ವಿದ್ಯಾಭಾರತಿ ಕರ್ನಾಟಕದಿಂದ ಕ್ರೀಡಾಕೂಟ
– ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿಯಲ್ಲಿ ಆಯೋಜನೆ
– ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡ ಕ್ರೀಡಾಪಟುಗಳು
NAMMUR EXPRESS NEWS
ಉಡುಪಿ: ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟ 2023 ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಇಲ್ಲಿನ ಅಮೃತ ಭಾರತಿ ಕ್ರೀಡಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀ ಪಾಂಡುರಂಗ ಪೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ನಿವೃತ್ತ ಪ್ರಾಂಶುಪಾಲರು ವೈ ಎಂ ಸಿ ಎ ದೈಹಿಕ ಶಿಕ್ಷಣ ಕಾಲೇಜು ಬೆಂಗಳೂರು ಶ್ರೀ ವಾಸುದೇವ ಭಟ್ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಕ್ರೀಡಾಕೂಟದ ಧ್ವಜಾರೋಹಣವನ್ನು ಅಮೃತ ಭಾರತಿ ಟ್ರಸ್ಟಿನ ಸದಸ್ಯರು ಬಾಲಕೃಷ್ಣ ಮಲ್ಯ ಅವರು ಧ್ವಜಾರೋಹಣವನ್ನು ಮಾಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಲ್ಲಿ 10 ಶಾಲೆಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಎಲ್ಲಾ ಶಾಲೆಗಳು ಪಥಸಂಚಲನದಲ್ಲಿ ಭಾಗವಹಿಸಿದವು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾಭಾರತಿ ಕರ್ನಾಟಕ ಜಿಲ್ಲೆಯ ಅಧ್ಯಕ್ಷರು ಶ್ರೀಯುತ ಪಾಂಡುರಂಗ ಪೈ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಯುತ ಗುರುದಾಸ ಶೆಣೈ, ಅಮೃತ ಭಾರತಿ ವಸತಿ ನಿಲಯದ ಅಧ್ಯಕ್ಷರು ಶ್ರೀಯುತ ಯೋಗೀಶ್ ಭಟ್, ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷರು ಶ್ರೀಯುತ ಶೈಲೇಶ್ ಕಿಣಿ , ಅಮೃತ ಭಾರತಿ ಟ್ರಸ್ಟಿನ ಸದಸ್ಯರು ಸುಧೀರ್ ನಾಯಕ್, ಶ್ರೀ ಭಾಸ್ಕರ ಜೋಯಿಸ್ ಉಪಸ್ಥಿತರಿದ್ದರು .
ಮುಖ್ಯೋಪಾಧ್ಯಾಯಿನಿ ಅಪರ್ಣ ಆಚಾರ್ , ಶ್ರೀಮತಿ ಶಕುಂತಲ, ಅನಿತಾ ಶೆಟ್ಟಿ ವಿದ್ಯಾ ಕೇಂದ್ರದ ಪ್ರಾಂಶುಪಾಲರು ಅರುಣ್ ಸಿ,ವೈ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಅಮರೇಶ್ ಹೆಗಡೆ, ಕರ್ನಾಟಕ ಉಡುಪಿ ಜಿಲ್ಲೆಯ ಕ್ರೀಡಾಕೂಟ ಪ್ರಮುಖ್ ಉಷಾ ಶೆಟ್ಟಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ , ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಒಟ್ಟು 347ವಿದ್ಯಾರ್ಥಿಗಳು , ಶಿಕ್ಷಕರು 82 ಮತ್ತು ಸಂಸ್ಥೆಯ ಬೋಧಕೇತರ ವರ್ಗದವರು ಭಾಗವಹಿಸಿದರು. ಜಿಲ್ಲಾಮಟ್ಟದಲ್ಲಿ ಪ್ರಥಮ ದ್ವಿತೀಯ ಬಹುಮಾನವನ್ನು ಪಡೆದವರು ಪ್ರಾಂತ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ. ನವಂಬರ್ 14, 15 ಮಾಧವ ವಿದ್ಯಾಲಯ ಮಂಡ್ಯದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸುವರು.
ಕಾರ್ಯಕ್ರಮದ ನಿರೂಪಣೆಯನ್ನು ವಿಮಲಾ ಮಾತಾಜಿ ಮತ್ತು ಜಿಲ್ಲಾ ಶಾರೀರಿಕ ಪ್ರಮುಖವಿಜಯಕುಮಾರ್ ಶೆಟ್ಟಿ, ಧನ್ಯವಾದ ದೈಹಿಕ ಶಿಕ್ಷಣ ಶಿಕ್ಷಕರು ನಿಶಾನ್ , ಸ್ವಾಗತ ಅಮೃತ ಭಾರತಿ ವಿದ್ಯಾ ಕೇಂದ್ರ ದೈಹಿಕ ಶಿಕ್ಷಣ ಶಿಕ್ಷಕರು ಶ್ರೀ ರವೀಂದ್ರ ಶೆಟ್ಟಿ ಮಾಡಿದರು.