ಉಡುಪಿಯಲ್ಲಿ ನಡೆಯಲಿದೆ ಗ್ಯಾರಂಟಿ ಸಮಾವೇಶ!
– ಫೆ12ರಿಂದ 21ರ ವರೆಗೆ ನಡೆಯಲಿರುವ ಸಮಾವೇಶ!
– ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಾದ್ಯಂತ ತಲುಪಿಸುವ ಕಾರ್ಯಕ್ರಮ
NAMMUR EXPRESS NEWS
ಉಡುಪಿ: ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಾಗೂ ಜಿಲ್ಲೆಯ ಪ್ರತಿ ಅರ್ಹರಿಗೆ ಈ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯಾದ್ಯಂತ ಗ್ಯಾರಂಟಿ ಸಮಾವೇಶ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಫೆ.15 ರಂದು ಬ್ರಹ್ಮಾವರದ ನಾರಾಯಣ ಗುರು ಸಭಾ ಭವನ ಹಾಗೂ ಹೆಬ್ರಿಯ ಸಮಾಜ ಮಂದಿರ ಗ್ರಾಮ ಪಂಚಾಯತ್,
టి. 16 ರಂದು ಉಡುಪಿ ಡೌನ್ ಹಾಲ್,
ಫೆ. 17 ರಂದು ಕುಂದಾಪುರ ತಾಲೂಕು ಪಂಚಾಯತ್, ಕೋಟದ ಸಹಕಾರಿ ವ್ಯವಸಾಯಕ ಸಂಘ (ಸಿ.ಎ) ಬ್ಯಾಂಕ್ ಇದರ ಹಾಲ್ ನಲ್ಲಿ ಹಾಗೂ ಕಾರ್ಕಳದ ಮಂಜುನಾಥ ಪೈ ಹಾಲ್,
ಫೆ.19 ರಂದು ವಂಡ್ನಯ ಮಹಾತ್ಮ ಗಾಂಧಿ ಭವನ, ಅಜೆಕಾರುವಿನ ಮರ್ಣೆ ಗ್ರಾಮ ಪಂಚಾಯತ್ ಹಾಗೂ ಬೈಂದೂರು ಆಡಳಿತ ಸೌಧದ ಆವರಣ.
ಫೆ.21 ರಂದು ಕಾಪು ಆಡಳಿತ ಸೌಧದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವುದಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.