು ನಿಲ್ದಾಣವನ್ನು ಸಂಪೂರ್ಣ ಆಧುನೀಕರಿಸಿ ವಿಶ್ವದರ್ಜೆಯ ಪ್ರಯಾಣಿಕ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಅಮೃತ್ ಭಾರತ್ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಲು ಇಲಾಖೆಗೆ ಸೂಚಿಸಲಾಗಿದೆ ಎಂದು ಶೋಭಾ ಕರಂದ್ಲಾಜೆ ಪ್ರಕಟಣೆಯಲ್ಲಿ ಪ್ರಕಟಿಸಿದರು.