ನೀವೂ ಸೇನೆ ಸೇರಬೇಕೇ? ಉಡುಪಿಯಲ್ಲಿ ನೇಮಕಾತಿ!
– ಜು.25ರವರೆಗೆ ಅಗ್ನಿಪಥ್ ಸೇನಾ ನೇಮಕಾತಿ
– ಕರಾವಳಿಯಲ್ಲೇ ಸೇನೆ ಸೇರಲು ಯುವ ಜನತೆ ನಿರುತ್ಸಾಹ
NAMMUR EXPRESS NEWS
ಉಡುಪಿ: ಅಗ್ನಿಪಥ್ ಸೇನಾ ನೇಮಕಾತಿಗೆ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ಜು 17ರಿಂದ ಜು.25ರ ವರೆಗೆ ನಡೆಯಲಿರುವ ಅಗ್ನಿಪಥ್ ನೇಮಕಾತಿಗೆ ಉಡುಪಿ ಜಿಲ್ಲಾಡಳಿತ ಮೊದಲ ಬಾರಿಗೆ ಆತಿಥ್ಯವಹಿಸಿದೆ. ಅಡಿಷನಲ್ ಮೇಜರ್ ಜನರಲ್ ಅರ್. ಆರ್. ರೈನಾ, ಮಂಗಳೂರು ಸೇನಾ ನೇಮಕಾತಿ ವಿಭಾಗದ ಕರ್ನಲ್ ಅನುಜ್ ಗುಪ್ತ, ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ., ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಉಪಸ್ಥಿತರಿದ್ದು ಚಾಲನೆ ನೀಡಿದರು. ಸಾವಿರಾರು ಯುವಕರು ಆಗಮಿಸಿದ್ದರು.
ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣ ಇದಕ್ಕಾಗಿ ಸಜ್ಜುಗೊಂಡಿದ್ದು, ಉಡುಪಿಯ ಯುವಕರು ಇದರಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಉಡುಪಿಯಲ್ಲಿ ಇದು ಮೂರನೇ ಬಾರಿಗೆ ನಡೆಯುತ್ತಿರುವ ಸೇನಾ ನೇಮಕಾತಿ ಕ್ಯಾಂಪ್. , 2013, 2020 ಇದೀಗ ಅಗ್ನಿಪಥ್ ನೇಮಕಾತಿ ಸೇರಿ ಮೂರನೇ ಸೇನೆ ನೇಮಕಾತಿ ಉಡುಪಿಯಲ್ಲಿ ನಡೆಯುತ್ತಿದೆ. ಉಡುಪಿ, ದ.ಕ. ಸಹಿತ 11 ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಜಿಲ್ಲಾಡಳಿತದಿಂದ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಚಿಕ್ಕಮಗಳೂರು, ಉಡುಪಿ, ದ.ಕ. ಜಿಲ್ಲೆ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ ಸೇರಿ 11 ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ನೇಷನ್ ಫಸ್ಟ್ ಸಂಸ್ಥೆ ಜಿಲ್ಲೆಯಲ್ಲಿ ರಕ್ಷಣ ಪಡೆಗಳಿಗೆ ಯುವಕರ ನಿರುತ್ಸಾಹ ಗಮನಿಸಿ ಜಾಗೃತಿ, ಮಾರ್ಗದರ್ಶನ ತರಬೇತಿ ಮೂಲಕ ಯುವಕರನ್ನು ಸೇನೆ ಸೇರಲು ಪ್ರೋತ್ಸಾಹಿಸುತ್ತಿದೆ. 11 ವರ್ಷಗಳಿಂದ ತರಬೇತಿ, ಮಾರ್ಗದರ್ಶನ ನೀಡುತ್ತಿರುವ ಟೀಮ್ ನೇಶನ್ ಫಸ್ಟ್ ಸೇನೆ ನೇಮಕಾತಿ ಸಂದರ್ಭ ಯುವಕರನ್ನು ಸಜ್ಜುಗೊಳಿಸುತ್ತಿದೆ.
ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್
HOW TO APPLY : NEET-UG COUNSELLING 2023