ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ!
– ಸ್ಮಾರ್ಟ್ ಫೋನಿಗೆ ಸರ್ಕಾರದಿಂದ ಕರೆನ್ಸಿ ಭಾಗ್ಯ
– ಏನಿದು ಕರೆನ್ಸಿ… ಯಾರಿಗೆ ಲಾಭ…?
NAMMUR EXPRESS NEWS
ಉಡುಪಿ : ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಗೆ ತಿಂಗಳಾಂತ್ಯದಲ್ಲಿ ಕರೆನ್ಸಿ ನೀಡಲು ಮುಂದಾಗಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಕೇಂದ್ರ ಸರ್ಕಾರದ ಪೋಷನ್ ಅಭಿಯಾನದಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಸ್ಮಾರ್ಟ ಫೋನ್ ಗಳಿಗೆ ಕಳೆದ ನಾಲ್ಕು ತಿಂಗಳುಗಳಿಂದ ಹಣ ಬಿಡುಗಡೆ ಆಗಿಲ್ಲ. ಈಗ ತಿಂಗಳಾಂತ್ಯದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪೋಷಣ್ ಅಭಿಯಾನದಡಿಯಲ್ಲಿ ಗರ್ಭಿಣಿಯರ ದಾಖಲಾತಿ, ಆರೋಗ್ಯ, ಮಕ್ಕಳ ದಾಖಲಾತಿ, ಆರೋಗ್ಯ, ಆಹಾರ ವಿತರಣೆ ಮಾಹಿತಿ ಅಪ್ ಲೋಡ್ ಮಾಡಬೇಕು. ಆದರೆ ಮೊಬೈಲ್ ಗೆ ಕರೆನ್ಸಿ ಇಲ್ಲದ ಕಾರಣ ನಾಲೈದು ತಿಂಗಳಿನಿಂದ ತೊಂದರೆ ಅನುಭವಿಸುವಂತಾಗಿತ್ತು.