ಕೀಮ್ ಸ್ಟಾರ್ ಉಡುಪಿ ಯೂಟ್ಯೂಬ್ ಚಾನೆಲ್ ಮತ್ತು ಡ್ರೀಮ್ ಫಿಲ್ಮ್ ಸಂಸ್ಥೆ!
– ಸ್ಥಳೀಯ ಯುವ ಪ್ರತಿಭೆಗಳ ಬೆಳೆಸುವ ಕಾರ್ಯ!
– ಕಲೆ ಬೆಳೆಸುವುದಲ್ಲದೆ ಕಲಾವಿದರ ಕಷ್ಟಕಾರ್ಪಣ್ಯ ನೀಗಿಸುವ ಪ್ರಯತ್ನ!
NAMMUR EXPRESS NEWS
ಉಡುಪಿ:ಉಡುಪಿ ಯುಟ್ಯೂಬ್ ಚಾನೆಲ್ ಮತ್ತು ಕೀಮ್ ಸ್ಟಾರ್ ಡ್ರೀಮ್ ಫಿಲಂ ಸಂಸ್ಥೆ ಎಲ್ಲರ ಮನೆ ಮಾತಾಗಿದೆ.
ಕಳೆದ ಮೂರು ವರ್ಷಗಳಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮತ್ತು ಸಾಮಾಜಿಕ ಗೌರವಗಳನ್ನು ನೀಡುತ್ತಾ ಬರುತ್ತಿದ್ದು ಕಲೆಯ ಉಳಿವಿಕೆ ಮತ್ತು ಬೆಳೆಸಿ ಶ್ರೀಮಂತಗೊಳಿಸುವ ಸಾಮಾನ್ಯ ಕಲಾವಿದರ ಯೋಗ ಕ್ಷೇಮ ಮತ್ತು ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೀಮ್ ಸ್ಟಾರ್ ಸಾಂಸ್ಕೃತಿಕ ವೈಭವ ಎಂಬ ಕಲಾ ಸೇವಾ ಸಂಸ್ಥೆಯನ್ನು ಪ್ರಾರಂಭಿಸುವ ಚಿಂತನೆಯನ್ನು ಸಂಸ್ಥೆಯು ಸಿಇಓ ಜಯಶೀಲ ಕಲ್ಯಾಣಪುರ ಪರಚಿಂತನೆಯನ್ನು ಮಾಡುತ್ತಿದ್ದಾರೆ.
ಸ್ಥಳೀಯ ಯುವ ಪ್ರತಿಭೆಗಳನ್ನು ತಯಾರು ಮಾಡುವುದಲ್ಲದೆ ಸ್ಥಳೀಯ ತಂಡಗಳ ಸಹಯೋಗದೊಂದಿಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ರಾಜ್ಯದ್ಯಂತ ನಿಖರವಾದ ಮೊತ್ತಕ್ಕೆ ಕಾರ್ಯಕ್ರಮಗಳನ್ನು ನೀಡಿ ಕಲೆಯನ್ನು ಬೆಳೆಸುವುದಲ್ಲದೆ ಕಲಾವಿದರ ಕಷ್ಟಕಾರ್ಪಣ್ಯಗಳನ್ನು ನೀಗಿಸುವ ಪ್ರಯತ್ನಕ್ಕೆ ಕೈ ಹಾಕಲು ಪ್ರಯತ್ನಿಸುತಿದ್ದು ಜಿಲ್ಲಾವಾರು ಸಂಚಾಲಕರನ್ನು ಸೇರಿಸಿ ಅವರ ಸಂಪರ್ಕದೊಂದಿಗೆ ಕಾರ್ಯಕ್ರಮವನ್ನು ಪಡೆಯಬಹುದಲ್ಲದೆ ಪ್ರಬುದ್ಧ ರೀತಿಯ, ಪ್ರದರ್ಶನಗಳನ್ನು ಮೊದಲು ರಾಜ್ಯದಲ್ಲಿ ನಡೆಸುವ ಪ್ರಯತ್ನದಲ್ಲಿದ್ದಾರೆ.
ಇದಕ್ಕೆ, ಸಲಹೆಗಾರರಾಗಿ ರೋಟರಿ ಗವರ್ನರ್ ವಿಜಯ್ ಕುಮಾರ್ ಜಿ ಆಕಾಶವಾಣಿ ಕಲಾವಿದರಾದ ವಿದೂಷಿ , ಉಮಾ ದಿಲೀಪ್ ಮತ್ತು ವಿದ್ಯಾಶ್ರೀ , ಮಂಜುನಾಥ್, ಗೌರಿಶಂಕರ್, ಸಂಜಯ್ ಗಾಂಧಿ , ಪ್ರಕಾಶ್ ಹಾವೇರಿ, ಚಂದ್ರಶೇಖರ್, ಜಗದೀಶ್, ಮಹಾರಾಜ್, ರಾಜೇಶ್ವರಿ ಸಾರಂಗಮಠ, ಗುರುರಾಜ್, ಡಾ.ಕೃಷ್ಣ ಕುಲಾಲ್, ರವಿ ಸಾರಂಗಮಠ, ದಿನೇಶ್ ಕೊಡವೂರು ಅವರುಗಳನ್ನು ಆಯ್ಕೆ ಮಾಡಲಾಗಿದ್ದು ಸರ್ವ ಸದಸ್ಯರ ಮತ್ತು ಮತ್ತು ಸ್ಥಳೀಯ ತಂಡಗಳ ಮಹಾಸಭೆಯನ್ನು ನಂತರ ನಿರ್ಣಯಿಸಿ ಕೈಗೊಂಡು ಜನವರಿ 2025ರಿಂದ ಕಾರ್ಯ ರೂಪಿಸಬೇಕೆಂದು ಸಂಕಲ್ಪ ಮಾಡಿಕೊಂಡಿದ್ದಾರೆ.
ಅವರ ಉನ್ನತ ಕಾರ್ಯಕ್ಕೆ ದೇವರು ಆಶೀರ್ವದಿಸಿ ಅವರ ಇಷ್ಟಾರ್ಥಗಳೆಲ್ಲಾ ಕೈಗೂಡಲಿ ಎಂದು ಹಾರೈಸುವ ತಂಡ.
ನಾವು ಮಾಡುವ ಶ್ರದ್ಧಾ ಕಾರ್ಯ ಎಂದಿಗೂ ವ್ಯರ್ಥವಾಗುವುದಿಲ್ಲ. ಕಲಾರಾಧನೆ ಮತ್ತು ಕಲಾವಿದರಿಗೆ ವೇದಿಕೆ ಕಲ್ಪಿಸುವುದು ನನ್ನ ಗುರಿ ತಮ್ಮೆಲ್ಲ ಆಶೀರ್ವಾದ ಸದಾ ಇರಲಿ.
-ಜಯಶೀಲ್ ಕಲ್ಯಾಣಪುರ C.E.O
9686392308