ಚೈತ್ರಾ ವಂಚನೆ: ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ!
– ಬಟ್ಟೆ ಅಂಗಡಿ ಹಾಕಿಸಿ ಕೊಡುವುದಾಗಿ 5 ಲಕ್ಷ ವಂಚನೆ
– ಒಂದರ ಮೇಲೆ ಒಂದು ಸಂಕಷ್ಟಕ್ಕೆ ಚೈತ್ರಾ
NAMMUR EXPRESS NEWS
ಉಡುಪಿ: ಬೈಂದೂರಿನ ಉದ್ಯಮಿ ಗೋಪಾಲ ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಎಸಗಿರುವ ಚೈತ್ರಾಳನ್ನು ವಿಚಾರಣೆಗೆಂದು ಕೋಟ ಪೊಲೀಸರು ಕರೆತಂದಿದ್ದಾರೆ. ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಚೈತ್ರಾ ವಿರುದ್ಧ ಸುಧೀನ್ ಪೂಜಾರಿ ಎಂಬವರು ದೂರು ದಾಖಲಿಸಿ 5 ಲಕ್ಷ ರೂ. ವಂಚನೆ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ನ್ಯಾಯಾಲಯ ಸಂಚಾರಿ ಪೀಠ ಬ್ರಹ್ಮಾವರ ಇವರ ಸಮಕ್ಷಮ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮುಂದೆ ಆರೋಪಿ ಚೈತ್ರಾಳನ್ನು ಪೊಲೀಸರು ಹಾಜರುಪಡಿಸಿದ್ದಾರೆ.
ಪರಪ್ಪನ ಅಗ್ರಹಾರದಿಂದ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ಬ್ರಹ್ಮಾವರ ಸರ್ಕಲ್ ಅವರು ಆರೋಪಿತೆಯನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ಕೇಳಿದ್ದರು. ಇದೀಗ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ವಿಚಾರಣೆ ಮುಂದುವರಿದಿದೆ. ಒಂದು ದಿನದಲ್ಲೇ ಪೊಲೀಸ್ ವಿಚಾರಣೆ ಪೂರ್ಣಗೊಳಿಸಬೇಕಾಗಿದೆ. ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಚೈತ್ರಳನ್ನು ರವಾನೆ ಮಾಡಲಾಗುತ್ತಿದೆ.